ಅನುಮತಿ ಪಡೆದೆ ನಮಾಜ್ ಮಾಡುತ್ತಾರಾ: ಕೆಎನ್‌ ರಾಜಣ್ಣ

| Published : Oct 19 2025, 01:00 AM IST

ಸಾರಾಂಶ

ಸರ್ಕಾರಿ ಜಾಗದಲ್ಲಿ ಆರ್.ಎಸ್.ಎಸ್ ಆಗಲಿ ಅಥವಾ ಬೇರೆ ಯಾವುದೇ ಸಂಘಟನೆಯಾಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಅಂತಾ ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಅನ್ನುವುದನ್ನು ನೋಡೋಣ ಎಂದರು.

ಕನ್ನಡಪ್ರಭ ವಾರ್ತೆ ತುಮಕೂರುಈದ್ಗಾ ಮೈದಾನ ತುಂಬಿ ರಸ್ತೆಯಲ್ಲಿ ನಮಾಜು ಮಾಡುತ್ತಾರೆ. ಅವರೆಲ್ಲಾ ಅನುಮತಿ ತೊಗೊಂಡೆ ನಮಾಜ್ ಮಾಡುತ್ತಾರಾ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರಶ್ನಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರ್ಮಿಷನ್ ಕೊಡಿ ಅಂತಾ ಅವರು ಬರುವುದಿಲ್ಲ, ಅಥವಾ ಪರ್ಮಿಷನ್ ತೆಗೆದುಕೊಳ್ಳಿ ಅಂತ ನಾವು ಕೇಳುವುದಿಲ್ಲ. ಹಾಗಾಗಿ ಜಾರಿ ಮಾ ಡಲು ಸಾಧ್ಯವಾಗುವಂತಹ ಕಾನೂನನ್ನು ಮಾತ್ರ ತರಬೇಕು. ಅದನ್ನು ಬಿಟ್ಟು ಜಾರಿ ಮಾಡಲಾಗದ ಕಾನೂನು ತಂದರೆ ಪುಸ್ತಕದಲ್ಲಿ ಇರಬೇಕಷ್ಟೆ ಎಂದಿದ್ದಾರೆ.ಸರ್ಕಾರಿ ಜಾಗದಲ್ಲಿ ಆರ್.ಎಸ್.ಎಸ್ ಆಗಲಿ ಅಥವಾ ಬೇರೆ ಯಾವುದೇ ಸಂಘಟನೆಯಾಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಅಂತಾ ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಅನ್ನುವುದನ್ನು ನೋಡೋಣ ಎಂದರು.ಯತೀಂದ್ರ ಯಾಕೆ ನಾಯಕ ಆಗಬಾರದು...ಬಳಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಣ್ಣ ಅವರು ಯತೀಂದ್ರ ಸಿದ್ದರಾಮಯ್ಯ ಯಾಕೆ ನಾಯಕ ಆಗಬಾರದು ಎಂದು ಪ್ರಶ್ನಿಸಿದ್ದಾರೆ. ದೇವೇಗೌಡರಿಗೆ ಕುಮಾರಸ್ವಾಮಿ ಉತ್ತರಾಧಿಕಾರಿಯಾಗಬಹುದು. ಸಿದ್ದರಾಮಯ್ಯಗೆ ಯತೀಂದ್ರ ಉತ್ತರಾಧಿಕಾರಿಯಾಗುವುದರಲ್ಲಿ ಏನು ತೊಂದರೆ ಎಂದು ಪ್ರಶ್ನಿಸಿದರು.ಮುಂದಿನ ದಿನಗಳಲ್ಲಿ ಅವರ ನಾಯಕತ್ವವನ್ನು ಇವರು ವಹಿಸಿಕೊಂಡು ನಡೆಸಬೇಕು. ಮುಖ್ಯಮಂತ್ರಿಯಾದರೆ ನಾಯಕ ಅಂತಲ್ಲಾ ಎಂದ ಅವರು ಎರಡು ಬಾರಿ ಕುಮಾರಸ್ವಾಮಿ ಸಿಎಂ ಆಗಿ ದೊಡ್ಡ ಲೇಡರ್ ಆಗಿಬಿಟ್ರಾ ಎಂದರು. ನಾಯಕತ್ವ ಬೆಳೆಸಿಕೊಂಡು ಆ ವರ್ಗಗಳಿಗೆ ನಾಯಕತ್ವ ಕೊಡಲಿ ಎಂಬುದು ಆಸೆ ಎಂದರು.ಸಿದ್ದರಾಮಯ್ಯ ಬಳಿಕ ಅಹಿಂದಾ ನಾಯಕತ್ವವನ್ನು ಯತೀಂದ್ರ ವಹಿಸಿಕೊಳ್ಳಬೇಕೆಂಬುದು ನನ್ನ ಮನದಾಳದ ಮಾತು.. ಈ ರಾಜ್ಯದ ಜನರ ಆಶಯ.ಅದು ನಾನೊಬ್ಬ ಹೇಳುವುದಲ್ಲ ಎಂದರು.ನಾಯಕತ್ವ ವಹಿಸಿ ಮುಂದೊಂದು ದಿನ ಸಿಎಂ ಆಗಲಿ. ಯಾಕಾಗಬಾರದು ಎಂದ ಅವರು ದೇವೇಗೌಡರು ಪ್ರಧಾನಿ, ಮುಖ್ಯಮಂತ್ರಿ ಆಗುವುದಕ್ಕೆ ಅವರ ಹೋರಾಟ ಇದೆ. ಕುಮಾರಸ್ವಾಮಿಗೆ ಏನಿದೆ ಎಂದ ಅವರು ಅವರಪ್ಪನ ಹೆಸರು ಅಷ್ಟೆ ಬಂಡವಾಳ ಎಂದರು.