ಮಾಧ್ಯಮಗಳು ಸುದ್ದಿ ನೀಡುವ ಭರದಲ್ಲಿ ನೈತಿಕತೆ ಮರೆಯದಿರಲಿ: ಡಾ. ವಿನಯಾ ಜಿ. ನಾಯಕ

| Published : Oct 02 2024, 01:09 AM IST

ಮಾಧ್ಯಮಗಳು ಸುದ್ದಿ ನೀಡುವ ಭರದಲ್ಲಿ ನೈತಿಕತೆ ಮರೆಯದಿರಲಿ: ಡಾ. ವಿನಯಾ ಜಿ. ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಯುವಪೀಳಿಗೆ ಜಗತ್ತಿನ ಆಗುಹೋಗುಗಳನ್ನು ಅರಿಯಬೇಕಾಗಿದೆ. ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕಾಗಿದೆ. ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು.

ದಾಂಡೇಲಿ: ಸುದ್ದಿ ಮಾಧ್ಯಮಗಳು ಆಧುನಿಕ ಕೊಡುಗೆ. ಸಮಾಜಕ್ಕೆ, ಉತ್ತಮ ಸಂವಹನಕ್ಕೆ ಪತ್ರಿಕೆಗಳೆ ಜೀವಾಳ. ಸುದ್ದಿ ನೀಡುವ ಭರದಲ್ಲಿ ನೈತಿಕತೆಯನ್ನು ಮರೆಯಬಾರದು. ಸುದ್ದಿ ಹೇಳುವ ಸ್ಥಿತಿಯಿಂದ ಸುದ್ದಿ ವಿಶ್ಲೇಷಣೆ ಮಾಡುವಂತ ಹಂತಕ್ಕೆ ಬಂದಿರುವುದು ಖೇದಕರ ಎಂದು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿನಯಾ ಜಿ. ನಾಯಕ ತಿಳಿಸಿದರು.ದಾಂಡೇಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ, ಶಿರಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಧ್ಯಮ ಮತ್ತು ಯುವ ಜನತೆ ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿದರು.

ಪತ್ರಿಕೆಗಳಿಗೆ ಮನೆ ಹೆಂಗಸಿನ ಗುಣ ಇರಬೇಕು ಎಂದು ಲಂಕೇಶ ಹೇಳುತ್ತಿದ್ದರು. ಆ ದಿನಗಳಲ್ಲಿ ಪತ್ರಿಕೋದ್ಯಮ ಕಂಡ ಉಚ್ಚಾಯ ಸ್ಥಿತಿ ಇಂದು ಕಾಣುತ್ತಿಲ್ಲ. ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವದಕ್ಕೆ ಎಲ್ಲ ಪತ್ರಿಕೆ ಆದ್ಯತೆ ನೀಡಬೇಕು ಎಂದರು.

ಯುವಪೀಳಿಗೆ ಜಗತ್ತಿನ ಆಗುಹೋಗುಗಳನ್ನು ಅರಿಯಬೇಕಾಗಿದೆ. ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕಾಗಿದೆ. ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ವಿವಿಧ ರೀತಿಯ ದೃಶ್ಯಮಾಧ್ಯಮ, ಅಕ್ಷರ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿ ಹಾಗೂ ವಿಷಯಗಳನ್ನು ಅರಿತು ಉತ್ತಮಾಂಶಗಳನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಅಶ್ಪಾಕ್‌ ಶೇಖ್‌ ಮಾತನಾಡಿ, ಪತ್ರಿಕೋದ್ಯಮವು ಸರ್ಕಾರದ ಒಂದು ಅಂಗವಾಗಿ ಗುರುತಿಸಿಕೊಂಡಿದೆ. ಸಾಮಾಜಿಕ ಬದಲಾವಣೆ ಇದರಿಂದ ಸಾಧ್ಯವಾಗುತ್ತದೆ. ಯುವಕರು ವಿದ್ಯಾಭ್ಯಾಸ, ಆರೋಗ್ಯದ ಜತೆ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿರಸಿಯ ಸುಬ್ಬರಾಯ ಭಟ್ ಬಕ್ಕಳ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಂಘಟನೆಯ ಸದಸ್ಯ ಬಸವರಾಜ ಪಾಟೀಲ, ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಕೊಡೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ ವಹಿಸಿ ಮಾತನಾಡಿದರು.

ದಾಂಡೇಲಿ ಪ್ರೆಸ್ ಕ್ಲಬ್‌ನ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ಸ್ವಾಗತಿಸಿದರು. ಅಧ್ಯಕ್ಷ ಸಂದೇಶ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪತ್ರಿಕಾ ಸಂಘದ ಸದಸ್ಯ ಯು.ಎಸ್. ಪಾಟೀಲ ನಿರೂಪಿಸಿದರು. ಸಂಘದ ಸದಸ್ಯ ಪ್ರವೀಣಕುಮಾರ ಸುಲಾಖೆ ವಂದಿಸಿದರು.