ಮೇಲ್ಸೇತುವೆ ನಿರ್ಮಾಣ ಮಾಡುವುದರ ಜತೆ ಜತೆಗೆ ಚೆನ್ನಮ್ಮ ಸರ್ಕಲ್‌ನ ಅಂದ ಹಾಳಾಗದಂತೆ ಹಾಗೂ ರಾಣಿ ಚೆನ್ನಮ್ಮ ಅವರಿಗೆ ಅಗೌರವ ಆಗದಂತೆ ನೋಡಿಕೊಳ್ಳಬೇಕು. ಆದ್ದರಿಂದ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಿರ್ಮಿಸಿರುವ ಪುತ್ಥಳಿಯ ಮಾದರಿಯಲ್ಲೇ ಇಲ್ಲೂ ಕೂಡ ನಿರ್ಮಿಸಿ ಫ್ಲೈ ಓವರ್ ಕಾಮಗಾರಿ ಕೈಗೊಳ್ಳಬೇಕು.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಿರ್ಮಾಣ ಆಗುತ್ತಿರುವ ಫ್ಲೈಓವರ್‌ನಿಂದ ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಅಗೌರವ ಆಗದಂತೆ ನೋಡಿಕೊಳ್ಳಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಹುಬ್ಬಳ್ಳಿ- ಧಾರವಾಡ ಮಹಾನಗರ ಎಂದ ತಕ್ಷಣ ನೆನಪಾಗುವುದು ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್. ಇದು ಮಹಾನಗರದ ಪ್ರಮುಖ ಆಕರ್ಷಣೀಯ ಸ್ಥಳವು ಹೌದು. ಇದೀಗ ಚೆನ್ನಮ್ಮ ಸರ್ಕಲ್‌ನಲ್ಲಿ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ. ಫ್ಲೈಓವರ್ ಎತ್ತರದಲ್ಲಿದೆ. ಆದರೆ, ಮೂರ್ತಿ ಕೆಳಹಂತದಲ್ಲಿದೆ. ಒಂದು ವೇಳೆ ಚೆನ್ನಮ್ಮನ ಮೂರ್ತಿ ಕೆಳಹಂತದಲ್ಲಿ ಬಂದರೆ ಅದರ ಅಂದವೇ ಹಾಳಾಗುತ್ತದೆ. ಜತೆಗೆ ರಾಣಿ ಚೆನ್ನಮ್ಮ ಅವರಿಗೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ ಮೇಲ್ಸೇತುವೆ ನಿರ್ಮಾಣ ಮಾಡುವುದರ ಜತೆ ಜತೆಗೆ ಚೆನ್ನಮ್ಮ ಸರ್ಕಲ್‌ನ ಅಂದ ಹಾಳಾಗದಂತೆ ಹಾಗೂ ರಾಣಿ ಚೆನ್ನಮ್ಮ ಅವರಿಗೆ ಅಗೌರವ ಆಗದಂತೆ ನೋಡಿಕೊಳ್ಳಬೇಕು. ಆದ್ದರಿಂದ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಿರ್ಮಿಸಿರುವ ಪುತ್ಥಳಿಯ ಮಾದರಿಯಲ್ಲೇ ಇಲ್ಲೂ ಕೂಡ ನಿರ್ಮಿಸಿ ಫ್ಲೈ ಓವರ್ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಹುಬ್ಬಳ್ಳಿ ಲಿಯೋ ಕ್ಲಬ್‌ಗೆ ಅಂತಾರಾಷ್ಟ್ರೀಯ ಮಾರ್ಕೆಟಿಂಗ್ ಪ್ರಶಸ್ತಿಹುಬ್ಬಳ್ಳಿ: ನಗರದ ಯುವಕರ ನೇತೃತ್ವದ ಲಿಯೋ ಕ್ಲಬ್ ಆಫ್ ಹುಬ್ಬಳ್ಳಿ (ಜಿಲ್ಲಾ 317 ಬಿ) 2025ನೇ ಸಾಲಿನ ಲಯನ್ಸ್ ಅಂತಾರಾಷ್ಟ್ರೀಯ ಮಾರ್ಕೆಟಿಂಗ್ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಲಯನ್ಸ್ ಇಂಟರ್‌ನ್ಯಾಶನಲ್ ಡಿಸ್ಟ್ರಿಕ್ಟ್ 317ಬಿ ಗವರ್ನರ್ ಮನೋಜ್ ಎಲ್. ಮಾನೇಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಲಿಯೋ ಕ್ಲಬ್ ಆಫ್ ಹುಬ್ಬಳ್ಳಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.ಈ ವೇಳೆ ಲಿಯೋ ಜಿಲ್ಲಾಧ್ಯಕ್ಷ ಚಿರಾಗ್ ಕಲಾಲ್ ಮಾತನಾಡಿ, ನಿರಂತರ ಹಾಗೂ ನವೀನ ಮಾರುಕಟ್ಟೆ ಅಭಿಯಾನ, ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ, ಕ್ರಿಕೆಟ್ ಟೂರ್ನಿಯಿಂದ ಉತ್ತಮ ಬ್ರ್ಯಾಂಡ್ ನಿರ್ಮಿಸುವ ಮೂಲಕ ಕ್ಲಬ್ ಒಟ್ಟು ₹2.95 ಲಕ್ಷ ನಿಧಿ ಸಂಗ್ರಹಿಸಿದ್ದೇವೆ. ಕ್ಯಾನ್ಸರ್ ರೋಗಿಗಳು ಮತ್ತು ಅಂಗವಿಕಲರಿಗೆ ಕೃತಕ ಕಾಲು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮ ಸತತ ಪರಿಶ್ರಮಕ್ಕೆ ಪ್ರಶಸ್ತಿ ಸಂದ ಫಲವಾಗಿದೆ ಎಂದರು.
ಅಂತಾರಾಷ್ಟ್ರೀಯ ಮಾರ್ಕೆಟಿಂಗ್ ಪ್ರಶಸ್ತಿಯು 2 ಸಾವಿರ ಅಮೆರಿಕನ್ ಡಾಲರ್ ನಗದು ಬಹುಮಾನ ಮತ್ತು ಟ್ರೂಫಿ ಒಳಗೊಂಡಿದೆ. ಜೂನ್ ತಿಂಗಳಲ್ಲಿ ಅಮೆರಿಕದ ಅಥವಾ ಹಾಂಕಾಂಗ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಕಾಶ ಸರಫ್, ದಾಕ್ಷಾಯಣಿ ಕೋಳಿವಾಡ ಸೇರಿದಂತೆ ಹಲವರಿದ್ದರು.