ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡನಿವೃತ್ತ ಡಿವೈಎಸ್ಪಿ ಎಂ ಪಾಷಾ

| Published : Sep 03 2025, 01:00 AM IST

ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡನಿವೃತ್ತ ಡಿವೈಎಸ್ಪಿ ಎಂ ಪಾಷಾ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಈ ಶಾಲೆಗಳಲ್ಲಿ ಓದಿದವರು ದೇಶ ಕಟ್ಟುವ ವಿಜ್ಞಾನಿಗಳು, ಕವಿಗಳು, ಎಂಜಿನಿಯರಗಳು, ಡಾಕ್ಟರ್‌ ಇನ್ನೂ ಹತ್ತಾರು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ರಾಷ್ಟ್ರದ ಗಮನ ಸಳೆದಿದ್ದಾರೆ. ಆದ್ದರಿಂದ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನಿವೃತ್ತ ಡಿ.ವೈಎಸ್‌ಪಿ ಎಂ.ಪಾಷಾ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಈ ಶಾಲೆಗಳಲ್ಲಿ ಓದಿದವರು ದೇಶ ಕಟ್ಟುವ ವಿಜ್ಞಾನಿಗಳು, ಕವಿಗಳು, ಎಂಜಿನಿಯರಗಳು, ಡಾಕ್ಟರ್‌ ಇನ್ನೂ ಹತ್ತಾರು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ರಾಷ್ಟ್ರದ ಗಮನ ಸಳೆದಿದ್ದಾರೆ. ಆದ್ದರಿಂದ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನಿವೃತ್ತ ಡಿ.ವೈಎಸ್‌ಪಿ ಎಂ.ಪಾಷಾ ಕರೆ ನೀಡಿದರು.

ತಾಲೂಕಿನ ಮಿಡಿಗೇಶಿ ಹೋಬಳಿ ನೇರಳೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಎಂ.ಎ.ಎಸ್‌.ಚಾರಿಟಬಲ್‌ ಟ್ರಸ್ಟ್‌ನಿಂದ ಶಾಲಾ ಮಕ್ಕಳಿಗೆ ನೋಟ್‌ ಪುಸ್ತಕ, ಬ್ಯಾಗು, ಆಂಗ್ಲ ಮಾಧ್ಯಮ ಪುಸ್ತಕಗಳು ಹಾಗೂ ವಿವಿಧ ಸಾಮಗ್ರಿಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳು ಆಸಕ್ತಿ ವಹಿಸಿ ದೇಶಭಕ್ತರ ಜೀವನ ಚರಿತ್ರೆಗಳನ್ನು ಓದಿ ಉನ್ನತ ಮತ್ತು ಉದಾರ ಮನೋಭಾವ ಬೆಳಸಿಕೊಂಡು ಹೆತ್ತವರಿಗೆ ,ವಿದ್ಯೆ ಕಲಿಸಿದ ಗುರು ಹಿರಿಯರಿಗೆ ಗೌರವ ನೀಡುವ ನಮ್ಮ ಸಂಸ್ಕೃತಿ-ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸತ್ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದರು.

ಎಂ.ಎ.ಎಸ್.ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಶಿವರಾಮ್‌ ಶಟ್ಟಿ ಮಾತನಾಡಿ, ನಾನು ಈಗ್ಗೆ 40 ವರ್ಷಗಳಿಂದ ಈ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ನೋಟ್‌ ಪುಸ್ತಕ ವಿತರಿಸುತ್ತಾ ಬಂದಿದ್ದೇನೆ. ಖಾಸಗಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಯಾವುದರಲ್ಲೂ ಕಡಿಮೆ ಇರಬಾರದು. ಇಲ್ಲಿ ಓದುವ ಮಕ್ಕಳು ಇನ್ನೂ ಹೆಚ್ಚು ಪ್ರತಿಭಾವಂತರಾಗಬೇಕು ಎಂಬುದು ನನ್ನ ಆಶಯ. ಹಾಗಾಗಿ ನಮ್ಮ ಗ್ರಾಮದ ಮಕ್ಕಳಿಗೆ ಓದಲು, ಬರೆಯಲು ಯಾವುದೇ ರೀತಿಯ ಕೊರತೆ ಆಗ ಬಾರದೆಂಬುದು ನನ್ನ ಇಚ್ಚೆ . ಬೇರೆ ದೇಶದಲ್ಲಿ ಸರ್ಕಾರಗಳು ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡುತ್ತಿವೆ. ಆದರೆ ನಮ್ಮ ದೇಶದಲ್ಲಿ ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡದೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೆಚ್ಚು ಮಣೆ ಹಾಕುತ್ತಿದೆ. ಇದು ಸರಿಯಲ್ಲ, ಸರ್ಕಾರ ಸರ್ಕಾರಿ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಿ ಮೂಲಸೌಲಭ್ಯ ಒದಗಿಸಿ ಗಟ್ಟಿಯಾಗಿ ಬೆಳಸಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಯ್ಯ ಮಾತನಾಡಿ, ದಾನಿಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಬೆನ್ನು ತಟ್ಟಿದರೆ ಮಕ್ಕಳಲ್ಲಿ ಮತ್ತು ಗ್ರಾಮಸ್ಥರಲ್ಲಿ ಶಾಶ್ವತವಾಗಿ ನೆನಪು ಉಳಿಯುತ್ತದೆ. ನಮ್ಮ ಶಿಕ್ಷಕರು ಸಹ ಪ್ರಮಾಣಿಕವಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶ್ರಮಿಸುತ್ತಿದ್ದೇವೆ ಎಂದರು.

ಲೇಖಕ ಎನ್‌.ಎಸ್‌.ಈಶ್ವರಪ್ರಸಾದ್‌ ಮಾತನಾಡಿ,ನೇರಳೆಕೆರೆ ಹಿರಿಯ ಪ್ರಾಥಮಿಕ ಶಾಲೆಗೆ ದಿವಂಗತ ಚನ್ನಕೃಷ್ಣಪ್ಪ ,ಎ.ಶಿವರಾಮ್‌ ಶಟ್ಟಿ ಹಾಗೂ ಎಂ.ಪಾಷ ನಮ್ಮ ಶಾಲೆಯ ಅಬಿವೃದ್ಧಿಗೆ ಹೆಚ್ಚು ಕೊಡುಗೆ ನೀಡಿದ್ದಾರೆ ಅವರ ಸೇವೆ ಅನನ್ಯ ಎಂದರು.

ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸುನಿತಾ,ನಿವೃತ್ತ ಅಧಿಕಾರಿಗಳಾದ ನರಸಿಂಹಮೂರ್ತಿ, ಶ್ರೀಕಾಂತ್‌, ರಂಗಸ್ವಾಮಿ, ಸಮಿಉಲ್ಲಾ, ದಾದಾಪೀರ್,ಚಂದ್ರಪ್ಪ ಇದ್ದರು. ಶಿಕ್ಷಕ ತಿಪ್ಪೇಸ್ವಾಮಿ ಸ್ವಾಗತಿಸಿ ಶಿಕ್ಷಕಿ ಮಮತಾ ನಿರೂಪಿಸಿ ವಂದಿಸಿದರು.