ಸುಳ್ಳು ಹೇಳೋರನ್ನು ನಂಬಬೇಡಿ: ಸಚುವ ಸಿಆರ್‌ಎಸ್‌ ಮನವಿ

| Published : Apr 25 2024, 01:02 AM IST

ಸಾರಾಂಶ

ಹಾಸನದ ಜನರು ಉತ್ತಮ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಮಾಜಿ ಸಚಿವ ಪುಟ್ಟಸ್ವಾಮಿಗೌಡರ ಕುಟುಂಬದ ಕುಡಿಯನ್ನು ರಾಜಕೀಯವಾಗಿ ಬೆಳೆಸಲು ತೀರ್ಮಾನಿಸಿದ್ದಾರೆ. ಅದೇ ರೀತಿ ಜಿಲ್ಲೆಯ ಜನರು ಸ್ವಾಭಿಮಾನಿದ ಸಂಕೇತವಾಗಿರುವ ಸ್ಥಳೀಯ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜಿಲ್ಲೆಯ ಜನರು ಪ್ರಜ್ಞಾವಂತರಾಗಿದ್ದು, ಈ ಬಾರಿಯ ಚುನಾವಣೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆಯೋಜಿಸಿದ್ದ ಬೃಹತ್ ರೋಡ್ ಶೋನಲ್ಲಿ ಭಾಗಿಯಾಗಿ ಅನಂತ್ ರಾಂ ವೃತ್ತದ ಬಳಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಕನಕಪುರ, ರಾಮನಗರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ಮಧುಗಿರಿಯಲ್ಲಿ ಅಭಿವೃದ್ಧಿ ಮಾಡಿ ಈಗ ಮಂಡ್ಯಕ್ಕೆ ಬಂದಿದ್ದಾರೆ. ಮಂಡ್ಯ ನಮಗೇ ಬಿಟ್ಟು ಅವರು ಎಲ್ಲಿಯಾದರೂ ಹೋಗಲಿ ಎಂದರು.

ಹಾಸನದ ಜನರು ಉತ್ತಮ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಮಾಜಿ ಸಚಿವ ಪುಟ್ಟಸ್ವಾಮಿಗೌಡರ ಕುಟುಂಬದ ಕುಡಿಯನ್ನು ರಾಜಕೀಯವಾಗಿ ಬೆಳೆಸಲು ತೀರ್ಮಾನಿಸಿದ್ದಾರೆ. ಅದೇ ರೀತಿ ಜಿಲ್ಲೆಯ ಜನರು ಸ್ವಾಭಿಮಾನಿದ ಸಂಕೇತವಾಗಿರುವ ಸ್ಥಳೀಯ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರ ಆಟ ಸಾಕು. ದಯವಿಟ್ಟು ಅವರಿಗೆ ಕೈಮುಗಿಯುತ್ತೇವೆ ನಮ್ಮ ಜಿಲ್ಲೆಯನ್ನು ಬಿಟ್ಟುಕೊಡಿ. ನಿಮ್ಮ ತಂದೆ ಬೇಜಾರಾಗಿ ಪ್ರಚಾರ ನಿಲ್ಲಿಸಿ ಬೆಂಗಳೂರಿಗೆ ಹೋಗಿದ್ದಾರೆ. ದೇವೇಗೌಡರಿಗೆ ನೀವು ಮತ್ತು ನಿಮ್ಮ ಅಣ್ಣ ಕೊಟ್ಟಿರುವ ನೋವು ಗೊತ್ತಿದೆ. ನಾವು ಯಾರಿಗೂ ದ್ರೋಹ ಮಾಡಿಲ್ಲ. ಜಿಲ್ಲೆಯ ಜನರ ಸೇವೆ ಮಾಡಲು ಇವರ ಕೈಯಲ್ಲಿ ಬೈಯಿಸಿಕೊಂಡು, ಸುಳ್ಳು ಹೇಳಿಸಿಕೊಂಡು ನಾವು ಕಣ್ಣೀರು ಹಾಕುವ ಪರಿಸ್ಥಿತಿಗೆ ಬಂದಿದ್ದೇವೆ. ಎಲ್ಲಿಂದಲೋ ಬಂದು ಸುಳ್ಳು ಹೇಳುವವರನ್ನು ನಂಬಬೇಡಿ ಎಂದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಗೆಲುವಿನ ಹಿಂದೆ ನಾವು ಹಿನ್ನೆಲೆ ಗಾಯಕರಾಗಿದ್ದವು. ನಿಮ್ಮಗಳ ಆಶೀರ್ವಾದದಿಂದ ಗೆದ್ದಿದ್ದರು. ಇದನ್ನು ಅಂಬರೀಶ್ ಮತ್ತು ಸುಮಲತಾ ಅಭಿಮಾನಿಗಳು ಅರ್ಥ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಮುಂದಾಗಬೇಕು. ಇದರಿಂದ ಸರ್ಕಾರದಿಂದ ದಕ್ಷತೆಯಿಂದ ಅನುದಾನ ಕೇಳಲು ಸಹಕಾರಿಯಾಗಲಿದೆ ಎಂದು ಕಣ್ಣೀರಿಟ್ಟರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ನಿಕಟಪೂರ್ವ ಅಧ್ಯಕ್ಷ ಕೆ.ಜೆ.ದೇವರಾಜು, ಮುಖಂಡರಾದ ಸುಜಾತಾ ಕೆ.ಎಂ.ಪುಟ್ಟು, ಆರ್.ಎನ್.ವಿಶ್ವಾಸ್, ಎಂ.ಎಲ್.ಸುರೇಶ್ ಇದ್ದರು.