ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ: ತಹಸೀಲ್ದಾರ್‌

| Published : Mar 24 2025, 12:34 AM IST

ಸಾರಾಂಶ

ದಾಬಸ್‍ಪೇಟೆ: ದರಖಾಸ್ತು ಪೋಡಿ ಆಂದೋಲನದ ಭಾಗವಾಗಿ ರೈತರಿಗೆ ಬಹುಮಾಲಿಕತ್ವದ ಪಹಣಿಗಳನ್ನು ಏಕ ಮಾಲಿಕತ್ವಕ್ಕೆ ಮಾಡಿಕೊಡಲು ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಬಳಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಹಸೀಲ್ದಾರ್ ಅಮೃತ್ ಅತ್ರೇಶ್ ತಿಳಿಸಿದರು.

ದಾಬಸ್‍ಪೇಟೆ: ದರಖಾಸ್ತು ಪೋಡಿ ಆಂದೋಲನದ ಭಾಗವಾಗಿ ರೈತರಿಗೆ ಬಹುಮಾಲಿಕತ್ವದ ಪಹಣಿಗಳನ್ನು ಏಕ ಮಾಲಿಕತ್ವಕ್ಕೆ ಮಾಡಿಕೊಡಲು ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಬಳಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಹಸೀಲ್ದಾರ್ ಅಮೃತ್ ಅತ್ರೇಶ್ ತಿಳಿಸಿದರು.

ಸೋಂಪುರ ಹೋಬಳಿಯ ಕರಿಮಣ್ಣೆ, ತಟ್ಟೆಕೆರೆ, ನಿಡವಂದ ಗ್ರಾಮಗಳಲ್ಲಿ ರೈತರ ಜಮೀನಿಗೆ ತೆರಳಿ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವಾರ ಸೋಂಪುರ ಹೋಬಳಿ ವ್ಯಾಪ್ತಿಯ ಅಗಳಕುಪ್ಪೆ, ಕೃಷ್ಣಾಪುರ , ಕಾಮಲಾಪುರ, ದೇವರಹೊಸಹಳ್ಳಿ, ಬೀರಗೊಂಡನಹಳ್ಳಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿದ್ದಾರೆಂದು ಹೇಳಿದರು.

ಮುಂದೆ ಶೀಘ್ರವಾಗಿ ಇಡೀ ತಾಲ್ಲೂಕಿನಲ್ಲಿ ಸರ್ಕಾರದ ಆದೇಶದಂತೆ ಶಾಸಕರ ಸೂಚನೆಯಂತೆ ದರಖಾಸ್ತು ಪೋಡಿ ಆಂದೋಲನ ಮುಗಿಸುವ ಗುರಿ ಹೊಂದಿದ್ದು ಇದರಿಂದ 490 ಸರ್ವೆ ನಂಬರ್ ಗಳಲ್ಲಿ ಸರಿಸುಮಾರು ನಾಲ್ಕು ಸಾವಿರದಿಂದ ಐದು ಸಾವಿರ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

ಮುಖಂಡ ಅಗಳಕುಪ್ಪೆಗೋವಿಂದರಾಜು ಮಾತನಾಡಿ, ಹಲವು ವರ್ಷಗಳಿಂದ ರೈತರು ಜಮೀನಿನ ಮಾಲೀಕರಾಗಿದ್ದರೂ ಸರ್ಕಾರದ ಯಾವುದೇ ಸೌಲಭ್ಯ ಸಿಗದೆ ವಂಚಿತರಾಗುತ್ತಿದ್ದರು ಅಂತಹವರಿಗೆ ಆದ್ಯತೆ ನೀಡುವ ಉದ್ದೇಶದಿಂದ ನಮ್ಮ ಶಾಸಕರಾದ ಎನ್. ಶ್ರೀನಿವಾಸ್ ರವರ ಸೂಚನೆಯಂತೆ ದರಖಾಸ್ತು ಪೋಡಿ ಆಂದೋಲನ ನೆಲಮಂಗಲ ಕ್ಷೇತ್ರದಾದ್ಯಂತ ನಡೆಯುತ್ತಿದ್ದು ರೈತರಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಮುನಿರಾಜು, ಮುಖಂಡರಾದ ನಾಗರಾಜು, ಪಾರ್ಥ, ನಾರಾಯಣಸ್ವಾಮಿ, ಚಿಕ್ಕಣ್ಣ ರೈತರು ಹಾಜರಿದ್ದರು.

ಪೋಟೋ 7 :

ಸೋಂಪುರ ಹೋಬಳಿಯ ಕರಿಮಣ್ಣೆ, ತಟ್ಟೆಕೆರೆ, ನಿಡವಂದ ಗ್ರಾಮಗಳಲ್ಲಿ ನೆಲಮಂಗಲ ತಹಸೀಲ್ದಾರ್ ಅಮೃತ್ ಅತ್ರೇಶ್ ಭೇಟಿ ನೀಡಿ ರೈತರ ಜಮೀನಿಗೆ ತೆರಳಿ ಪರಿಶೀಲಿಸಿದರು.