ಡಾ.ಅಂಬೇಡ್ಕರ್‌ರನ್ನು ಜಾತಿಗೆ ಸೀಮಿತಗೊಳಿಸದಿರಿ: ಸಂಪತ್ ಲಮಾಣಿ

| Published : Feb 04 2024, 01:33 AM IST

ಡಾ.ಅಂಬೇಡ್ಕರ್‌ರನ್ನು ಜಾತಿಗೆ ಸೀಮಿತಗೊಳಿಸದಿರಿ: ಸಂಪತ್ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲಾದಗಿ: ದೇಶದ ಇಡೀ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಇಂದು ಜೀವಂತಿಕೆ ಇದೆ ಅಂದರೆ ಅದು ಅಂಬೇಡ್ಕರ್ ಅವರು ನೀಡಿದ ಶ್ರೇಷ್ಠ ಸಂವಿಧಾನದಿಂದ, ಸರ್ವರಿಗೂ ಸಮಬಾಳು, ಸಮಪಾಲು, ಇಡೀ ಸಂವಿಧಾನದ ಆಶಯವನ್ನು ಪೂರ್ವ ಪೀಠಿಕೆಯಲ್ಲಿ ತಿಳಿಸಿದ್ದಾರೆ ಎಂದು ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಸಂಪತ್ ಲಮಾಣಿ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆ ತಾಲೂಕಿನ ಸಂವಿಧಾನ ಜಾಗೃತಿ ಜಾಥಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಆಯ್ಕೆಗೆ ಜನರಿಗೆ ಮತಾಧಿಕಾರಿ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕಲಾದಗಿ

ದೇಶದ ಇಡೀ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಇಂದು ಜೀವಂತಿಕೆ ಇದೆ ಅಂದರೆ ಅದು ಅಂಬೇಡ್ಕರ್ ಅವರು ನೀಡಿದ ಶ್ರೇಷ್ಠ ಸಂವಿಧಾನದಿಂದ, ಸರ್ವರಿಗೂ ಸಮಬಾಳು, ಸಮಪಾಲು, ಇಡೀ ಸಂವಿಧಾನದ ಆಶಯವನ್ನು ಪೂರ್ವ ಪೀಠಿಕೆಯಲ್ಲಿ ತಿಳಿಸಿದ್ದಾರೆ ಎಂದು ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಸಂಪತ್ ಲಮಾಣಿ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆ ತಾಲೂಕಿನ ಸಂವಿಧಾನ ಜಾಗೃತಿ ಜಾಥಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಆಯ್ಕೆಗೆ ಜನರಿಗೆ ಮತಾಧಿಕಾರಿ ನೀಡಲಾಗಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ ನ್ಯಾಯಕಕೋಸ್ಕರ ಮೀಸಲಾತಿ ನೀಡಲಾಗಿದ್ದು, ಯಾರೂ ಎಂತಹ ಕನಸನ್ನಾದರೂ ಕಾಣುವ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಉದ್ಯೋಗವಕಾಶ, ಸ್ಥಾನಮಾನ, ವ್ಯಕ್ತಿಗೌರವ, ಏಕತೆ ಮತ್ತು ಸಮಗ್ರತೆ ಎಲ್ಲ ಅವಕಾಶವನ್ನು ಕಲ್ಲಿಸಿ ಕೊಟ್ಟವರು ನಮ್ಮ ಅಂಬೇಡ್ಕರ್. ಅವರ ಮೇಧಾವಿ ವಿಶ್ವ ಮಾನವರು, ಕೇವಲ ಒಂದು ಜಾತಿಗೆ ಸೀಮಿತವಾಗಿ ನೋಡಿದರೆ ನಮಗೆ ನಾವೇ ಅವಮಾನ ಮಾಡಿಕೊಂಡಂತೆ, ಜಗತ್ತಿಗೆ ನಮ್ಮ ಸಂವಿಧಾನ ಆದರ್ಶವಾಗಿದೆ. ಸಂವಿಧಾನದಲ್ಲಿ ಏನಿದೆ ಎನ್ನುವುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು.

ಬಾಗಲಕೋಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸೈರಾಭಾನು ನದಾಫ್ ಮಾತನಾಡಿ, ಶಿಕ್ಷಣ ಹಕ್ಕು ಕಡ್ಡಾಯವಾಗಿದ್ದು, ಶಿಕ್ಷಣದ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಹಿಳೆಯರಿಗೆ ಶಿಕ್ಷಣ ಕೊಡಬೇಕು, ಮಹಿಳೆ ಶಿಕ್ಷಣವಂತೆ ಆದಲ್ಲಿ ಒಂದು ಕುಟುಂಬ ಸುಶಿಕ್ಷಿತವಾಗಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಖಾತುನಬಿ.ಹ. ರೋಣ, ಉಪಾಧ್ಯಕ್ಷ ಫಕೀರಪ್ಪ ಮಾದರ, ಪಿಡಿಒ ಬಿ.ಎಲ್. ಹವಾಲ್ದಾರ, ಸಹಾಯಕ ತೋಟಗಾರಿಕಾ ನಿರ್ದೇಶಕ, ನೋಡಲ್ ಅಧಿಕಾರಿ ಬಿ.ಜಿ. ಗೌಡನ್ನವರ್, ಜೆ.ಎಚ್. ಮೇತ್ರಿ, ಎಂ.ವಿ. ಪರುಶೆಟ್ಟಿ, ಸಂತೋಷ ತೇಲಿ, ಎಸ್.ಬಿ. ಸವದತ್ತಿ ಇತರರು ಇದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಎಂ.ಎ.ತೇಲಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ಜಾಗೃತಿ ಜಾಥಾ: ಜಿಲ್ಲಾ ಆಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆ ತಾಲೂಕಿನ, ಸಂವಿಧಾನ ಜಾಗೃತಿ ಜಾಥಾ, ಸ್ತಬ್ಧ ಚಿತ್ರ ವಾಹನಕ್ಕೆ ಗ್ರಾಮದಲ್ಲಿ ಭವ್ಯವಾಗಿ ಸ್ವಾಗತಿಸಲಾಗಿ ಜಾಥಾ ಪ್ರಮುಖ ಬೀದಿಯಲ್ಲಿ ಸಂಚರಿಸಿತು.

ಗ್ರಾಮದ ಸಾಯಿ ಮಂದಿರದ ಬಳಿ ಜಾಗೃತಿ ಜಾಥಾ ವಾಹನಕ್ಕೆ ಹೂಮಾಲೆ, ಡಾ.ಬಿ.ಆರ್. ಅಂಬೇಡ್ಕರ್ ಮಾದರಿ ಮೂರ್ತಿಗೆ ಗ್ರಾಪಂ ಅಧ್ಯಕ್ಷ ಖಾತುನಬಿ.ಹ. ರೋಣ, ಉಪಾಧ್ಯಕ್ಷ ಫಕೀರಪ್ಪ ಮಾದರ ಹಾಗೂ ಸದಸ್ಯರು, ಅಧಿಕಾರಿಗಳು ಹೂಮಾಲೆ ಹಾಕಿ ಭವ್ಯವಾಗಿ ಸ್ವಾಗತಿಸಿದರು. ಅಲ್ಲಿಂದ ವಿವಿಧ ವಾನಗಳ ಮಧ್ಯೆ ಪ್ರಾರಂಭವಾದ ಜಾಗೃತಿ ಜಾಥಾ ಶ್ರೀ ಗುರುಲಿಂಗೇಶ್ವರ ಪ್ರೌಢ ಶಾಲೆ, ಉರ್ದು ಪ್ರೌಢ ಶಾಲೆ, ನೂರುಅಲಿಶಾ ಬಾಬಾ ದರ್ಗಾ, ಪಂಚಾಯತ ಕಾರ್ಯಾಲಯ, ಕೊಬ್ರಿ ಕ್ರಾಸ್, ಅಂಬೇಡ್ಕರ್ ಸರ್ಕಲ ಮಾರ್ಗವಾಗಿ ಸಾಗಿ ಬಯಲು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವಾಗಿ ಮಾರ್ಪಾಡಾಯಿತು. ಗಣ್ಯರು ಅಂಬೇಡ್ಕರ್ ವೃತ್ತಕ್ಕೆ ಗಣ್ಯರು ಹೂಮಾಲೆ ಹಾಕಿ ಜಯ ಘೋಷ ಹಾಕಿದರು, ಮಾರ್ಗದುದ್ದಕ್ಕೂ ಕರಡಿ ಮಜಲು, ಕೋಲಾಟ, ಕುಂಭ ಹೊತ್ತ ಮಹಿಳೆಯರು ಹೆಜ್ಜೆ ಹಾಕಿ ಜಾಥಾ ಮೆರಗು ಹೆಚ್ಚಿಸಿದರು. ಮಹಾತ್ಮ ಗಾಧೀಜಿ, ಡಾ ಬಿ.ಆರ್. ಅಂಬೇಡ್ಕರ್, ಭಗತಸಿಂಗ್, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿ, ಒನಕೆ ಓಬವ್ವ ದೇಶಭಕ್ತ ಸ್ವಾತಂತ್ರ್ಯ ವೀರ ಹೋರಾಟಗಾರರ ವೇಷಭೂಷಣ ಧರಿಸಿದ್ದ ಪುಟ್ಟ ಮಕ್ಕಳು ಗಮನ ಸೆಳೆದರು. ಜಾಥಾದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಗಣ್ಯರು, ಮುಖಂಡರು ಭಾಗವಹಿಸಿದ್ದರು.