ಊಹಾಪೋಹಗಳಿಗೆ ಕಿವಿಗೊಡಬೇಡಿ: ಸತೀಶ್‌ಸುವರ್ಣ

| Published : Sep 27 2024, 01:30 AM IST

ಊಹಾಪೋಹಗಳಿಗೆ ಕಿವಿಗೊಡಬೇಡಿ: ಸತೀಶ್‌ಸುವರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಸಾಲ ಕೊಡುವ ಸಂಸ್ಥೆಯಲ್ಲ ಬ್ಯಾಂಕ್‌ಗಳ ಮೂಲಕ ಸಾಲ ಕೊಡಿಸುವ ಸಂಸ್ಥೆಯಾಗಿದ್ದು ಈ ಬಗ್ಗೆ ಕೆಲವರು ಊಹಪೋಹಗಳನ್ನು ಹರಡುತ್ತಿದ್ದು ಇದಕ್ಕೆ ಯಾರು ಕಿವಿಗೊಡದಿರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್‌ಸುವರ್ಣ ತಿಳಿಸಿದರು.

ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಸಾಲ ಕೊಡುವ ಸಂಸ್ಥೆಯಲ್ಲ ಬ್ಯಾಂಕ್‌ಗಳ ಮೂಲಕ ಸಾಲ ಕೊಡಿಸುವ ಸಂಸ್ಥೆಯಾಗಿದ್ದು ಈ ಬಗ್ಗೆ ಕೆಲವರು ಊಹಪೋಹಗಳನ್ನು ಹರಡುತ್ತಿದ್ದು ಇದಕ್ಕೆ ಯಾರು ಕಿವಿಗೊಡದಿರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್‌ಸುವರ್ಣ ತಿಳಿಸಿದರು. ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಗುರುವಾರ ನಡೆದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕೆಲವರು ಸಾಲ ಕೊಡಿಸುವ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದು ಹೆಚ್ಚು ಬಡ್ಡಿಯನ್ನು ತೆಗೆದುಕೊಳ್ಳುತ್ತಾರೆಂಬ ಸುದ್ದಿಯನ್ನು ಹರಡುತ್ತಿದ್ದಾರೆ. ಬ್ಯಾಂಕ್ ನಮ್ಮನ್ನು ನಂಬಿ ಸಾಲ ಕೊಡುತ್ತದೆ ನಾವು ನಿಮ್ಮನ್ನು ನಂಬಿ ಕೊಡುತ್ತೇವೆ ಅಷ್ಟೇ. ನಮ್ಮಲ್ಲಿ ಆಡಳಿತದ ಲೆಕ್ಕಾಚಾರ ಮುಕ್ತವಾಗಿದ್ದು ಬ್ಯಾಂಕ್‌ಗಳ ಮೂಲಕ ರಾಜ್ಯದಲ್ಲಿ 20ಸಾವಿರ ಕೋಟಿಯಷ್ಟು ಸಾಲ ಕೊಡಿಸಿದ್ದು, ತಾಲೂಕಿನಲ್ಲಿ ಒಂದು ಸಾವಿರ ಕೋಟಿ ರು. ಸಾಲಸೌಲಭ್ಯ ಕೊಡಿಸಲಾಗಿದೆ ಎಂದರು. ತಾಲೂಕು ಯೋಜನಾಧಿಕಾರಿ ಕೆ. ಉದಯ್, ಶ್ಯಾಮಸುಂದರ್, ಎಸ್‌ಬಿಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರಾಹುಲ್‌ಕುಮಾರ್, ಪ್ರೇರಣ್, ಕೆ.ಸುರೇಶ್, ಪದ್ಮಾವತಿ ಸೇರಿದಂತೆ ಇತರರಿದ್ದರು.

ಧಗ್ರಾಯೋ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕಿ ಸತೀಶ್‌ ಸುವರ್ಣ ಮಾತನಾಡಿದರು.