ಕುರಿ ಮಂದೆ ಮೇಲೆ ನಾಯಿಗಳ ದಾಳಿ : 20 ಕುರಿಗಳು ಸಾವು

| Published : Nov 15 2025, 01:15 AM IST

ಸಾರಾಂಶ

ಬೀರೂರು, ಕುರಿ ಮಂದೆಯ ಮೇಲೆ ನಾಯಿಗಳು ದಾಳಿ ಮಾಡಿದ ಪರಿಣಾಮ 20 ಕುರಿಗಳು ಮೃತಪಟ್ಟ ಘಟನೆ ಬೀರೂರು ಹೋಬಳಿ ಜೋಡಿತಿಮ್ಮಾಪುರದಲ್ಲಿ ಶುಕ್ರವಾರ ನಡೆದಿದೆ.ಹಿರಿಯೂರು ತಾಲೂಕಿನ ಪಿಲಾಜನಹಳ್ಳಿಯ ಶಿವಪ್ಪ ಎಂಬುವವರು ಸುಮಾರು 400 ಕುರಿಗಳಿರುವ ಮಂದೆಯನ್ನು ಜೋಡಿ ತಿಮ್ಮಾಪುರದ ಬಳಿಯ ಜಮೀನೊಂದರಲ್ಲಿ ನಿಲ್ಲಿಸಿದ್ದರು. ಕುರಿಗಳನ್ನು ಮೇಯಿಸಲು ಹೋದ ಸಂದರ್ಭದಲ್ಲಿ ಏಕಾಏಕಿ 40ಕ್ಕೂ ಹೆಚ್ಚು ಕುರಿಗಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಈ ಪೈಕಿ 20 ಕುರಿಗಳು ನಾಯಿಕಡಿತದಿಂದ ಮೃತಪಟ್ಟಿವೆ.

ಕನ್ನಡಪ್ರಭ ವಾರ್ತೆ, ಬೀರೂರು

ಕುರಿ ಮಂದೆಯ ಮೇಲೆ ನಾಯಿಗಳು ದಾಳಿ ಮಾಡಿದ ಪರಿಣಾಮ 20 ಕುರಿಗಳು ಮೃತಪಟ್ಟ ಘಟನೆ ಬೀರೂರು ಹೋಬಳಿ ಜೋಡಿತಿಮ್ಮಾಪುರದಲ್ಲಿ ಶುಕ್ರವಾರ ನಡೆದಿದೆ.

ಹಿರಿಯೂರು ತಾಲೂಕಿನ ಪಿಲಾಜನಹಳ್ಳಿಯ ಶಿವಪ್ಪ ಎಂಬುವವರು ಸುಮಾರು 400 ಕುರಿಗಳಿರುವ ಮಂದೆಯನ್ನು ಜೋಡಿ ತಿಮ್ಮಾಪುರದ ಬಳಿಯ ಜಮೀನೊಂದರಲ್ಲಿ ನಿಲ್ಲಿಸಿದ್ದರು. ಕುರಿಗಳನ್ನು ಮೇಯಿಸಲು ಹೋದ ಸಂದರ್ಭದಲ್ಲಿ ಏಕಾಏಕಿ 40ಕ್ಕೂ ಹೆಚ್ಚು ಕುರಿಗಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಈ ಪೈಕಿ 20 ಕುರಿಗಳು ನಾಯಿಕಡಿತದಿಂದ ಮೃತಪಟ್ಟಿವೆ.ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶುವೈದ್ಯಾಧಿಕಾರಿ ಡಾ.ಮೋಹನ್ ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.ಕುರಿಮಂದೆಯನ್ನು ಜಮೀನುಗಳಲ್ಲಿ ನಿಲ್ಲಿಸುವ ಕಾಯಕ ನಮ್ಮದಾಗಿದ್ದು, ಹಿರಿಯೂರಿನಿಂದ ವಲಸೆ ಬಂದಿರುತ್ತೇವೆ. ಜಮೀನುಗಳಲ್ಲಿ ದಿನಕ್ಕಿಷ್ಟು ಎಂದು ನಿಗಧಿಪಡಿಸಿದ ಹಣ ಪಡೆದು ಮಂದೆ ನಿಲ್ಲಿಸುತ್ತೇವೆ. ಹೀಗೆಯೇ ಊರಿಂದೂರಿಗೆ ಹೋಗುವ ಅಲೆಮಾರಿ ಜೀವನ ನಮ್ಮದು. ಇಂತಹ ಸಮಯದಲ್ಲಿ ನಾಯಿಗಳ ದಾಳಿಗೆ 20 ಕುರಿಗಳು ಸತ್ತಿರುವುದು ಲಕ್ಷಾಂತರ ರು. ನಷ್ಟವಾಗಿದೆ ಎಂದು ಶಿವಪ್ಪ ಅಳಲು ತೋಡಿಕೊಂಡರು.ಕಾಡುಗೊಲ್ಲರ ಸಂಘದ ಅಧ್ಯಕ್ಷ ಈರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ದೇವೀರಪ್ಪ, ಅಜ್ಜಂಪುರ ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ತಿಮ್ಮಯ್ಯ,ಶೇಖರಪ್ಪ ಇದ್ದರು.14 ಬೀರೂರು 2 ಬೀರೂರು ಹೋಬಳಿಯ ಜೋಡಿತಿಮ್ಮಾಪುರದಲ್ಲಿ ಕುರಿ ಮಂದೆಯ ಮೇಲೆ ನಾಯಿಗಳು ದಾಳಿ ಮಾಡಿದ ಪರಿಣಾಮ 20 ಕುರಿಗಳು ಮೃತಪಟ್ಟ ಘಟನೆನಡೆದಿದೆ.