ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿದರೆ ಪ್ರತಿಭಾವಂತ, ಉತ್ತಮ ನಾಗರಿಕ ಪ್ರಜೆಗಳಾಗುತ್ತಾರೆ

ಕನ್ನಡಪ್ರಭ ವಾರ್ತೆ ಮೈಸೂರುಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸದೆ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕರೆ ನೀಡಿದರು.ಮೈಸೂರು ತಾಲೂಕಿನ ದೊಡ್ಡಕಾನ್ಯ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿದರೆ ಪ್ರತಿಭಾವಂತ, ಉತ್ತಮ ನಾಗರಿಕ ಪ್ರಜೆಗಳಾಗುತ್ತಾರೆ ಎಂದರು.ಟಿವಿಎಸ್ ಕಂಪನಿಯವರು ಶೌಚಾಲಯ, ಅಂಗನವಾಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿ ಎಲ್ಲರ ಆರೋಗ್ಯವಾಗಿರಬೇಕೆಂದು ಬಯಸಿದ್ದಾರೆ. ಅತ್ಯಂತ ಪ್ರೀತಿಯಿಂದ ಸೇವೆ ಮಾಡಿಕೊಂಡು ಬಂದಿದ್ದಾರೆ. ಕಾರ್ಯಕ್ರಮ ಮಾಡುವುದು ದೊಡ್ಡ ಕಷ್ಟ. ಅವನು ಬೇರೆ ಪಕ್ಷ, ನಾನೊಂದು ಪಕ್ಷ ಎನ್ನುವಂತಾಗಿದೆ. ಈಗ ಊರಿನ ಜನರು ಒಂದು ಎನ್ನುವುದನ್ನು ತೋರಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ವ್ಯವಸಾಯದ ಪರಿಸ್ಥಿತಿ ಕುಂಠಿತವಾಗಿದೆ. ಮಹಿಳೆಯರು ಉದ್ಯಮಿಗಳಾಗಿ ಹೊರ ಹೊಮ್ಮಬೇಕು. ಸರ್ಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿದವರು ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳಾಗಿದ್ದಾರೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗಳಾಗಿರುವ ಕಾರಣ ಸರ್ಕಾರಿ ಶಾಲೆಗಳೆಂದು ಹಿಂಜರಿಯುವುದು ಬೇಡ ಎಂದರು.ಜೆ.ಪಿ. ನಗರದಿಂದ ದೊಡ್ಡಕಾನ್ಯ ಗ್ರಾಮಕ್ಕೆ ಸೇರುವ ಮಾರ್ಗದ ರಸ್ತೆಯು ಹಾಳಾಗಿದ್ದರಿಂದ 13 ಕೋಟಿ ರೂ. ಮಂಜೂರು ಮಾಡಿಸಿ ರಸ್ತೆ ನಿರ್ಮಿಸಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನಕ್ಕೆ 60 ಲಕ್ಷ ರೂ, ಬಸವ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ನೀಡಿದ್ದೇನೆ. ಗ್ರಾಮದ ಪ್ರತಿಯೊಂದು ಸಿಸಿ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ ಎಂದು ಅವರು ಹೇಳಿದರು.ಟಿವಿಎಸ್ ಕಂಪನಿಯ ಶಶಿಕಾಂತ್, ಮಾಜಿ ಅಧ್ಯಕ್ಷ ಕೃಷ್ಣ, ಗ್ರಾಪಂ ಅಧ್ಯಕ್ಷೆ ಶಿವರುದ್ರಮ್ಮ, ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಉಮಾಪತಿ, ಮಹದೇವಪ್ಪ, ಮಹದೇವಯ್ಯ, ಶಿವನಂಜು, ರಾಮಯ್ಯ, ಉಮೇಶ್, ಶಿವಯ್ಯ, ವಿಜಯಮ್ಮ, ಮಹೇಶ್, ನಂಜಪ್ಪ, ಪಿಡಿಒ ಶಿವಕುಮಾರ್, ಬಸವರಾಜು, ಅಚಲಾ, ವಿಜಯಮಣ್ಣಿ, ನಂಜುಂಡಸ್ವಾಮಿ, ಪಾಪಣ್ಣ, ಶ್ರೀಕಂಠಾಚಾರ್, ಮಹದೇವಶೆಟ್ಟಿ, ಗೀತಾ, ಪೃಥ್ವಿ, ವಿಜಯಕುಮಾರ್ ಮೊದಲಾದವರು ಇದ್ದರು.----ಕೋಟ್...ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಹೊರತು ಬೇರೇನೂ ಇಲ್ಲ. ಕ್ಷೇತ್ರದ ಜನರು ತೋರುತ್ತಿರುವ ಪ್ರೀತಿ, ಅಭಿಮಾನವೇ ನನ್ನ ಶಕ್ತಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲಾಗುವುದು.- ಜಿ.ಟಿ. ದೇವೇಗೌಡ, ಶಾಸಕ