ನಿನ್ ಮೈಯಲ್ಲಿ ಎಲ್ಲೂ ಕಪ್ಪಗೆ ಇಲ್ವೇ?: ಜಮೀರ್‌ಗೆ ಶಿವಶಂಕರ ಪ್ರಶ್ನೆ

| Published : Nov 14 2024, 12:47 AM IST

ನಿನ್ ಮೈಯಲ್ಲಿ ಎಲ್ಲೂ ಕಪ್ಪಗೆ ಇಲ್ವೇ?: ಜಮೀರ್‌ಗೆ ಶಿವಶಂಕರ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮ ಮೈಯನ್ನು ಬಿಚ್ಚಿದರೆ ನಿಮ್ಮದು ಎಲ್ಲಿಯೂ ಕರ್ರಗೆ (ಕಪ್ಪಾಗಿ) ಇಲ್ಲವೇ ಇಲ್ಲವಾ? ಅವರವರ ಬಣ್ಣ ಅವರಿಗೆ ದೊಡ್ಡದು. ನಮ್ಮ ಬಣ್ಣ ನಮಗೆ, ನಿನ್ನ ಬಣ್ಣ ನಿನಗೆ ಚನ್ನ ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ದಾವಣಗೆರೆಯಲ್ಲಿ ಹರಿಹಾಯ್ದಿದ್ದಾರೆ.

- ಎಚ್‌ಡಿಕೆ ಬಣ್ಣದ ಬಗ್ಗೆ ವ್ಯಂಗ್ಯವಾಡಿದ ವಕ್ಫ್ ಸಚಿವರ ವರ್ತನೆಗೆ ಆಕ್ರೋಶ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಿಮ್ಮ ಮೈಯನ್ನು ಬಿಚ್ಚಿದರೆ ನಿಮ್ಮದು ಎಲ್ಲಿಯೂ ಕರ್ರಗೆ (ಕಪ್ಪಾಗಿ) ಇಲ್ಲವೇ ಇಲ್ಲವಾ? ಅವರವರ ಬಣ್ಣ ಅವರಿಗೆ ದೊಡ್ಡದು. ನಮ್ಮ ಬಣ್ಣ ನಮಗೆ, ನಿನ್ನ ಬಣ್ಣ ನಿನಗೆ ಚನ್ನ ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹರಿಹಾಯ್ದಿದ್ದಾರೆ.

ಇಲ್ಲಿನ ಪಿ.ಜೆ. ಬಡಾವಣೆ ವಕ್ಫ್ ಆಸ್ತಿಯೆಂದು ಕಬಳಿಸಲು ಹೊರಟ ಹಿನ್ನೆಲೆ ತಮ್ಮ ನಿವಾಸದ ಬಳಿ ವಿಪಕ್ಷ ನಾಯಕ ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಇತರೆ ನಾಯಕರು ಮಂಗಳವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಮೀರ ಅಹಮ್ಮದ್ ಖಾನ್ ನಮ್ಮ ನಾಯಕರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದು ಸರಿಯಲ್ಲ. ನಾಲಿಗೆಯು ಸಂಸ್ಕೃತಿ.ನ್ನು ತೋರಿಸುತ್ತದೆ. ಆತ್ಮೀಯತೆಯಿಂದ ನಾಲ್ಕು ಗೋಡೆ ಮಧ್ಯೆ ನೀನು ಕರಿಯಣ್ಣ ಅಂತಾನೇ ಅನ್ನು, ಅವರು (ಕುಮಾರಸ್ವಾಮಿ) ನಿನಗೆ ಕುಳ್ಳಣ್ಣ ಅಂತಾನೇ ಅನ್ನಲಿ. ಆದರೆ, ಸಾರ್ವಜನಿಕವಾಗಿ ರಾಜಕೀಯ ಪಟುವಾಗಿ ನಾಲಿಗೆ ಮೇಲೆ ಹಿಡಿತವಿರಲಿ. ಹೇಗೆ ಮಾತನಾಡಬೇಕೆಂಬ ಅರಿವಿರಲಿ ಎಂದು ಹೇಳಿದರು.

- - -

ಟಾಪ್‌ ಕೋಟ್‌ 1940ರಲ್ಲಿ ಆಗಿನ ನಗರಸಭೆಯಿಂದ ಪಿಜೆ ಬಡಾವಣೆ ನಿರ್ಮಿಸಿ, ಜನರಿಗೆ ಹಂಚಿಕೆ ಮಾಡಿರುವ ಪ್ರದೇಶ ಇದಾಗಿದೆ. ವಕ್ಫ್ ಇಲಾಖೆ ಅಧಿಕಾರಿಗಳು ಅರ್ಜಿಯನ್ನೇ ಹಾಕಿಲ್ಲ ಎನ್ನುತ್ತಾರೆ. ಹಾಗಿದ್ದರೆ ಪಿಜೆ ಬಡಾವಣೆಯ 4.13 ಎಕರೆ ಪ್ರದೇಶ 2015ರಲ್ಲೇ ವಕ್ಫ್ ಆಸ್ತಿಯಾಗಿದ್ದು ಹೇಗೆ? ದಾವಣಗೆರೆ ಪಿ.ಜೆ. ಬಡಾವಣೆ ವಕ್ಫ್ ಆಸ್ತಿ ಮಾಡಲು ಹೊರಟ ಬಗ್ಗೆ ನನ್ನ ಗಮನಕ್ಕೆ ಬಂದ ತಕ್ಷಣ ತಾಲೂಕು ಕಚೇರಿಗೆ ಕರೆ ಮಾಡಿ, ಸಂಪರ್ಕಿಲು ಯತ್ನಿಸಿದರೆ ಇಲ್ಲಿನ ತಹಸೀಲ್ದಾರ್ ಕರೆಯನ್ನೇ ಸ್ವೀಕರಿಸುವುದಿಲ್ಲ

- ಎಚ್.ಎಸ್.ಶಿವಶಂಕರ್, ಜೆಡಿಎಸ್ ನಾಯಕ

- - -

-12ಕೆಡಿವಿಜಿ17:

ಎಚ್.ಎಸ್.ಶಿವಶಂಕರ