ವಿಕಲಚೇತನರ ಸವಲತ್ತು ದುರ್ಬಳಕೆಯಾಗದಿರಲಿ: ಶಾಸಕ ಆರಗ ಜ್ಞಾನೇಂದ್ರ

| Published : Aug 27 2024, 01:32 AM IST

ವಿಕಲಚೇತನರ ಸವಲತ್ತು ದುರ್ಬಳಕೆಯಾಗದಿರಲಿ: ಶಾಸಕ ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಆರಗ ಜ್ಞಾನೇಂದ್ರ ಅವರು ಕೇಂದ್ರ ಸರ್ಕಾರದ ಅನುದಾನದಲ್ಲಿ ತೀರ್ಥಹಳ್ಳಿ ತಾಲೂಕಿನ 50 ಮಂದಿ ವಿಕಲಚೇತನರಿಗೆ ₹3.80 ಲಕ್ಷ ವೆಚ್ಚದಲ್ಲಿ ವ್ಹೀಲ್ ಚೇರ್, ಏಯ್ಡ್ ಟ್ರ್ಯಸಿಕಲ್ ಮುಂತಾದ ಉಪಕರಣಗಳನ್ನು ವಿತರಿಸಿದರು.

ತೀರ್ಥಹಳ್ಳಿ: ವಿಕಲಚೇತನರ ಸ್ವಾವಲಂಬಿ ಬದುಕಿಗೆ ಪೂರಕವಾಗಿ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ನೀಡುವ ಸವಲತ್ತುಗಳು ದುರ್ಬಳಕೆ ಆಗಕೂಡದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕೇಂದ್ರ ಸರ್ಕಾರದ ಅನುದಾನದಲ್ಲಿ ಬೆಂಗಳೂರಿನ ಅಲಿಂ ಕೋ ಸಂಸ್ಥೆ ವತಿಯಿಂದ ತಾಲೂಕಿನ 50 ಮಂದಿ ವಿಕಲಚೇತನರಿಗೆ 3.80 ಲಕ್ಷ ರು. ವೆಚ್ಚದಲ್ಲಿ ವ್ಹೀಲ್ ಚೇರ್, ವಾಕಿಂಗ್ ಸ್ಟಿಕ್ ಹಿಯರಿಂಗ್ ಏಯ್ಡ್ ಟ್ರ್ಯಸಿಕಲ್ ಮುಂತಾದ ಉಪಕರಣಗಳನ್ನು ವಿತರಿಸಿ, ವಿಕಲಚೇತನರು ಪರಾವಲಂಬಿಗಳಾಗದಂತೆ ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಪ್ರಯತ್ನ ಆಗಬೇಕು. ಮುಖ್ಯವಾಗಿ ತಮ್ಮ ಕೆಲಸಗಳನ್ನು ತಾವೇ ನಿರ್ವಹಿಸುವಂತೆ ಉತ್ತೇಜನ ನೀಡುವಲ್ಲಿ ಈ ಉಪಕರಣಗಳು ಸಹಕಾರಿಯಾಗಲಿವೆ. ಈ ಉಪಕರಣಗಳು ವಿಕಲಚೇತನರನ್ನು ಹೊರತು ಪಡಿಸಿ ಉಳಿದವರು ಬಳಸಕೂಡದು ಎಂದೂ ಹೇಳಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ, ಅಲಿಂ ಕೋ ಸಂಸ್ಥೆಯ ಆದರ್ಶ ಸಿಂಗ್, ತಾಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತ ದಿವಾಕರ್ ಇದ್ದರು.