ಅಭಿವೃದ್ಧಿಗೊಳಿಸಿದ ದೊಡ್ಡಕೆರೆ ಲೋಕಾರ್ಪಣೆ

| Published : Sep 15 2024, 01:56 AM IST

ಅಭಿವೃದ್ಧಿಗೊಳಿಸಿದ ದೊಡ್ಡಕೆರೆ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಆಲಗೌಡನಹಳ್ಳಿ ದೊಡ್ಡಕೆರೆ ಅಂಗಳದಲ್ಲಿ ಹೂಳು ತುಂಬಿ ಸಾಮರ್ಥ್ಯ ಕಳೆದುಕೊಂಡಿದ್ದ ಕೆರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾಳಜಿಯಿಂದಾಗಿ ಮರುಜೀವ ಪಡೆದುಕೊಂಡಿದ್ದರಿಂದ ಬಾಗಿನ ಸಮರ್ಪಿಸಿದ ಗ್ರಾಮಸ್ಥರು ಕೃಷಿ ಸಹಕಾರಿಯಾಗುವ ಕೆರೆ ಅಭಿವೃದ್ಧಿಗೊಳಿಸಿದ್ದಾರೆ. ಹೊಳೆನರಸೀಪುರ ಪಟ್ಟಣದಿಂದ ಮೈಸೂರಿಗೆ ತೆರಳುವಾಗಿನ ಹೆದ್ದಾರಿ ಪಕ್ಕದ ಆಲಗೌಡನಹಳ್ಳಿ ದೊಡ್ಡಕೆರೆ ಅಭಿವೃದ್ಧಿಗೊಳಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಸ್ಯರು ಶನಿವಾರ ಲೋಕಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದಿಂದ ಮೈಸೂರಿಗೆ ತೆರಳುವಾಗಿನ ಹೆದ್ದಾರಿ ಪಕ್ಕದ ಆಲಗೌಡನಹಳ್ಳಿ ದೊಡ್ಡಕೆರೆ ಅಭಿವೃದ್ಧಿಗೊಳಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಸ್ಯರು ಶನಿವಾರ ಲೋಕಾರ್ಪಣೆ ಮಾಡಿದರು.ಆಲಗೌಡನಹಳ್ಳಿ ದೊಡ್ಡಕೆರೆ ಅಂಗಳದಲ್ಲಿ ಹೂಳು ತುಂಬಿ ಸಾಮರ್ಥ್ಯ ಕಳೆದುಕೊಂಡಿದ್ದ ಕೆರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾಳಜಿಯಿಂದಾಗಿ ಮರುಜೀವ ಪಡೆದುಕೊಂಡಿದ್ದರಿಂದ ಬಾಗಿನ ಸಮರ್ಪಿಸಿದ ಗ್ರಾಮಸ್ಥರು ಕೃಷಿ ಸಹಕಾರಿಯಾಗುವ ಕೆರೆ ಅಭಿವೃದ್ಧಿಗೊಳಿಸಿದ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಕೆರೆಯ ತಟದಲ್ಲಿ ನಾಮಫಲಕ ಅನಾವರಣಗೊಳಿಸಿದ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತಾಯ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ 972 ಕೆರೆ ಅಭಿವೃದ್ಧಿ ಕಾಮಗಾರಿ ಮುಗಿದಿದೆ. ತಾಲೂಕಿನ ಆಲಗೌಡನಹಳ್ಳಿ ಕೆರೆಯ 7 ಎಕರೆ ಪ್ರದೇಶದಲ್ಲಿ 7.47 ಲಕ್ಷ ರು. ವೆಚ್ಚಗೊಳಿಸಿದ ಸಂಸ್ಥೆ ಹೂಳು ತೆಗೆದು ಪುನಶ್ಚೇತನಗೊಳಿಸಿದೆ ಎಂದು ತಿಳಿಸಿದರು.

ಗ್ರಾಮದ ಮುಖಂಡ ಪುಟ್ಟಸ್ವಾಮಪ್ಪ, ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ, ಗ್ರಾ.ಪಂ. ಅಧ್ಯಕ್ಷ ಶಿವಣ್ಣ, ಪಿಡಿಒ ಶಿವಪ್ಪ, ಮೇಲ್ವಿಚಾರಕ ವಸಂತ್, ಎಂಜಿನಿಯರ್‌ ಪುಷ್ಪರಾಜ್, ಎ.ಜಗನ್ನಾಥ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.