ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಬ್ಯಾಂಕ್ ಹೆಸರು ಹೇಳಿ ಸೈಬರ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಸೈಬರ್ ಖದೀಮರ ಆಸೆ ಆಮೀಷಗಳಿಗೆ ಒಳಗಾಗದಿರುವಂತೆ ಕೆನರಾ ಬ್ಯಾಂಕ್ ಎ.ಜಿ.ಎಂ ಪ್ರಾದೇಶಿಕ ಮುಖ್ಯಸ್ಥ ಎಂ.ಪನಿಶಯನ ಹೇಳಿದರು.ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಸವಪ್ರಭು. ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕೆನರಾ ಬ್ಯಾಂಕ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಚಿಕ್ಕೋಡಿಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಆರ್ಥಿಕ ಸಾಕ್ಷರತೆ ಮತ್ತು ಸೈಬರ್ ಅಪರಾಧ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದುಕೊಂಡವರಿಗೆ ಜೀವದ ಬೆಲೆ ಗೊತ್ತಿರುತ್ತದೆ. ಆ ನಿಟ್ಟಿನಲ್ಲಿ ಎಲ್ಲರು ಸರ್ಕಾರ ಹಾಗು ಬ್ಯಾಂಕ್‌ಗಳಲ್ಲಿ ಲಭ್ಯವಿರುವ ಇನ್ಸೂರನ್ಸ್ ಮಾಡಿಸಿ ಬೃಹತ್ ಹಾನಿ ತಪ್ಪಿಸಿ. ಕೆನರಾ ಬ್ಯಾಂಕ್‌ನಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೆ ಕ್ಯಾನ್ಸರ್ ಚಿಕಿತ್ಸೆ ಇನ್ಸುರನ್ಸ್ ಲಾಭ ಪಡೆಯಬಹುದು. ನಿರ್ಜೀವ ವಸ್ತುಗಳ, ವಾಹನಗಳ ಇನ್ಸುರನ್ಸ್‌ಗಳಿಂದ ಜೀವವಿರುವ ಮನುಷ್ಯ ಇನ್ಸುರನ್ಸ್ ಎಲ್ಲರ ಜವಾಬ್ದಾರಿ ಎಂದು ಹೇಳಿದರು.ಆರ್‌ಬಿಐ ಮ್ಯಾನೇಜರ್ ಚೇತನಕುಮಾರ ಮಾತನಾಡಿ, ಒತ್ತಡ, ಭಯಕ್ಕೆ, ಆಸೆ ಆಮೀಷಗಳನ್ನು ಒಡ್ಡಿ ಸೈಬರ್ ಕಳ್ಳರು ವಂಚಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಇಂದಿನ ಸಮಾಜ ಎಚ್ಚರಿಕೆ ವಹಿಸಬೇಕಾಗಿದೆ. ಓಟಿಪಿ, ಸಿವಿವಿ ಯಾರೊಂದಿಗೂ ಹಂಚಿಕೊಳ್ಳದಿರಿ, ಅಪರಿಚಿತ ವ್ಯಕ್ತಿಗಳಿಂದ ಸಮಾಜಿಕ ಜಾಲತಾಣಗಳಲ್ಲಿ ಜಾಗರುಕರಾಗಿರಿ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಇತರೆ ಫ್ರೀ ವೈಪೈ ಆಮೀಷಕ್ಕೆ ಒಳಗಾಗದಿರಿ. ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಸೈಬರ್ ಅಪರಾಧದ ಬಗ್ಗೆ ಮಾಹಿತಿ ಪಡೆಯಿರಿ. ಸಾಮಾಜಿಕ ಜಾಲತಾಣದ ಸಣ್ಣ ನಿರ್ಧಾರ ಮನುಷ್ಯನ ದಿಕ್ಕನ್ನು ಬದಲಿಸುತ್ತದೆ ಎಂದರು. ಅತಿಥಿಗಳಾಗಿ ಮಾತನಾಡಿದ ಕೆಎಲ್‌ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ದರ್ಶನ ಬಿಳ್ಳುರ, ಇಂದಿನ ದಿನಗಳಲ್ಲಿ ಯುವ ಜನತೆ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುತ್ತಿದ್ದಾರೆ. ಅವರು ಸೈಬರ್ ಅಪರಾಧ ಪ್ರಕರಣಗಳ ಕುರಿತು ಅರಿವು ಬೆಳೆಸಿಕೊಳ್ಳಬೇಕು ಹಾಗೂ ಹಣಕಾಸು ಹಂಚಿಕೆ ಮತ್ತು ಹೂಡಿಕೆ, ವಿಮೆ ಯೋಜನೆ ಕಡ್ಡಾಯವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.ಬಿ.ಕೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕೋಡಿ ಘಟಕದ ಅಧ್ಯಕ್ಷ ರಾಜೇಂದ್ರ ಕೋಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಗೋಡಕೆ, ಉಪ ಪ್ರಾಚಾರ್ಯ ಸುಧೀರ ಕೋಟಿವಾಲೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ, ಎಂ.ಸಿ.ಎ ಮುಖ್ಯಸ್ಥ ಸುನೀಲ ಶಿಂಧೆ, ಎಂಬಿಎ ಮುಖ್ಯಸ್ಥ ಡಾ.ಸಂಜಯ ಹಣಗಂಡಿ, ಡಾ.ವಿನಾಯಕ ಮಂಜಲಪೂರ ಉಪಸ್ಥಿತರಿದ್ದರು. ಅರವಿಂದ ಸ್ವಾಗತಿಸಿದರು. ಜಗದೀಶ ಮುಧೋಳ, ಮಧು ಮುನಸೆ ಹಾಗೂ ಅಚಲ ಮೋಹಿತೆ ನಿರೂಪಿಸಿದರು. ತೇಜಸ್ವಿನಿ ದುಂಡಗೆ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))