ನಾಯಿ, ಮುಷ್ಯ ಪ್ರತ್ಯೇಕ ದಾಳಿ: ಶಾಲಾ ಬಾಲಕ, ಬಾಲಕಿ, ಮಹಿಳೆಗೆ ಚಿಕಿತ್ಸೆ

| Published : Aug 05 2025, 11:45 PM IST

ನಾಯಿ, ಮುಷ್ಯ ಪ್ರತ್ಯೇಕ ದಾಳಿ: ಶಾಲಾ ಬಾಲಕ, ಬಾಲಕಿ, ಮಹಿಳೆಗೆ ಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಯಿ ಹಾಗೂ ಮುಷ್ಯ ದಾಳಿಯ ಪ್ರತ್ಯೇಕ ಘಟನೆಯಲ್ಲಿ ಶಾಲಾ ಬಾಲಕ, ಬಾಲಕಿ ಹಾಗೂ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

- ಕುಂದೂರಿನಲ್ಲಿ ಸೋಮವಾರ ಘಟನೆ । ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

- - -

ಹೊನ್ನಾಳಿ: ನಾಯಿ ಹಾಗೂ ಮುಷ್ಯ ದಾಳಿಯ ಪ್ರತ್ಯೇಕ ಘಟನೆಯಲ್ಲಿ ಶಾಲಾ ಬಾಲಕ, ಬಾಲಕಿ ಹಾಗೂ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕುಂದೂರು ಶಾಲೆಯ 5ನೇ ತರಗತಿಯ ಆಯೋಜ ಫಾತೀಮಾ ನಾಯಿ ದಾಳಿಯಿಂದ ಗಾಯಗೊಂಡಿರುವ ವಿದ್ಯಾರ್ಥಿನಿ. ಗ್ರಾಮದ ಮದರಸದಲ್ಲಿ ತರಗತಿ ಮುಗಿಸಿಕೊಂಡು ಮನೆಗೆ ಹೋಗುವಾಗ ನಾಯಿ ದಾಳಿ ನಡೆಸಿದ್ದರಿಂದ ಮುಖ, ಕೈ-ಕಾಲುಗಳಿಗೆ ತೀವ್ರ ಗಾಯಗಳಾಗಿದೆ. ತಕ್ಷಣ ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತು.

ಬಾಲಕ-ಮಹಿಳೆಗೆ ಮುಷ್ಯ ದಾಳಿ:

ಅದೇ ದಿನ ಬಾಲಕ ಹಾಗೂ ಮಹಿಳೆ ಮೇಲೆ ಮುಷ್ಯ ದಾಳಿ ನಡೆಸಿ, ಗಾಯಗೊಳಿಸಿರುವ ಘಟನೆಯೂ ನಡೆದಿದೆ. ಗ್ರಾಮದ ಮನೆ ಎದುರು ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಬೇಕರಿಯಲ್ಲಿ ತಿಂಡಿ ಖರೀದಿಸಿ ಬರುತ್ತಿದ್ದ ಬಾಲಕನ ಮೇಲೆ ಮುಷ್ಯವೊಂದು ದಾಳಿ ನಡೆಸಿದೆ. ಈ ಇಬ್ಬರೂ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಒಂದೇ ದಿನ ಗ್ರಾಮದಲ್ಲಿ ಮುಷ್ಯ ಹಾಗೂ ನಾಯಿ ಮೂವರ ಮೇಲೆ ದಾಳಿ ನಡೆಸಿ, ಗಾಯಗಳಿವೆ. ತಕ್ಷಣ ಗ್ರಾಪಂ ಅಧಿಕಾರಿಗಳು ಮುಷ್ಯ ಹಾಗೂ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು. ಇಲ್ಲದಿದ್ದರೆ ಗ್ರಾಮದಲ್ಲಿ ಜನರು ಓಡಾಡದಂಥ ಪರಿಸ್ಥಿತಿ ಉಂಟಾಗಬಹುದು ಎಂದು ಗ್ರಾಮಸ್ಥರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒ ಅವರಿಗೆ ಎಚ್ಚರಿಸಿ, ಮನವಿ ಮಾಡಿದರು.

- - -

-5ಎಚ್.ಎಲ್.ಐ2:

ಕುಂದೂರು ಗ್ರಾಮದಲ್ಲಿ ನಾಯಿ ದಾಳಿಯಿಂದ ಗಾಯಗೊಂಡಿರುವ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.