ವ್ಯಾಘ್ರ ದಾಳಿಗೆ ವಿದೇಶಿ ತಳಿಯ ಶ್ವಾನಗಳು ಬಲಿ

| Published : May 26 2024, 01:38 AM IST

ಸಾರಾಂಶ

ವಿದೇಶಿ ತಳಿಯ ಎರಡು ನಾಯಿಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಹುಲಿ ದಾಳಿಗೆ ಎರಡು ವಿದೇಶಿ ತಳಿಯ ಶ್ವಾನಗಳು ಮೃತಪಟ್ಟಿರುವ ಘಟನೆ ವಿರಾಜಪೇಟೆ ಹೊರವಲಯದ ಕುಟ್ಟಂದಿಯಲ್ಲಿ ನಡೆದಿದೆ.

ಇಲ್ಲಿನ ಕೆ ಕೆ ಗ್ರೂಪ್ ಆಫ್ ಎಸ್ಟೇಟ್ ನಲ್ಲಿ ವಿದೇಶಿ ತಳಿಗಳಾದ ಅಸ್ಕಿ ಮತ್ತು ಫಿಟ್ ಬುಲ್ ಎಂಬೆರಡು

ವಿದೇಶಿ ತಳಿಯ ಎರಡು ನಾಯಿಗಳ ಮೇಲೆ ಹುಲಿ ಎರಗಿ ಕೊಂದುಹಾಕಿದೆ. ತೋಟದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ನಿರಂತರವಾಗಿದ್ದು, ಜನ, ಜಾನುವಾರು ಹಾಗೂ ಇದೀಗ ಸಾಕು ಪ್ರಾಣಿಗಳ ಮೇಲೆ ಕೂಡ ದಾಳಿ ಮಾಡುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

-----------------------------

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2024-25ರ ಸಾಲಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆ (ಎನ್‌ಒಎಸ್)ಗೆ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಆಸಕ್ತ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಆನ್‌ಲೈನ್ https://overseas.tribal.gov.in ನಲ್ಲಿ ವೆಬ್‌ಸೈಟ್ ಮೂಲಕ ಅರ್ಜಿಯನ್ನು ಮೇ 31ರೊಳಗೆ ಸಲ್ಲಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ತಿಳಿಸಿದ್ದಾರೆ.