ಅಲೆಮಾರಿ ಸೋಮಣ್ಣ ಬೇಕೋ ? ಸಂಸದೀಯ ಪಟು ಮುದ್ದಹನುಮೇಗೌಡ ಬೇಕೋ?: ಗೃಹ ಸಚಿವ ಪರಮೇಶ್ವರ್‌ ಪ್ರಶ್ನೆ

| Published : Mar 24 2024, 01:33 AM IST

ಅಲೆಮಾರಿ ಸೋಮಣ್ಣ ಬೇಕೋ ? ಸಂಸದೀಯ ಪಟು ಮುದ್ದಹನುಮೇಗೌಡ ಬೇಕೋ?: ಗೃಹ ಸಚಿವ ಪರಮೇಶ್ವರ್‌ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಲೆಮಾರಿಯಂತಿರುವ ಬಿಜೆಪಿ ಅಭ್ಯರ್ಥಿ ಸೋಮಣ್ಣ ಬೇಕಾ ? ಅಥವಾ ಅತ್ಯುತ್ತುಮ ಸಂಸದೀಯ ಪಟು ಎಂಬ ಹೆಗ್ಗಳಿಕೆ ಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಬೇಕಾ ಎಂಬುದನ್ನು ನೀವೇ ನಿರ್ಧರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತದಾರರಿಗೆ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ ಅಲೆಮಾರಿಯಂತಿರುವ ಬಿಜೆಪಿ ಅಭ್ಯರ್ಥಿ ಸೋಮಣ್ಣ ಬೇಕಾ ? ಅಥವಾ ಅತ್ಯುತ್ತುಮ ಸಂಸದೀಯ ಪಟು ಎಂಬ ಹೆಗ್ಗಳಿಕೆ ಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಬೇಕಾ ಎಂಬುದನ್ನು ನೀವೇ ನಿರ್ಧರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತದಾರರಿಗೆ ಪ್ರಶ್ನಿಸಿದ್ದಾರೆ.

ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಅಭ್ಯರ್ಥಿಯಾಗಿರುವ ಸೋಮಣ್ಣನವರದ್ದು ಹಲವಾರು ಕ್ಷೇತ್ರಗಳ ದರ್ಶನವಾಗಿದೆ. ಎಲ್ಲಾ ಕಡೆಯೂ ಅವರಿಗೆ ಜನರು ಸೋಲಿನ ರುಚಿ ತೋರಿಸಿ ದ್ದಾರೆ. ಹಾಗೆಯೇ ಇಲ್ಲೂ ಮುದ್ದಹನುಮೇಗೌಡರನ್ನು ಗೆಲ್ಲಿಸುವ ಮೂಲಕ ಸೋಮಣ್ಣನವರಿಗೆ ಸೋಲಿನ ರುಚಿ ತೋರಿಸಿ ಎಂದರು.

ಮೋದಿ ಮಹಾನ್‌ ಸುಳ್ಳುಗಾರ:

ಬಿಜೆಪಿಯವರು ಮೋದಿಯನ್ನು ನೆಚ್ಚಿಕೊಂಡಿದ್ದಾರೆ. ಮೋದಿ ಮಹಾನ್ ಸುಳ್ಳುಗಾರ. ಮೋದಿ ತಮ್ಮ ಗೆಲುವಿಗೆ ಮಾಡಬಾರದ ಕೆಲಸಗಳನ್ನೆಲ್ಲಾ ಮಾಡುತ್ತಾರೆ. ತಮ್ಮ ವಿರೋಧಿಗಳನ್ನು ಇಡಿ, ಸಿಬಿಐ ಅದೂ ಇದು ಅಂತ ಬೆದರಿಸಿ ಅವರನ್ನು ಜೈಲಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಅವರನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ಅವರನ್ನು ಜೈಲಿಗೆ ಕಳಿಸಿದ್ದಾರೆ. ಇವೆಲ್ಲವನ್ನೂ ಜನರು ನೋಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಕ್ಕ ಬುದ್ಧಿ ಕಲಿಸಲಿದ್ದಾರೆಂದು ಪರಮೇಶ್ವರ್ ಹೇಳಿದರು.ಕಳೆದ ಬಾರಿ ಕಾಂಗ್ರೆಸ್ ಗೆ ಸೀಟು ಹಂಚಿಕೆಯಲ್ಲಿ ಎಡವಟ್ಟಾಗಿ ಕಾಂಗ್ರೆಸ್ ಸ್ಥಾನ ಕೈ ತಪ್ಪಿತ್ತು. ಆದರೆ ಈ ಬಾರಿ ಇದೊಂದು ಸವಾಲೆಂದು ಸ್ವೀಕರಿಸಿ ಕಾಂಗ್ರೆಸ್ ಕಾರ್ಯಕರ್ತರು ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ನ ಪಾಲಾಗುವಂತೆ ಮಾಡಬೇಕೆಂದು ಎಂದರು.

ಸಂವಿಧಾನ ಬದಲು ಮಾಡುವಾಗ ನಾವೇನು ಕಡ್ಲೇಜಾಯಿ ತಿಂತಿವಾ?

ಬಿಜೆಪಿಯವರು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತೇವೆಂದು ಸಂಸದರೊಬ್ಬರು ಹೇಳಿದ್ದಾರೆ. ಆದರೆ ಡಾ.ಅಂಬೇಡ್ಕರ್ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಎಲ್ಲರೂ ಅವರು ನೀಡಿದ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡು ತ್ತಿದ್ದಾರೆ. ಅಂತಹ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟರೆ ನಾವೇನು ಕಡಲೇಕಾಯಿ ತಿಂತಾ ಕೂರ್‍ತಿತೀವಾ? ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.

ಸರ್ವಾಧಿಕಾರಿ - ಮೋದಿಯವರದ್ದು ಸರ್ವಾಧಿಕಾರಿ ಧೋರಣೆ. ರಾಜ್ಯದ ಹಿತಕ್ಕೆ ಮಾರಕವಾಗಿದ್ದಾರೆ. ಅವರು ಎತ್ತಿನಹೊಳೆ ಯೋಜನೆಗೆ ಅಡ್ಡಗಾ ಲು ಹಾಕಿದ್ದಾರೆ. ಮೇಕೆದಾಟು ಯೋಜನೆಗೆ ಕಿತಾಪತಿ ಮಾಡಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಂದಾಯ ಮಾಡಿದರೂ ಸಹ ನಮಗೆ ಬರಬೇಕಾದ ಪಾಲನ್ನು ನೀಡುತ್ತಿಲ್ಲ. ಭೀಕರ ಬರಗಾಲ ಎದುರುತ್ತಿರುವ ರಾಜ್ಯದಲ್ಲಿ ಸುಮಾರು ೩೬ ಸಾವಿರ ಕೋಟಿ ರು.ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಕನಿಷ್ಠ ೧೮ ಸಾವಿರ ಕೋಟಿಯನ್ನಾದರೂ ಕೊಡಿ ಎಂದು ಕೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ಒಂದು ನಯಾಪೈಸೆ ಸಹ ನೀಡಿಲ್ಲ ಎಂದರು.

ಮಣ್ಣು ತಿನ್ನುತ್ತಿದ್ದಾರಾ?.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ರಾಜ್ಯದಿಂದ ೨೫ ಸಂಸದರು ಬಿಜೆಪಿಯವರಿದ್ದಾರೆ. ಯಾರೊಬ್ಬರೂ ಸಹ ರಾಜ್ಯದ ಸ್ಥಿತಿಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಇವರು ಸಂಸತ್ತಿಗೆ ಏಕೆ ಹೋಗುತ್ತಿದ್ದಾರೆ. ಅಲ್ಲಿ ಮಣ್ಣು ತಿನ್ನಕ್ಕೆ ಹೋಗುತ್ತಿದ್ದಾರಾ?. ನಮ್ಮ ಜಿಲ್ಲೆಯ ಬಿಜೆಪಿ ಸಂಸದರಾಗಿದ್ದ ಜಿ.ಎಸ್. ಬಸವರಾಜು ಅವರು ಜಿಲ್ಲೆಗೆ ಏನೇನೂ ಕೆಲಸ ಮಾಡಿಲ್ಲ. ಅಭಿವೃದ್ಧಿ ಶೂನ್ಯ ಎಂದು ಕಿಡಿಕಾರಿದರು.

ಚೆಲ್ಲಾಟ -

ಈ ಬಿಜೆಪಿಯವರದ್ದು ಬರೀ ಸಮಾಜ ಒಡೆಯುವ ಕೆಲಸ. ಚುನಾವಣೆ ಬರುವ ವೇಳೆ ಜಾತಿ, ಧರ್ಮ, ದೇವರು ಎಂದೆಲ್ಲಾ ಜನರ ಭಾವನೆ ಯೊಂದಿಗೆ ಚೆಲ್ಲಾಟವಾಡುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನಾದರೂ ಮಾತನಾಡಿದರೆ ಅವರಿಗೆ ದೇಶದ್ರೋಹಿ ಎಂಬ ಪಟ್ಟ ಕಟ್ಟು ತ್ತಾರೆ. ಆದರೆ ಬಿಜೆಪಿಯವರು ದೇಶವನ್ನೇ ಛಿದ್ರ ಮಾಡುವಂತಹ ಮಾತುಗಳನ್ನಾಡುತ್ತಾರೆ ಅವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಗುಬ್ಬಿ ಶ್ರೀನಿವಾಸ್, ತಿಪಟೂರು ಷಡಕ್ಷರಿ, ಪಾವಗಡ ವೆಂಕಟೇಶ್, ಕೆಪಿಸಿಸಿ ವಕ್ತಾರರಾದ ಮುರುಳೀಧರ್ ಹಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಪ್ರಚಾರ ಸಮಿತಿ ಅಧ್ಯಕ್ಷರಾದ ರಾಯಸಂದ್ರ ರವಿಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ರಾಜಣ್ಣ, ಮುಖಂಡರಾದ ನಿಕೇತ್ ರಾಜ್ ಮೌರ್ಯ, ಶಶಿ ಹುಲಿಕುಂಟೆ, ಪಿ.ಆರ್.ರಮೇಶ್, ರಾಮಕೃಷ್ಣ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಕೋಳಾಲ ನಾಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ಬೆಸ್ಕಾಂನ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್, ಮುತ್ತಗದಹಳ್ಳಿ ಕೆಂಪರಾಜ್, ಕೆ.ಬಿ.ಹನುಮಂತಯ್ಯ, ಲಕ್ಷ್ಮೀದೇವಮ್ಮ, ಫೋಟೋ ಮಹೇಂದ್ರ, ನಂಜುಂಡಯ್ಯ ಸೇರಿದಂತೆ ಹಲವಾರು ಮುಖಂಡರು ಇದ್ದರು.