ಅವತ್ತಿನ ಆ ಒಂದು ಸಣ್ಣ ಘಟನೆಯಿಂದ ಗ್ರಾಮಕ್ಕೆ ಕಪ್ಪುಚುಕ್ಕೆ ಬಂದಂತಾಗಿತ್ತು. ಇಂದು ಗ್ರಾಮದ ತಾಯಂದಿರು ಆ ಕಳಂಕವನ್ನು ಸಂಪೂರ್ಣವಾಗಿ ತೊಳೆದಿದ್ದಾರೆ ಎಂದು ಹೇಳಿದರು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಬಾರದು. ಇಬ್ಬರು- ಮೂವರು ವ್ಯಕ್ತಿಗಳ ಸಣ್ಣತನಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ. ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ಎಂದೂ ಮರುಕಳಿಸಬಾರದು.
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ದೊಡ್ಡಕುರಬರಹಳ್ಳಿ ಗ್ರಾಮದಲ್ಲಿ ಶ್ರೀ ಬಿಸಿಲು ಮಾರಮ್ಮ ದೇವಿಯ ದರ್ಶನಕ್ಕೆ ಆಗಮಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದರು.ಗ್ರಾಮದ ಪ್ರವೇಶ ದ್ವಾರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಬೃಹತ್ ಮೂಸಂಬಿ ಹಾರ ಹಾಕಿ, ತಮಟೆ, ನಗಾರಿ ಬಾರಿಸಿ, ಆರತಿ ಬೆಳಗಿ ಸ್ವಾಗತ ಕೋರಿದರು. ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿ ದೇವಾಲಯಕ್ಕೆ ಕರೆದುಕೊಂಡು ಬಂದರು.
ಗ್ರಾಮಕ್ಕೆ ಆಗಮಿಸಿದ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಪ್ರತಿ ಮನೆಯಲ್ಲೂ ಆರತಿ ಬೆಳಗಿ, ಬಗೆಬಗೆಯ ಹೂಗಳ ಹಾರ, ಹಣ್ಣಿನ ಹಾರ ಹಾಕಿದರು. ನಂತರ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಸುಮಾರು 2 ಕಿಲೋ ಮೀಟರ್ ನಷ್ಟು ದೂರ ದೇವಸ್ಥಾನದವರೆಗೂ ಮೆರವಣಿಗೆ ಮಾಡಿದರು.ನಂತರ ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅವತ್ತಿನ ಆ ಒಂದು ಸಣ್ಣ ಘಟನೆಯಿಂದ ಗ್ರಾಮಕ್ಕೆ ಕಪ್ಪುಚುಕ್ಕೆ ಬಂದಂತಾಗಿತ್ತು. ಇಂದು ಗ್ರಾಮದ ತಾಯಂದಿರು ಆ ಕಳಂಕವನ್ನು ಸಂಪೂರ್ಣವಾಗಿ ತೊಳೆದಿದ್ದಾರೆ ಎಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಬಾರದು. ಇಬ್ಬರು- ಮೂವರು ವ್ಯಕ್ತಿಗಳ ಸಣ್ಣತನಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ. ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ಎಂದೂ ಮರುಕಳಿಸಬಾರದು ಎಂದು ತಿಳಿಸಿದರು.ನಾನು ರಾಮನಗರ ಬಿಟ್ಟು ಹೋಗಿರೋದಾದರೂ ಎಲ್ಲಿ? ನಾನು ನಿರಂತರವಾಗಿ ಇಲ್ಲೇ ಇದ್ದೇನೆ. ದೇವೇಗೌಡರ 64 ವರ್ಷಗಳ ರಾಜಕೀಯ ಹಾಗೂ ಈ ಜಿಲ್ಲೆಯೊಂದಿಗಿನ 30- 40 ವರ್ಷಗಳ ಬಾಂಧವ್ಯವನ್ನು ಪ್ರಾಮಾಣಿಕವಾಗಿ ಮುಂದುವರಿಸುತ್ತೇವೆ ಎಂದು ಹೇಳಿದರು.
------ರಾಮನಗರಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ? ಶ್ವೇತಪತ್ರ ಹೊರಡಿಸಲಿ
ಕನ್ನಡಪ್ರಭ ವಾರ್ತೆ ಹಾರೋಹಳ್ಳಿರಾಮನಗರಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಮೂಲ್ ಅಧ್ಯಕ್ಷ ಡಿ ಕೆ. ಸುರೇಶ್ ಅವರಿಗೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.
ದೊಡ್ಡಕುರಬರಹಳ್ಳಿ ಗ್ರಾಮದಲ್ಲಿ ಶ್ರೀ ಬಿಸಿಲು ಮಾರಮ್ಮ ದೇವಿಯ ದರ್ಶನದ ಬಳಿಕ ಮಾತನಾಡಿದ ಅವರು, ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಗೆ ತೀಕ್ಷ್ಣವಾಗಿ ಟಾಂಗ್ ಕೊಟ್ಟರು.5 ಸಾವಿರ ಎಕರೆ ಕೊಡಿಸ್ತೀನಿ, ಕೈಗಾರಿಕೆ ಮಾಡಲಿ ಇಲ್ಲದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬ ಡಿ.ಕೆ. ಸುರೇಶ್ ಅವರ ಸವಾಲಿಗೆ ಪ್ರತಿಕ್ರಿಯಿಸಿದ ನಿಖಿಲ್, ಇಲ್ಲಿ ಪ್ರತಿಷ್ಠೆ ಪ್ರಶ್ನೆ ಆಗಬಾರದು. 100 ಕೊಡ್ತಾರೋ, 5,000 ಎಕರೆ ಕೊಡ್ತಾರೋ ಮೊದಲು ಕೊಡಲಿ, ನಾವು ಸ್ವಾಗತಿಸುತ್ತೇವೆ ಎಂದರು.
ಕುಮಾರಸ್ವಾಮಿಯವರು ಜಿಲ್ಲೆಯ ಜನರ ಋಣ ತೀರಿಸಿಲ್ಲ ಎಂಬ ವಿಚಾರಕ್ಕೆ ರಾಮನಗರ ಜಿಲ್ಲೆಯ ಜನರೇ ಉತ್ತರ ಕೊಡುತ್ತಾರೆ. ದೇವೇಗೌಡರು, ಕುಮಾರಣ್ಣನ ಕೊಡುಗೆ ಜನರಿಗೆ ಗೊತ್ತಿದೆ. ಇವರ ಸರ್ಕಾರ ಬಂದು ನಾಲ್ಕು ವರ್ಷ ಕಳೀತಾ ಬಂತು. ರಾಮನಗರ ಜಿಲ್ಲೆಗೆ ಕಾಂಗ್ರೆಸ್ ಸರ್ಕಾರ ಏನು ಕೊಟ್ಟಿದೆ ಅಂತ ವೈಟ್ ಪೇಪರ್ ರಿಲೀಸ್ ಮಾಡಲಿ ಎಂದು ಸವಾಲು ಹಾಕಿದರು.ಮಂಡ್ಯ ಎಆರ್ ಎಐ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
100 ಎಕರೆ ಜಾಗ ರೆಡಿ ಇದೆ ಎಂದು ಹೇಳಿದ್ದ ಮಂಡ್ಯ ಕಾಂಗ್ರೆಸ್ ಶಾಸಕರ ಬಣ್ಣ ನಿನ್ನೆ ಬಯಲಾಗಿದೆ. ಕಡ್ಲೆಪುರಿ ವ್ಯಾಪಾರ ಮಾಡಿದಂಗೆ ಜಾಗ ರೆಡಿ ಇದೆ ಅಂತ ಹೇಳಿದ್ರು. ಆದ್ರೆ ಜಾಗ ರೆಡಿ ಇಲ್ಲ ಅನ್ನೋದು ನಿನ್ನೆಯ ಸಭೆಯಲ್ಲಿ ಸಾಬೀತಾಗಿದೆ. ಎಆರ್ಎಐ ಟೆಸ್ಟಿಂಗ್ ಸೆಂಟರ್ ಸ್ಥಾಪನೆಗೆ ಕುಮಾರಣ್ಣ 500 ಎಕರೆ ಕೇಳಿದ್ದಾರೆ. ಕನಿಷ್ಠ 100 ಎಕರೆ ಕೊಟ್ಟರೆ ಸಾಕು. ಈ ಯೂನಿಟ್ ಬಂದರೆ ಮಂಡ್ಯ ಸುತ್ತಮುತ್ತ ನೂರಕ್ಕೆ ನೂರರಷ್ಟು ಮತ್ತಷ್ಟು ಫ್ಯಾಕ್ಟರಿಗಳು ಬಂದು ಉದ್ಯೋಗ ಸೃಷ್ಟಿಯಾಗುತ್ತೆ. ಯುವಕರ ಬದುಕಿನ ಜೊತೆ ಚೆಲ್ಲಾಟ ಆಡಿ ರಾಜಕಾರಣ ಬೇಡ. ರಾಜ್ಯ ಸರ್ಕಾರ ಶೀಘ್ರವೇ ಜಾಗ ಹಸ್ತಾಂತರಿಸಲಿ ಎಂದು ಆಗ್ರಹಿಸಿದರು.ಕ್ಷೇತ್ರ ಪುನರ್ ವಿಂಗಡಣೆ ಬಿಲ್ ವಿಚಾರ:
ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಗೆ ಸಿದ್ಧತೆ ಮಾಡಲಾಗಿದೆ. ಡಿಲಿಮಿಟೇಶನ್ ಜೊತೆಗೆ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಲು ಬಹುತೇಕ ಪಕ್ಷಗಳ ಸಹಮತ ಇದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗದಂತೆ ತಡೆಯಲು ಕೇಂದ್ರದಿಂದ ಮಹತ್ವದ ಸೂತ್ರ ರೆಡಿ ಮಾಡಲಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಸರಿ ಸಮಾನವಾಗಿ ಶೇ. 50ರಷ್ಟು ಕ್ಷೇತ್ರಗಳ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಈ ಅಧಿವೇಶನದಲ್ಲೇ ಮಸೂದೆ ಪಾಸ್ ಆಗುವ ಸಂಪೂರ್ಣ ಆತ್ಮವಿಶ್ವಾಸವಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.