ಸಂಸ್ಕೃತಿಯ ತಳಹದಿ ಶ್ರದ್ಧೆಯಾಗಿದ್ದು, ಮೂಲ ಆಶಯ ಮರೆಯಬಾರದು, ತಂದೆ, ತಾಯಿಗೆ ನಮಸ್ಕರಿಸುವುದು, ಭಗವಂತ ಇದ್ದಾನೆ ಎಂಬ ನಂಬಿಕೆ ತಿಳಿಸಿ, ಏಕೆಂದರೆ ಶಿಕ್ಷಣವು ಆತ್ಮವಿಶ್ವಾಸ ಕಲಿಸಬೇಕಿದೆ. ಎಲ್ಲಾ ಅನುಭವಗಳ ಸಾರವಾದ ಸಂಸ್ಕಾರ ನೀಡಿದಾಗ ಮನುಷ್ಯ ಸುಸಂಸ್ಕೃತನಾಗುತ್ತಾನೆ.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಸಂಸ್ಕೃತಿಯ ತಳಹದಿ ಶ್ರದ್ಧೆಯಾಗಿದ್ದು, ಮೂಲ ಆಶಯ ಮರೆಯಬಾರದು, ತಂದೆ, ತಾಯಿಗೆ ನಮಸ್ಕರಿಸುವುದು, ಭಗವಂತ ಇದ್ದಾನೆ ಎಂಬ ನಂಬಿಕೆ ತಿಳಿಸಿ, ಏಕೆಂದರೆ ಶಿಕ್ಷಣವು ಆತ್ಮವಿಶ್ವಾಸ ಕಲಿಸಬೇಕಿದೆ. ಎಲ್ಲಾ ಅನುಭವಗಳ ಸಾರವಾದ ಸಂಸ್ಕಾರ ನೀಡಿದಾಗ ಮನುಷ್ಯ ಸುಸಂಸ್ಕೃತನಾಗುತ್ತಾನೆ ಎಂದು ಚಿಂತಕ, ವಾಗ್ಮಿ ಡಾ.ಗುರುರಾಜ್ ಕರ್ಜಗಿ ಅಭಿಪ್ರಾಯಪಟ್ಟರು.

ಕುಂಬಳೂರಿನ ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ರಾತ್ರಿ ಜರುಗಿದ ಚಿಟ್ಟಕ್ಕಿ ಸಾಂಸ್ಕೃತಿಕ ಹಬ್ಬದಲ್ಲಿ ಉಪನ್ಯಾಸ ನೀಡಿ ಜಗತ್ತು ಕೆಟ್ಟಿಲ್ಲ ನೋಡುವ ಕಣ್ಣುಗಳು ಕೆಟ್ಟಿವೆ, ಮಗು ವಜ್ರವಿದ್ದಂತೆ, ಭವಿಷ್ಯದ ನಾಯಕ, ಪೋಷಕರು ಅವರಿಗೆ ಮೆಂಟರಿಂಗ್ ಶಿಕ್ಷಣ ನೀಡಬೇಕು ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಕುಮಾರ್ ಮಾತನಾಡಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಒಳಾಂಗಣ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಪಿಯು ಕಾಲೇಜು ಆರಂಭಿಸುವ ಚಿಂತನೆ ಇದೆ ಎಂದರು.

ಬಿಇಒ ಹನುಮಂತಪ್ಪ ಚಿಟ್ಟಕ್ಕಿ ವೆಬ್‌ಸೈಟ್‌ ಅನಾವರಣಗೊಳಿಸಿದರು. ಸಂಸ್ಥಾಪಕ ಚಿಟ್ಟಕ್ಕಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಚಿಟ್ಟಕ್ಕಿ ಸುಧಾ, ಕಾರ್ಯದರ್ಶಿ ಮಹಾಂತೇಶ್, ಪ್ರಾಂಶುಪಾಲ ಚೇತನ್‌ ಕುಮಾರ್, ಶಿಕ್ಷಕಿ ಅಖಿಲೇಶ್ವರಿ ವಾರ್ಷಿಕ ವರದಿ ಮಂಡಿಸಿದರು. ಶಶಿಕುಮಾರಿ ಧನ್ಯವಾದ ಹೇಳಿದರು. ಮಕ್ಕಳು ರೈತರ ಗೀತೆಗಳಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಸಾವಿರಾರು ಪೋಷಕರಿದ್ದರು.