16ರಂದು ಸಭಾಪತಿ ಬಸವರಾಜ ಹೊರಟ್ಟಿ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ
Author : KannadaprabhaNewsNetwork
Published : Jun 14 2025, 01:31 AM IST
ಪೋಟೋ 12ಎಚ್.ಎಸ್.ಡಿ7: ಹೊಸದುರ್ಗ ಪಟ್ಟಣದಲ್ಲಿ ಗುರುವಾರ ನಡೆದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವೈ.ಕೆ.ಬೇನಾಳ ಚಾಲನೆ ನೀಡಿದರು. | Kannada Prabha
Image Credit: KP
ಜೂನ್ 16ರಂದು ಸೋಮವಾರ ಬೆಳಗ್ಗೆ 9.30ಕ್ಕೆ ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿರುವ ಬಿ.ಪಿ.ಎಸ್.ಸಿ. ಸಭಾಂಗಣದಲ್ಲಿ ಸಚಿವ ಮಧು ಬಂಗಾರಪ್ಪ ಸಾಕ್ಷ್ಯಚಿತ್ವದ ಲೋಕಾರ್ಪಣೆ ಮಾಡಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಹುಬ್ಬಳ್ಳಿ: ವಿಧಾನಪರಿಷತ್ತಿಗೆ 1980ರಿಂದ ಸತತ 8 ಬಾರಿ ಆಯ್ಕೆಯಾಗುವ ಮೂಲಕ 45 ವರ್ಷಗಳಿಂದ ಸುಧೀರ್ಘ ಸದನದ ಪಯಣದಲ್ಲಿ ಸಾಗುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ ಕುರಿತು ಸಿರಗೇರಿಯ ಅನ್ನಪೂರ್ಣ ಕ್ರಿಯೇಶನ್ಸ್ ನಿರ್ಮಿಸಿದ ಸಾಕ್ಷ್ಯಚಿತ್ರ ಜೂನ್ 16ರಂದು ಬಿಡುಗಡೆಗೊಳ್ಳಲಿದೆ ಎಂದು ಡಾ. ಬಸವರಾಜ ಧಾರವಾಡ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜೂನ್ 16ರಂದು ಸೋಮವಾರ ಬೆಳಗ್ಗೆ 9.30ಕ್ಕೆ ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿರುವ ಬಿ.ಪಿ.ಎಸ್.ಸಿ. ಸಭಾಂಗಣದಲ್ಲಿ ಸಚಿವ ಮಧು ಬಂಗಾರಪ್ಪ ಸಾಕ್ಷ್ಯಚಿತ್ವದ ಲೋಕಾರ್ಪಣೆ ಮಾಡಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎನ್. ಭರತರಡ್ಡಿ ಹಾಗೂ ಬಿಪಿಎಸ್‌ಸಿ ಸಂಸ್ಥೆ ಅಧ್ಯಕ್ಷ ಡಾ. ಮಹಿಮಾ ಪಾಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಿರಗೇರಿಯ ಅನ್ನಪೂರ್ಣ ಕ್ರಿಯೇಶನ್ಸ್ ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ಕಳೆದ ವರ್ಷ ಲೋಕಾರ್ಪಣೆ ಮಾಡಿದ್ದಾರೆ. ಎರಡನೇ ಭಾಗವನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದು ಅನ್ನಪೂರ್ಣ ಕ್ರಿಯೇಶನ್ಸ್ ನಿರ್ದೇಶಕ ಸಿರಿಗೇರಿ ಯರಿಸ್ವಾಮಿ ತಿಳಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.