ಸಾರಾಂಶ
ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಮನ್ಯುನಾಮಕ ಲಕ್ಷ್ಮೀನರಸಿಂಹ ಯಾಗವು ಪೆರ್ಡೂರಿನ ದಿನೇಶ್ ಅಡಿಗ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗುರು ಹುಣ್ಣಿಮೆ ಕಾರ್ಯಕ್ರಮ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಶಿಷ್ಯ ವರ್ಗದ ಸಹಕಾರದೊಂದಿಗೆ ಸಂಭ್ರಮದೊಂದಿಗೆ ಆಚರಿಸಲಾಯಿತು.ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಮನ್ಯುನಾಮಕ ಲಕ್ಷ್ಮೀನರಸಿಂಹ ಯಾಗವು ಪೆರ್ಡೂರಿನ ದಿನೇಶ್ ಅಡಿಗ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಬಳಿಕ ಭಕ್ತ ಸಮೂಹ ಶ್ರೀ ಗುರೂಜಿಯವರನ್ನು ಭಕ್ತಿ ಪೂರ್ವಕವಾಗಿ ಗುರುಪೀಠದಲ್ಲಿ ಕುಳ್ಳಿರಿಸಿ ಪಾದಪೂಜೆ ಮಾಡಿದರು. ಗುರುಗಳಿಗೆ ಶಾಲು ಹೊದಿಸಿ ಪೇಟ ತೊಡಿಸಿ ಫಲಪುಷ್ಪ ಕಾಣಿಕೆಯನ್ನು ಇತ್ತು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.ವಿವಿಧ ನೃತ್ಯಾರ್ಥಿಗಳಿಂದ ನೃತ್ಯ ಸೇವೆ ನೆರವೇರಿತು. ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ವಿವಿಧ ಮನರಂಜನ ಕಾರ್ಯಕ್ರಮ ನೆರವೇರಿಸಿದರು. ಧನ್ಯಶ್ರೀ, ಅನಘ, ಜಾನಕಿ ಎಸ್., ಸ್ವಾತಿ ಆಚಾರ್ಯ ನೃತ್ಯ ಸೇವೆ ನೆರವೇರಿಸಿದರು.
ಶ್ರೀ ದುರ್ಗಾ ಆದಿಶಕ್ತಿ ದೇವಿಯ ಮಹಾಪೂಜೆಯನ್ನು ಅನಿಶ್ ಆಚಾರ್ಯ ನೆರವೇರಿಸಿದರು. ಆನಂದ್ ಬಾಯಾರಿ ದೇವಿಯನ್ನ ವಿಶೇಷವಾಗಿ ಅಲಂಕರಿಸಿದ್ದರು. ಗುರು ಪೂಜೆಯನ್ನು ಸ್ವಸ್ತಿಕ್ ಆಚಾರ್ಯ ಅವರು ನೆರವೇರಿಸಿದರು.ಸಂಜೆ ಕಡಿಯಾಳಿ ಮಾತೃ ಭಜನಾ ಮಂಡಳಿಯ ಭಜಕರಿಂದ ಭಜನೆ ಸಂಕೀರ್ತನೆ, ಸತ್ಯನಾರಾಯಣ ವ್ರತಕಥ ಪೂಜೆ ಶ್ರೀಚಕ್ರ ಮಾತೆಗೆ ಹುಣ್ಣಿಮೆಯ ವಿಶೇಷ ಪೂಜೆಗಳು ನೆರವೇರಿದವು.
ಗುರು ಪೂರ್ಣಿಮೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಗುರೂಜಿಯವರು ಬ್ಯಾಗ್ ವಿತರಿಸಿದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದ್ದಾರೆ.