ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ವೈದ್ಯಕೀಯ ದಿನವನ್ನು ಪ್ರತಿ ವರ್ಷ ಜುಲೈ ರಂದು ಗುರುತಿಸಿ ವೈದ್ಯರನ್ನು ಸತ್ಕರಿಸುವುದರಲ್ಲಿ ಬಚ್ಪನ್ ಶಾಲೆ ಮೊದಲನೆಯದಾಗಿದೆ ಎಂದು ಚಿಕ್ಕೋಡಿ ಐಎಂಎ ಅಧ್ಯಕ್ಷ ಡಾ.ದರ್ಶನ ಪೂಜಾರಿ ಹೇಳಿದರು.ಸಹಾರ ಇಂಟರನ್ಯಾಷನಲ್ ಬಚ್ಪನ್ ಶಾಲೆಯಲ್ಲಿ ಆಯೋಜಿಸಿದ್ದ ವೈದ್ಯಕೀಯ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ಬರುವ ದಿನದಲ್ಲಿ ಈ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಚಿಕಿತ್ಸೆ ಶಿಬಿರವನ್ನು ಏರ್ಪಡಿಸುವಲಾಗುವುದು ಎಂದರು.ಚಿಕ್ಕೋಡಿಯ ವೈದ್ಯ ಡಾ.ಸುಧೀರ ಪಾಟೀಲ, ಡಾ.ರಾಜೇಂದ್ರ ಸಲಗರೆ, ಡಾ.ಪದ್ಮರಾಜ ಪಾಟೀಲ, ಡಾ.ಜಯಲಕ್ಷ್ಮಿ ಸಲಗರೆ ಹಾಗೂ ಡಾ.ಚಿದಾನಂದ ಪಾಟೀಲ ಉಪಸ್ಥಿತರಿದ್ದರು.ಶಾಲೆಯ ಮಕ್ಕಳು ವಿವಿಧ ರೀತಿಯ ಮನೋರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತಿಥಿಗಳನ್ನು ಮನರಂಜಿಸಿದರು. ರೋಟರಿ ಸಂಸ್ಥೆ ಚಿಕ್ಕೋಡಿಯ ನೂತನ ಅಧ್ಯಕ್ಷ ಶಿರೀಷ್ ಮಹೇತಾ, ಕಾರ್ಯದರ್ಶಿ ಶ್ರೀಧರ್ ಗಜ್ಜನ್ನವರ ಹಾಗೂ ವೈದ್ಯರನ್ನು ಸತ್ಕರಿಸಿ ಗೌರವಿಸಿದರು.ವೈದ್ಯರು ಆರೋಗ್ಯಕರ ಸಮಾಜವನ್ನು ಕಟ್ಟಲು ದೊಡ್ಡ ಕಾಣಿಕೆಯನ್ನು ನೀಡುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ಸಹಾರ ಇಂಟರ್‌ನ್ಯಾಷನಲ್ ಬಚ್ಪನ್ ಶಾಲೆಯ ನಿರ್ದೇಶಕ ರಾಜ್ ಜಾಧವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ ಜಾಧವ್ ಶಿಕ್ಷಕರಾದ ಪ್ರೀತಿ ಶಿಂದೆ ಉಪಸ್ಥಿತರಿದ್ದರು. ವೇದ ಜಾದವ ವಂದಿಸಿದರು.