ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಎರಡು ಬೈಕ್‌ಗಳಿಗೆ ರಾತ್ರಿ ವೇಳೆ ಬೆಂಕಿಹಚ್ಚಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದ ಪ್ರಕರಣವನ್ನು ಕೋಳಾಲ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು ವೈದ್ಯರೊಬ್ಬರನ್ನು ಬಂಧಿಸಲಾಗಿದೆ.

ಕನ್ನಡಪ್ರಭವಾರ್ತೆ ಕೊರಟಗೆರೆ

ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಎರಡು ಬೈಕ್‌ಗಳಿಗೆ ರಾತ್ರಿ ವೇಳೆ ಬೆಂಕಿಹಚ್ಚಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದ ಪ್ರಕರಣವನ್ನು ಕೋಳಾಲ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು ವೈದ್ಯರೊಬ್ಬರನ್ನು ಬಂಧಿಸಲಾಗಿದೆ.

ತಾಲೂಕು ಕೋಳಾಲ ಗ್ರಾಮದಲ್ಲಿ ಕೆಸಿಎನ್ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ವಿರುಪಾಕ್ಷ ಎನ್ನುವವರ ಮನೆ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಎರಡು ಬೈಕುಗಳಿಗೆ ಕಳೆದ ೧೧ರಂದು ಶನಿವಾರ ತಡರಾತ್ರಿ ಬೆಂಕಿ ಹಚ್ಚಲಾಗಿತ್ತು. ತುಮಕೂರು ಎಸ್ಪಿ ಆಶೋಕ್ ಅವರ ಆದೇಶ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಹಾಗೂ ಸಿಪಿಐ ಅನಿಲ್ ಅವರ ಮಾರ್ಗದರ್ಶದಲ್ಲಿ ಕೋಳಾಲ ಪಿಎಸೈ ಅಭೀಷೇಕ್ ಅವರ ತಂಡ ಪರಾರಿಯಾಗಿದ್ದ ಕಿಡಿಗೇಡಿ ವೈದ್ಯ ಎಚ್.ಆರ್.ನಾಗಭೂಷಣ್ ಎಂಬುವರನ್ನು ಬಂಧಿಸುವಲ್ಲಿ ಕೋಳಾಲ ಪೊಲೀಸರು ಯಶಸ್ವಿಯಾಗಿ ಅರೋಪಿಯನ್ನು ಜೈಲಿಗಟ್ಟಿದ್ದಾರೆ.

ವಾಹನಗಳಿಗೆ ಬೆಂಕಿ ಹಚ್ಚಲು ಹಳೇ ವೈಷಮ್ಯವೇ ಕಾರಣವಾಗಿ ಈ ಕೃತ್ಯ ನಡೆಸಿದ್ದಾನೆ. ಕೋಳಾಲದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದ ಮಾಲೀಕನಾಗಿರುವ ವೈದ್ಯ ಡಾ.ನಾಗಭೂಷಣ್ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿ ಕುಣಿಗಲ್‌ನಲ್ಲಿ ಕ್ಲಿನಿಕ್ ಇಟ್ಟು ಕೊಂಡಿದ್ದಾನೆ. ತುಮಕೂರಿನಲ್ಲಿ ಪೆಟ್ರೋಲ್ ಖರೀದಿಸಿ ತಂದು ಗುರುತು ಕಾಣದಂತೆ ಮುಸುಕು ಹಾಕಿಕೊಂಡು ತಡರಾತ್ರಿ ಕಾರಿನ ಮೇಲೆ ಮತ್ತು ಬೈಕ್‌ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಪರಾರಿಯಾಗಿದ್ದ. ಸಿಸಿ ಕ್ಯಾಮೇರಾ ದೃಶ್ಯಗಳ ಆಧಾರಿಸಿ ವೈದ್ಯ ನಾಗಭೂಷಣ್ ನನ್ನ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳ ಪಡಿಸಿದ್ದಾರೆ.