ಸಾರಾಂಶ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ಚುನಾವಣೆಯ ಅಂತಿಮ ಫಲಿತಾಂಶ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕಟವಾಗಿದೆ.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತಕ್ಕೆ ಫೆಬ್ರವರಿ 16 ರಿಂದ ಮುಂದಿನ 05 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಡೆಸಲಾಗಿತ್ತು.ಈ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಸ್ಥಾನದ ರಾಜಘಟ್ಟ ಕ್ಷೇತ್ರ, ಮಹಿಳಾ ಮೀಸಲು ಸ್ಥಾನದ ದೊಡ್ಡಬೆಳವಂಗಲ ಹಾಗೂ ದೊಡ್ಡಬಳ್ಳಾಪುರ ನಗರ ಕ್ಷೇತ್ರ, ಹಿಂದುಳಿದ ವರ್ಗಗಳ ಪ್ರವರ್ಗ ''''''''''''''''ಎ'''''''''''''''' ಸ್ಥಾನದ ತೂಬಗೆರೆ ಕ್ಷೇತ್ರ, ಹಿಂದುಳಿದ ವರ್ಗಗಳ ಪ್ರವರ್ಗ ''''''''''''''''ಏ'''''''''''''''' ಕೊನಘಟ್ಟ ಕ್ಷೇತ್ರ, ಪರಿಶಿಷ್ಟ ಜಾತಿ ಸ್ಥಾನದ ಎಸ್.ಎಸ್.ಘಾಟಿ ಕ್ಷೇತ್ರ, ಪರಿಶಿಷ್ಟ ಪಂಗಡ ಸ್ಥಾನದ ಹೊಸಹಳ್ಳಿ ಕ್ಷೇತ್ರದಿಂದ ಹಾಗೂ ಸಾಲಗಾರರಲ್ಲದ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಸಾಲಗಾರರ ಸಾಮಾನ್ಯ ಸ್ಥಾನದ ಮೆಳೇಕೋಟೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಲಕ್ಮೀದೇವಿಪುರದ ಬಸವರಾಜು ಬಿ 17 ಮತಗಳು, ಸಿ.ಡಿ.ಅಗ್ರಹಾರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಸಿ.ಅಶ್ವಥ್ ನಾರಾಯಣ ಗೌಡ 61 ಮತಗಳು, ಹಣಬೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ವಾಣಿಗರಹಳ್ಳಿ ವಿ.ವೇಣುಕುಮಾರ್ 43 ಮತಗಳು, ಮಧುರೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಕಸಾಘಟ್ಟ ಉಗ್ರಯ್ಯ 38 ಮತಗಳು, ಕೊಡಿಗೇಹಳ್ಳಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ತಳಗವಾರ ಟಿವಿ ಲಕ್ಷ್ಮೀನಾರಾಯಣ್ 17 ಮತಗಳು, ಮತ್ತು ಸಾಸಲು ಕ್ಷೇತ್ರದ ಸ್ಪರ್ಧಿಸಿದ್ದ ಚನ್ನವೀರನಹಳ್ಳಿಯ ಸಿವಿ ಲಕ್ಷ್ಮೀಪತಯ್ಯ 27 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ನಿಯಮ 14ವೈ(2)ರಲ್ಲಿನ ನಿಯಮಾನುಸಾರ ಚುನಾವಣೆ ಅಧಿಕಾರಿ ನಾಗಮಣಿ ಫಲಿತಾಂಶ ಘೋಷಿಸಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಲೇ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಕಣ್ಣು ನೆಟ್ಟಿದ್ದು, ಚರ್ಚೆ ತೀವ್ರಗೊಂಡಿದೆ.