ಸಾರಾಂಶ
Don't let injustice happen to farmers due to Waqf confusion: Former minister Raju Gowda
- ರೈತರ ಪಹಣಿ ದೋಷ ಸರಿಪಡಿಸದೆ ಉಗ್ರ ಹೋರಾಟ: ಮಾಜಿ ಸಚಿವ ರಾಜೂಗೌಡ
ಕನ್ನಡಪ್ರಭ ವಾರ್ತೆ ಹುಣಸಗಿಜಿಲ್ಲೆಯಲ್ಲಿ ಸ್ವಂತ ಮಾಲೀಕತ್ವ ಹೊಂದಿದ ರೈತರ ಜಮೀನುಗಳನ್ನು ವಕ್ಫ್ ಎಂದು ಪಹಣಿ ನೋಂದಣಿಯಾದರೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾದ್ಯಕ್ಷ ನರಸಿಂಹನಾಯಕ ಹೇಳಿದ್ದಾರೆ.
"ಕನ್ನಡಪ್ರಭ "ದೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವೆಡೆ ರೈತರ ಪಹಣಯ ಕಾಲಂ 11 ರಲ್ಲಿ ವಕ್ಫ್ ಎಂದು ನಮೂದಾಗಿರುವ ಕುರಿತು, ಚರ್ಚೆಯಲ್ಲಿ ಇರುವ ಸಂದರ್ಭದಲ್ಲಿ ಹುಣಸಗಿ ತಾಲೂಕು ಸೇರಿ, ಯಾದಗಿರಿ ಜಿಲ್ಲೆಯಲ್ಲಿಯು ಇಂತಹ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ ಎಂದು ಕಂದಾಯ ಇಲಾಖೆಯ ವರದಿ ಹೇಳಿದೆ ಎಂದು ಅವರು ಕಿಡಿ ಕಾರಿದ್ದಾರೆ.ಇನ್ನು ಹುಣಸಗಿ ತಾಲೂಕಿನಲ್ಲಿ 34, ಸುರಪುರ 56, ಸೇರಿ ಜಿಲ್ಲೆಯಲ್ಲಿ 549 ಪ್ರಕರಣಗಳ ವರದಿಯಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ, ಹುಣಸಗಿ, ಅರಕೇರಾ (ಜೆ), ಬೈಚಬಾಳ ಸೇರಿ ಅನೇಕ ರೈತರು ದೂರವಾಣಿ ಮುಖಾಂತರ ಸಂಪರ್ಕಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಯಾವುದೇ ಸಂದರ್ಭದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲಾ, ರೈತರೊಂದಿಗೆ ನಾವಿದ್ದೇವೆ ಎಂದು ರಾಜೂಗೌಡ ಹೇಳಿದ್ದಾರೆ.
ಪಂಚಾಯತ ರಾಜ್ ಇಲಾಖೆ ಅಡಿಯಲ್ಲಿ ಸುರಪುರ ವಿಧಾನ ಸಭಾ ಮತಕ್ಷೇತ್ರದಲ್ಲಿ 165, ಪಟ್ಟಣ ಪಂಚಾಯತಗಳಲ್ಲಿ 59 ಪ್ರಕರಣಗಳಿವೆ. ಇದರಲ್ಲಿ ಸಕ್ರಮ ವಕ್ಫ್ ಆಸ್ತಿ ಬಗ್ಗೆ ನಮ್ಮ ತಕರಾರು ಏನಿಲ್ಲಾ. ಆದರೆ, ಇತ್ತೀಚೆಗೆ ಯಾರದ್ದೋ ಜಾಗೆ, ಯಾರದ್ದೋ ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗಿರುವ ಕುರಿತು ನಮ್ಮ ತಕರಾರು ಇದೆ. ಸರಕಾರ ತಕ್ಷಣವೇ ಆದಷ್ಟು ಬೇಗ ರೈತರ ಪಹಣಿಯಲ್ಲಿ ಆಗಿರುವ ದೋಷ ಸರಿಪಡಿಸದೆ ಇದ್ದರೆ, ಪಕ್ಷದಿಂದ ರೈತರ ಪರವಾಗಿ ಉಗ್ರ ಹೋರಾಟ ಮಾಡಲಾಗುವುದು ನರಸಿಂಹನಾಯಕ ತಿಳಿಸಿದ್ದಾರೆ.----
30ವೈಡಿಆರ್13 : ರಾಜೂಗೌಡ (ನರಸಿಂಹ ನಾಯಕ) ಮಾಜಿ ಸಚಿವರು.