ಸಾರಾಂಶ
11 ಮಂದಿ ನಿರ್ದೇಶಕರ ಬಲದ ಸಂಘದಲ್ಲಿ ಜೆಡಿಎಸ್ ಬೆಂಬಲಿತ 9 ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ ಇಬ್ಬರು ನಿರ್ದೇಶಕರಿದ್ದರು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ.ದೊಡ್ಡೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಪಂಕಜ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬಿಂಡಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬನ್ನಂಗಾಡಿ ಬಿ.ಡಿ.ದೊಡ್ಡೇಗೌಡ-ಮಲ್ಲಿಗೆರೆ ಪಂಕಜ ಅವಿರೋಧವಾಗಿ ಆಯ್ಕೆಯಾದರು.11 ಮಂದಿ ನಿರ್ದೇಶಕರ ಬಲದ ಸಂಘದಲ್ಲಿ ಜೆಡಿಎಸ್ ಬೆಂಬಲಿತ 9 ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ ಇಬ್ಬರು ನಿರ್ದೇಶಕರಿದ್ದರು. ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ.ದೊಡ್ಡೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಪಂಕಜ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಬಿ.ಡಿ.ದೊಡ್ಡೇಗೌಡ ಹಾಗೂ ಉಪಾಧ್ಯಕ್ಷರಾಗಿ ಪಂಕಜರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವಸೀಂಪಾಷ ಘೋಷಿಸಿದರು.
ಬಿ.ಡಿ.ದೊಡ್ಡೇಗೌಡ, ಪಂಕಜ ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು ಸಿಹಿಹಂಚಿ ಸಂಭ್ರಮಿಸಿದರು. ಅಧ್ಯಕ್ಷ, ಉಪಾಧ್ಯಕ್ಷರಿಗೆ ಎಲ್ಲರು ಅಭಿನಂದಿಸಿದರು.ಅಧ್ಯಕ್ಷ ಬಿ.ಡಿ.ದೊಡ್ಡೇಗೌಡ ಮಾತನಾಡಿ, ನಮ್ಮ ನಾಯಕ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಆಶೀರ್ವಾದ ಮತ್ತು ನಿರ್ದೇಶಕರ ಸಹಕಾರ, ಬೆಂಬಲದಿಂದ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನಾಯಕರ ಸಲಹೆ ಹಾಗೂ ಎಲ್ಲಾ ನಿರ್ದೇಶಕರ ಸಹಕಾರ ಪಡೆದು ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತೇನೆ. ಸರ್ಕಾರದಿಂದ ರೈತರಿಗೆ ದೊರೆಯುವ ಸಲವತ್ತುಗಳನ್ನು ಸಹ ದೊರಕಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ನಿರ್ದೇಶಕರಾದ ಚಲುವೇಗೌಡ, ಚಿಕ್ಕತಮ್ಮಯ್ಯ, ಡಿ.ಸಿ.ಜಗದೀಶ್, ದೇವೇಗೌಡ, ರತ್ನಮ್ಮ, ರಾಮೇಗೌಡ, ಶಿವಲಿಂಗಯ್ಯ, ವಾಸು, ಮುಖಂಡರಾದ ಬಿ.ಪಿ.ಶ್ರೀನಿವಾಸ್, ಹುಚ್ಚೇಗೌಡ, ಕರೀಗೌಡ, ಹೋರಿ ನಾಗೇಗೌಡ, ಬಿ.ಎಸ್.ಶ್ರೀನಿವಾಸ್, ಗಂಗಾಧರ್, ಚಂದ್ರೇಗೌಡ, ರವಿಕರ, ಎಂ.ಎಸ್.ಜಗದೀಶ್, ಪ್ರಕಾಶ್, ಶಿವಪ್ಪ, ಪುಟ್ಟರಾಜು, ಧರಣಿ, ಯೋಗೇಶ್, ರಾಜೇಶ್, ಚಂದ್ರು, ಕಾರ್‍ಯದರ್ಶಿ ರವಿಕುಮಾರ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಪಾಲ್ಗೊಂಡಿದ್ದರು.