ನಾಡು-ನುಡಿಗಾಗಿ ಧ್ವನಿ ಎತ್ತಲು ಹಿಂದೇಟು ಬೇಡ: ಶಶಿಧರ

| Published : Nov 05 2024, 12:35 AM IST

ನಾಡು-ನುಡಿಗಾಗಿ ಧ್ವನಿ ಎತ್ತಲು ಹಿಂದೇಟು ಬೇಡ: ಶಶಿಧರ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಕನ್ನಡಪರ ಸಂಘಟನೆಗಳು ನಾಡು, ನುಡಿಗಾಗಿ ಧ್ವನಿ ಎತ್ತುವ ಜೊತೆಗೆ ಸಾಮಾಜಿಕ ಕಳಕಳಿ ಹಾಗೂ ಜನಸ್ನೇಹಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ನಮ್ಮ ಕನ್ನಡಿಗರ ವಿಜಯಸೇನೆ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಶಶಿಧರ ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ:

ಕನ್ನಡಪರ ಸಂಘಟನೆಗಳು ನಾಡು, ನುಡಿಗಾಗಿ ಧ್ವನಿ ಎತ್ತುವ ಜೊತೆಗೆ ಸಾಮಾಜಿಕ ಕಳಕಳಿ ಹಾಗೂ ಜನಸ್ನೇಹಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ನಮ್ಮ ಕನ್ನಡಿಗರ ವಿಜಯಸೇನೆ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಶಶಿಧರ ಹಿರೇಮಠ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ 22 ಪದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಿ ಮಾತನಾಡಿದ ಅವರು, ನಾಡಿನ ಇತಿಹಾಸ, ನೆಲ-ಜಲ, ಭಾಷಾ ಹೋರಾಟಗಳ ಜತೆಗೆ ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಸಮಗ್ರ ಅಭಿವೃದ್ಧಿಗಾಗಿ ಹೋರಾಟಗಳನ್ನು ರೂಪಿಸೋಣ ಎಂದರು.ಸಂಘಟನೆ ಬಲಿಷ್ಠ ಮತ್ತು ಶಕ್ತಿಯುತವಾಗಿ ಬೆಳೆಯಬೇಕಾದರೆ ಒಗ್ಗಟ್ಟು ಮತ್ತು ಗುರಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ನಮ್ಮ ಗುರಿಗಳು ಹಾಗೂ ಹೋರಾಟಗಳು ಮುಂದಿನ ಯುವ ಪೀಳಿಗೆಗೆ ಮಾದರಿ ಆಗಬೇಕು ಎಂದು ತಾಲೂಕು ಅಧ್ಯಕ್ಷ ಪ್ರಕಾಶಗೌಡ ಪಾಟೀಲ್ ತಿಳಿಸಿದರು.ನೂತನ ಆಯ್ಕೆಯಾಗಿರುವ ಪದಾಧಿಕಾರಿಗಳು ಕುಟುಂಬದ ಸದಸ್ಯರಂತೆ ಸಂಘಟನೆ ನಡೆಸಿಕೊಂಡು ಹೋಗಬೇಕು. ಅನ್ಯಾಯದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ಕನ್ನಡಿಗರ ವಿಜಯಸೇನೆ ತಾಲೂಕು ಉಪಾಧ್ಯಕ್ಷ ಬಸಯ್ಯ ಹಿರೇಮಠ, ನೂತನ ಪದಾಧಿಕಾರಿಗಳಾದ ಸಿದ್ದಣ್ಣ ಬ್ಯಾಲಾಳ, ಬಸನಗೌಡ ಬಿರಾದಾರ, ಮಹಾಂತೇಶ್ ಹಡಪದ, ರಾಮನಗೌಡ ಯರಗಲ್ಲ, ಸುನೀಲ ಸಂಗಮ, ಕಾಶಿರಾಯ ಯಾಳವಾರ, ಮಹಾಂತೇಶ್ ಮಂಕಣಿ, ಸುರೇಶಗೌಡ ಪಾಟೀಲ್, ಬಸಯ್ಯ ಹಿರೇಮಠ, ಶೇಖು ಹಡಪದ, ಯಲ್ಲಾಲಿಂಗ ಗೋಟೂರ, ಅಂಬರೀಶ ಯಳವಾರ, ಚಂದ್ರಶೇಖರ ಸಂಗಮ, ಲೋಹಿತ್ ಸೇರಿ ಇತರರು ಇದ್ದರು.