ನನ್ನಷ್ಟು ನೈತಿಕತೆ ನಿಮಗೆ ಇದ್ಯಾ?: ಎಚ್ಡಿಕೆ ವಾಗ್ದಾಳಿ

| Published : Nov 21 2023, 12:45 AM IST

ನನ್ನಷ್ಟು ನೈತಿಕತೆ ನಿಮಗೆ ಇದ್ಯಾ?: ಎಚ್ಡಿಕೆ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೋ 70 ಯೂನಿಟ್ ಕರೆಂಟ್‌ದು ಚರ್ಚೆ ಮಾಡುತ್ತಿದ್ದೀರಲ್ಲಾ. ಯಾರೋ ಮಾಡಿದ ತಪ್ಪಿಗೆ ನಾನು ನಿಮ್ಮ ತರ ಹೇಳಲಿಲ್ಲ. ಸಾರ್ವಜನಿಕವಾಗಿ ನನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡೆ. ಅದೇನು ದಂಡ ಹಾಕಬೇಕು ಹಾಕಿಕೊಳ್ಳಿ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು

ಯಾವ ಹಗಲು ದರೋಡೆ ಮಾಡಿಲ್ಲ । ಹಣ ವಸೂಲಿಗೆ ಇಟ್ಟುಕೊಂಡಿದ್ದೀರಿ । ಸಿದ್ದರಾಮಯ್ಯಗೆ ಎಚ್‌ಡಿ ಕುಮಾರಸ್ವಾಮಿ ವಾಚಾಮಗೋಚರ ಟೀಕೆಕನ್ನಡಪ್ರಭ ವಾರ್ತೆ ಹಾಸನ

ಯಾವುದೋ 70 ಯೂನಿಟ್ ಕರೆಂಟ್‌ದು ಚರ್ಚೆ ಮಾಡುತ್ತಿದ್ದೀರಲ್ಲಾ. ಯಾರೋ ಮಾಡಿದ ತಪ್ಪಿಗೆ ನಾನು ನಿಮ್ಮ ತರ ಹೇಳಲಿಲ್ಲ. ಸಾರ್ವಜನಿಕವಾಗಿ ನನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡೆ. ಯಾವನೋ‌ ಮಾಡಿದ ತಪ್ಪನ್ನು ನನ್ನ ತಲೆಗೆ ಕಟ್ಕೊಂಡೆ. ಅದೇನು ದಂಡ ಹಾಕಬೇಕು ಹಾಕಿಕೊಳ್ಳಿ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು.

ಚನ್ನರಾಯಪಟ್ಟಣ ತಾಲೂಕಿನಲ್ಲಿ ಸೋಮವಾರ ಧಾರ್ಮಿಕ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಹೇಳಬಹುದಿತ್ತಲ್ಲಾ, ಯಾವನೋ ಮಾಡಿ ಹೋಗಿದ್ದಾನೆ, ನನಗೇನು ಗೊತ್ತು, ಅವನನ್ನ ಕೇಳಿಕೊಳ್ರಿ ಅಂತಾ. ನಾನು ಯಾವ ಹಗಲು ದರೋಡೆ ಕೆಲಸ ಮಾಡಿಲ್ಲ. ಹಗಲು ದರೋಡೆ ಕೆಲಸ‌‌‌‌‌ ಮಾಡ್ತಾ ಇರೋರು ನೀವು. ಟ್ರಾನ್ಸಫರ್ ಆದಿಯಾಗಿ ಎಲ್ಲದರಲ್ಲೂ ಹಗಲು ದರೋಡೆ ಮಾಡ್ತಾ ಇರೋರು ನೀವು. ಇಡೀ ರಾಜ್ಯವನ್ನು ಇಂತಹ ದುಸ್ಥಿತಿಗೆ ತಳ್ತಾ ಇರೋರು ನೀವುಗಳು. ನಿಮಗೆ ಏನಾದ್ರೂ ನೈತಿಕತೆ ಇದ್ಯಾ ಅನ್ನೋದನ್ನು ಹೇಳಬೇಕು’ ಎಂದು ಕಿಡಿಕಾರಿದರು.

‘ನಿಮ್ಮ ಮಗನಿಗೆ ಹೆಚ್ಚುವರಿ ಸಂವಿಧಾನಿಕ ಅಧಿಕಾರ ಕೊಟ್ಟಿದ್ದೀರಲ್ಲಾ, ಯಾಕೆ ಕೊಟ್ಟಿದ್ದೀರಿ ? ನಮ್ಮ ತಂದೆ ಪ್ರಧಾನಮಂತ್ರಿ ಇದ್ದಾಗ, ಅವರು ಮುಖ್ಯಮಂತ್ರಿ ಇದ್ದಾಗ ಈ ಅಧಿಕಾರವನ್ನು ನಾನು ತೆಗೆದುಕೊಳ್ಳಲಿಕ್ಕೆ ಆಗಿತ್ತಾ. ನಿಮ್ಮ ಮಗನ ಕಲೆಕ್ಷನ್‌ ಹಣ ಅದು. ದುಡ್ಡನ್ನು ನೇರವಾಗಿ ನೀವು ತಗೊಳೋಕೆ ಆಗುತ್ತಾ. ಆಗ 45 ಕೋಟಿ ರು. ಹಣ ಸಿಕ್ಕಿತಲ್ಲಾ ಆ ಹಣ ಎಲ್ಲಿಯದು. ಸಂತೋಷ ಮನೆ ರೇಡ್ ಆಗಿ ಸೀಝ್ ಆಯ್ತಲ್ಲ ಅದು ಅವನು ಸಂಪಾದನೆ ಮಾಡಿದ ಹಣವಾ? ನಿಮ್ಮ ಮಗನ ಕಲೆಕ್ಷನ್ ತಾನೆ ಅದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

‘ಸುಳ್ಳು ಹೇಳುವಂತಹದ್ದು. ನನ್ನ ಜಾಯಮಾನದಲ್ಲೇ ಇಲ್ಲ. ಹಲವಾರು ದಾಖಲೆಗಳನ್ನು ಹಲವಾರು ಭಾರಿ ಕೊಟ್ಟಿದ್ದೇನೆ. ವಿರೋಧ ಪಕ್ಷದ ನಾಯಕರಾಗಿದ್ದಾಗ ನೀವು ಎಂದಾದರೂ ಒಂದು ಪ್ರಕರಣದಲ್ಲಿ ಒಂದೇ ಒಂದು ದಾಖಲೆ ಸಮೇತ ಚರ್ಚೆ ಮಾಡಿದ್ದೀರಾ. ಯಡಿಯೂರಪ್ಪನವರ ಮಗನ ಮೇಲೆ ಮಾತಾಡಿದ್ರಲ್ಲ, ವಿರೋಧ ಪಕ್ಷದನಾಯಕನಾಗಿ ಯಡಿಯೂರಪ್ಪನವರೇ ನಿಮ್ಮ ಮಗ ಡಿಫ್ಯಾಕ್ಟರ್ ಚೀಫ್ ಮಿನಿಸ್ಟರ್. 25 ಪರ್ಸೆಂಟ್ ಕಮಿಷನ್ ತಗೋತಾರೆ ಅಂತಾ, ಇದ್ಯಾವುದರಲ್ಲಿ ಒಂದಕ್ಕಾದರೂ ದಾಖಲೆ ಕೊಡಿ, ಇಲ್ಲಿ‌ ನಿಮ್ಮದು ಹಳಸಿಕೊಂಡು ಕೂತಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಪ್ರತಿನಿತ್ಯ ವರ್ಗಾವಣೆ ಮಾಡಿಕೊಂಡು ಹಣ ಸಂಗ್ರಹ ಮಾಡಿಕೊಂಡು ಇದ್ದೇ ಅಂತಾ ಹೇಳ್ತೀರಲ್ಲಾ. ಅಂದು ನನ್ನ ಜೊತೆಯಲ್ಲಿ ನಿಮ್ಮವರೇ 23, 24 ಮಂತ್ರಿಗಳು ಇದ್ರಲ್ಲಾ. ಯಾವನಾದ್ರೂ ದುಡ್ಡು ಸಂಗ್ರಹ ಮಾಡಿಕೊಟ್ಟವನು ಹೇಳಬೇಕಿತ್ತು ಅಲ್ವಾ. ನಾನು ಮುಖ್ಯಮಂತ್ರಿಯಾಗಿ 14 ತಿಂಗಳು ನಿಮ್ಮ ಜೊತೆಯಲ್ಲಿ ಇದ್ದೆನಲ್ಲಾ. ಯಾರ್ಯಾರು ಎಷ್ಟೆಷ್ಟು ಕೊಟ್ರಪ್ಪಾ ಸಂಗ್ರಹ ಮಾಡಿ. ದಿನಾ ಅದೇ ಕೆಲಸ ಮಾಡ್ತಿದ್ದೆ ಅಂತಾ ಹೇಳ್ತೀರಲ್ಲಾ. ಚರ್ಚೆ ಮಾಡೋಣ, ಬಹಳ ವಿಷಯಗಳಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಣ ವಸೂಲಿಗೆ ಕೆಲವರನ್ನು ಇಟ್ಕೊಡಿದ್ದಾರೆ

‘ಪಾಪ ಮುಖ್ಯಮಂತ್ರಿಗಳು ನಾನೇದ್ರೂ ವರ್ಗಾವಣೆಯಲ್ಲಿ ಎಲ್ಲಾದರೂ ಹಣ ತಗೊಂಡಿರೋದು ಸಾಬೀತು ಮಾಡಿಬಿಟ್ರೆ ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಅಂತಾ ಹೇಳಿದ್ದಾರಲ್ಲಾ. ಹಣ ವಸೂಲಿ ಮಾಡೋದನ್ನು ಅವರ ಮಗನಿಗೆ ಬಿಟ್ಟಿರೋದು ಯಾತಕ್ಕೆ. ಅವರ ಕಚೇರಿಯೊಳಗೆ ಅಧಿಕಾರಿಗಳನ್ನು ಯಾಕೆ ಇಟ್ಕೊಂಡಿದ್ದೀರಾ ಹೇಳಿ. ಯಾವ ಕೆಲಸಕ್ಕೆ ಇಟ್ಕೊಂಡಿದ್ದೀರಾ ಹೇಳಿ. ನೀವು ದುಡ್ಡು ಮುಟ್ಟಲ್ಲ, ನಿಮ್ಮ ಹಿಂದೆ ಮುಂದೆ ಇಟ್ಕೊಂಡಿದ್ದೀರಲ್ಲಾ ಅವರನ್ನು ಬಿಟ್ಟಿದ್ದೀರಾ ಕಲೆಕ್ಷನ್‌ಗೆ. ಹೀವು ಹೇಳೋದು ಸತ್ಯನೇ, ನೀವು ದುಡ್ಡು ಮುಟ್ಟಿಲ್ಲ. ದುಡ್ಡನ್ನು ಸಂಗ್ರಹ ಮಾಡೋದಕ್ಕೆ ಬಿಟ್ಟಿದ್ದೀರಲ್ಲಾ. ಅದನ್ನು ಯಾತಕ್ಕೆ ಇಟ್ಕೊಂಡಿದ್ದೀರಾ?’ ಎಂದು ಪ್ರಶ್ನೆ ಮಾಡಿದರು.

ಹಾವು ಬಿಡೋ ಟೈಂ ಬರುತ್ತೆ‘ಪೆನ್‌ಡ್ರೈವ್ ತೋರಿಸಿದಾಗ ಎಷ್ಟು ಜನ ಮಂತ್ರಿಗಳು ನನಗೆ ಫೋನ್ ಮಾಡಿದ್ದರು. ಎಷ್ಟು ಜನ ನನ್ನ ಹತ್ತಿರ ಅಣ್ಣಾ, ಅಣ್ಣಾ ಅಂತ ಬಂದರು. ಅಣ್ಣ ನಿನ್ನ ಋಣದಲ್ಲಿದ್ದೇವೆ ನಿಮ್ಮಿಂದ ಬೆಳೆದಿದ್ದೇವೆ ಅಣ್ಣಾ ಅಂತ ಯಾಕೆ ಹೇಳಿದ್ರು? ಪೆನ್‌ಡ್ರೈವ್‌ನಲ್ಲಿ ನಂದು ಇದಿಯಾ ಅಂತ ನಿದ್ದೆಗೆಟ್ಟರಲ್ಲಾ, ಹಾವು ಬಿಡದೆ ಇಷ್ಟೆಲ್ಲಾ ನಿದ್ದೆಗೆಟ್ಟಿದ್ದೀರಿ. ನನ್ನ ಬಳಿ ಹಾವೇ ಇದೆ ಅಂದಿದ್ದಕ್ಕೆ ಇಷ್ಟು ಬೆಚ್ಚಿ ಹೋಗಿದ್ದೀರಲ್ಲಾ, ಹಾವು ಬಿಟ್ಟರೆ ಏನಾಗ್ರೀರಾ ನೀವು. ಬಿಡುಗಡೆ ಮಾಡುವವರೆಗೆ ಕಾಯಿರಿ. ಟೈಂ ಬರುತ್ತೆ ರಿಲೀಸ್ ಮಾಡ್ತಿನಿ’ ಎಂದು ಕಾಂಗ್ರೆಸ್‌ ಮುಖಂಡರಿಗೆ ಎಚ್ಚರಿಕೆ ನೀಡಿದರು.