ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ (ಯಾದಗಿರಿ ಜಿಲ್ಲೆ)
ಜಮೀನಿಗೆ ನುಗ್ಗಿದ ದನ, ಕರು, ಕಾಡು ಹಂದಿಗಳನ್ನೇ ಸುಮ್ಮನೆ ಬಿಡುವುದಿಲ್ಲ. ಇನ್ನು ಬೇರೆಯವರು ಜಮೀನಿಗೆ ಬಂದರೆ ಸುಮ್ಮನೆ ಬಿಡ್ತೀವಾ? ಹಿಂದೆ ನಮ್ಮ ಅಜ್ಜ ಮುತ್ತಜ್ಜನವರನ್ನು ಕೇಳಿನೋಡಿ ಜಮೀನಿನ ಬದುವಿಗಾಗಿ ಏನೇನು ನಡೆದಿವೆ ಎಂದು. ಅದನ್ನು ಅರ್ಥ ಮಾಡಿಕೊಂಡು ಸುಮ್ಮನೆ ಇದ್ದರೆ ಸರಿ ಇಲ್ಲದೆ ಹೋದರೆ ಮುಂದೆ ಏನಾಗುತ್ತದೆಂದು ನಿಮಗೆ ಗೊತ್ತಾಗುತ್ತದೆ ಎಂದು ಮಾಜಿ ಸಚಿವ ರಾಜುಗೌಡ ಅವರ ವಕ್ಫ್ ಅಕ್ರಮ ಸೇರ್ಪಡೆ ವಿರುದ್ಧ ವಾಗ್ದಾಳಿ ನಡೆಸಿದರು.ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ವಕ್ಫ್ ವಿರುದ್ಧದ ಪ್ರತಿಭಟನಾ ಮೆರವಣಿಗೆಯಲ್ಲಿ ಹಲಿಗೆ ಬಾರಿಸುವ ಮೂಲಕ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇನ್ನು ಕೆಲವೇ ದಿನದಲ್ಲಿ ಕಾಂಗ್ರೆಸ್ ಸರ್ಕಾರ ಆ್ಯಂಬುಲೆನ್ಸ್ ನ ಜೊತೆಯಲ್ಲಿ ಹೋಗುತ್ತದೆ. ಕಾಲ ದೂರವಿಲ್ಲ. ನಮ್ಮಅಜ್ಜ, ಮುತ್ತಾತ ನಿಂದ ಬಂದ ಪಿತ್ರಾರ್ಜಿತ ಆಸ್ತಿಯಲ್ಲಿ ಅಕ್ರಮವಾಗಿ ವಕ್ಫ್ ಸೇರಿಸುತ್ತಿರಲ್ಲ ನಿಮಗೆ ಮಾನ ಮರ್ಯಾದೆ ನಾಚಿಕೆ ಏನಾದರೂ ಇದೆಯಾ ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡನ ಆಸ್ತಿ ಕಸಿದುಕೊಳ್ಳುತ್ತಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳು ಶಿಕ್ಷಣ ಕಲಿಯಲು ನಗರಕ್ಕೆ ಬರಬೇಕಾದರೆ ಸರಿಯಾದ ಸಾರಿಗೆ ಸಿಗುತ್ತಿಲ್ಲ. ಶಕ್ತಿ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳನ್ನು ನಿಶಕ್ತಿ ಮಾಡಿದೆ. ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗೆ ಅಸಲಿ ಮುಖ ಎಂದ ಅವರು, ರೈತ ಬಾಂಧವರೇ ಹುಷಾರ್. ರಸ್ತೆ ಬದಿಯಲ್ಲಿ ಭತ್ತ ಹಾಕಿದ್ದೀರಿ. ಕಾಂಗ್ರೆಸ್ ಸರ್ಕಾರ ಅದಕ್ಕೂ ನಿಮಗೆ ನೋಟಿಸ್ ಕೊಟ್ಟು ಭತ್ತ ಕಸಿದುಕೊಳ್ಳಬಹುದು ಎಚ್ಚರವಾಗಿರಿ. ಯಾಕೆಂದರೆ ನಮ್ಮ ಪಿತ್ರಾರ್ಜಿತ ಆಸ್ತಿಯನ್ನೇ ವಕ್ಫ್ ಹೆಸರಲ್ಲಿ ಬಡ ರೈತರ ಜಮೀನು ಕಸಿದುಕೊಳ್ಳುತ್ತಿದೆ. ಇನ್ನುಭತ್ತ ಬಿಡುತ್ತಾರಾ.? ನೀವೇ ಹೇಳಿ ಎಂದರು.ಸಿದ್ದರಾಮಣ್ಣ ಪೂಜಾರಿಗಳ ಆಸ್ತಿಯನ್ನೇ ಬಿಟ್ಟಿಲ್ಲ. ಇನ್ನ ಬೇರೆಯವರ ಆಸ್ತಿ ಬಿಡುತ್ತಾರಾ.? ನೀವೇ ಹೇಳಿ.
ಮುಂದಿನ ಭಾವಿ ಮುಖ್ಯಮಂತ್ರಿ ಬಿವೈ ವಿಜಯೇಂದ್ರ ಅವರು ಸರ್ಕಾರದ ವಿರುದ್ಧ ರೈತರ ಜಮೀನಿನ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ರಾಜ್ಯದ ಜನ, ರೈತರು, ಮಠಾಧೀಶರು, ಬೆಂಬಲ ನೀಡುತ್ತಿದ್ದಾರೆ. ಸತ್ಯಕ್ಕೆ ಯಾವತ್ತಿದ್ದರೂ ಜಯ. ರೈತರೇ ಚಿಂತಿಸಬೇಡಿ ನಿಮ್ಮ ಬೆನ್ನಿಗೆ ಬಿಜೆಪಿ ಇದೆ ಎನ್ನುವುದು ಮರೆಯಬೇಡಿ. ನಿಮ್ಮ ಜಮೀನಿನ ಒಂದು ಹಿಡಿ ಮಣ್ಣು ವಕ್ಫ್ ಪಾಲಾಗಲು ಬಿಡುವುದಿಲ್ಲ. ಎಂದು ರೈತರಿಗೆ ಭರವಸೆ ನೀಡಿದರು.ಈ ಪ್ರತಿಭಟನೆಯಲ್ಲಿ, ಬಿಜೆಪಿಯ ಹಿರಿಯ ಮುಖಂಡ ಬಸವರಾಜಪ್ಪ ವಿಭೂತಿಹಳ್ಳಿ, ಡಾ. ಚಂದ್ರಶೇಖರ್ ಸುಬೇದಾರ್, ನಾಗರತ್ನ ಕುಪ್ಪಿ, ಚಂದ್ರಶೇಖರ್ ಮಾಗನೂರು, ಅಡಿವೆಪ್ಪ ಸಾಹು ಜಾಕಾ, ಗುರುಕಾಮಾ, ದೇವಿಂದ್ರನಾಥ್ ನಾದ, ಚಂದ್ರಶೇಖರ್ ಯಾಳಗಿ, ತಿರುಪತಿ ಹಟ್ಟಿ ಕಟ್ಟಿಗಿ, ಭಾರತಿ ಜಮಖಂಡಿ, ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಪದಾಧಿಕಾರಿಗಳು ಇದ್ದರು.
-----.....ಕೋಟ್...
ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಡತನದಿಂದ ವರ್ತಿಸುತ್ತಿದ್ದಾರೆ. ಬಡ ರೈತರ ಜಮೀನು, ಮಠ, ಮಂದಿರ ದೇವಸ್ಥಾನಗಳು ವಕ್ಫ್ ಆಸ್ತಿ ಆಗಲು ಬಿಡುವುದಿಲ್ಲ. ರೈತರ ಉಳಿಬೇಕಾಗಿ ಎಂಥ ತ್ಯಾಗಕ್ಕಾದರೂ ಸಿದ್ಧವಿದ್ದೇವೆ.- ಅಮೀನ್ ರೆಡ್ಡಿ ಯಾಳಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ.
-----ಫೋಟೊ: ಶಹಾಪುರ ನಗರದಲ್ಲಿ ಬಿಜೆಪಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಹಲಗೆ ಬಾರಿಸುವ ಮೂಲಕ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ರಾಜುಗೌಡ ಭಾಗವಹಿಸಿ ಮಾತನಾಡಿದರು.
5ವೈಡಿಆರ್10