ಸಾರಾಂಶ
ಡೊಮಿನೊಸ್ ಕಳುಹಿಸಿದಂತಹ ವೆಜ್‌ಜಿಂಗಿ ಪಾರ್ಸೆಲ್ ಬಾಕ್ಸ್ ಮೇಲೆ ಹಸಿರು ಸ್ಟೀಕರ್ ಅಂಟಿಸಲಾಗಿತ್ತು. ಆದರೆ, ಅದರಲ್ಲಿ ಮಾಂಸಹಾರ ಪದಾರ್ಥ ಕಳುಹಿಸಿ ಅದನ್ನು ತಾನು ಸೇವಿಸಿದ್ದರಿಂದ ತನಗೆ ಧರ್ಮ ಭ್ರಷ್ಟ ಮಾಡಿದಂತಾಗಿದೆ ಎಂದು ಪ್ರದ್ಯುಮ್ನ ದೂರು ದಾಖಲಿಸಿದ್ದಾನೆ.
ಧಾರವಾಡ: ಆರ್ಡರ್ ಮಾಡಿದ್ದು ಸಸ್ಯಾಹಾರಿ ಪಿಜ್ಜಾ. ಆದರೆ, ಡೊಮಿನೊಸ್ ನೀಡಿದ್ದು ಮಾಂಸಹಾರ! ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡೊಮಿನೋಸ್ ಪಿಜ್ಜಾಗೆ ಇಲ್ಲಿಯ ಗ್ರಾಹಕರ ಆಯೋಗ ದಂಡ ಹಾಗೂ ಪರಿಹಾರಕ್ಕೆ ಆದೇಶಿದೆ.
ಇಲ್ಲಿಯ ವಿದ್ಯಾಗಿರಿ ನಿವಾಸಿ ಹಾಗೂ ವಿದ್ಯಾರ್ಥಿ ಪ್ರದ್ಯುಮ್ನ ಇನಾಮದಾರ ಎಂಬುವರು ಜಾಹೀರಾತು ನೋಡಿ ಸಸ್ಯಹಾರಿ ಪದಾರ್ಥಗಳಾದ ಇಂಡಿ ತಂದುರಿ, ಪನೀರ ಪಿಜ್ಜಾ, ಪನೀರ್ ಟಿಕ್ಕಾ, ಸ್ಟಫ್ಡ್ ಗಾರ್ಲಿಕ್ ಬ್ರೇಡ್, ವೆಜ್‌ಜಿಂಗಿ ಪಾರ್ಸೆಲ್ ಹಾಗೂ ಚೀಸ್‌ಡಿಪ್‌ನ್ನು ₹555 ಪಾವತಿಸಿ ಧಾರವಾಡದ ಡೊಮಿನೊಸ್‌ಗೆ ಆರ್ಡರ್ ಮಾಡಿದ್ದರು. ಅದು ಮನೆಗೆ ತಲುಪಿದ ನಂತರ ಅದನ್ನು ಸೇವಿಸಿದಾಗ, ಅದು ಸಸ್ಯಹಾರ ಅಲ್ಲ. ಮಾಂಸಹಾರ ಎನ್ನುವುದು ಗೊತ್ತಾಗಿದೆ. ಡೊಮಿನೊಸ್ ಕಳುಹಿಸಿದಂತಹ ವೆಜ್‌ಜಿಂಗಿ ಪಾರ್ಸೆಲ್ ಬಾಕ್ಸ್ ಮೇಲೆ ಹಸಿರು ಸ್ಟೀಕರ್ ಅಂಟಿಸಲಾಗಿತ್ತು. ಆದರೆ, ಅದರಲ್ಲಿ ಮಾಂಸಹಾರ ಪದಾರ್ಥ ಕಳುಹಿಸಿ ಅದನ್ನು ತಾನು ಸೇವಿಸಿದ್ದರಿಂದ ತನಗೆ ಧರ್ಮ ಭ್ರಷ್ಟ ಮಾಡಿದಂತಾಗಿದೆ ಎಂದು ಪ್ರದ್ಯುಮ್ನ ದೂರು ದಾಖಲಿಸಿದ್ದಾನೆ.ಈ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ವಿದ್ಯಾರ್ಥಿಯು ಸಂಪೂರ್ಣ ಸಸ್ಯಹಾರಿ. ಅದೇ ರೀತಿ ಎದುರುದಾರರ ಸಸ್ಯಹಾರಿಯ ಆಹಾರ ಪದಾರ್ಥದ ಬದಲು ಮಾಂಸಹಾರ ನೀಡಿದ್ದು ಸೇವಾ ನ್ಯೂನ್ಯತೆ ಮಾಡಿದಂತೆ. ಅದು ದಾಖಲಗಳಿಂದೂ ಸಾಬೀತಾಗಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕೆ ₹50 ಸಾವಿರ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚವಾಗಿ ₹10 ಸಾವಿರ ಕೊಡುವಂತೆ ಎದುರುದಾರರಾದ ಡೊಮಿನೊಸ್ ಪಿಜ್ಜಾಗೆ ಆದೇಶಿಸಿದೆ.