ಸಾರಾಂಶ
ಸರ್ಕಾರ ಹಾಗೂ ಹಲವು ಸ್ವಯಂ ಸೇವಾ ಸಂಸ್ಥೆಗಳು ವಿಶೇಷ ಚೇತನ ಮಕ್ಕಳಿಗೆ ನಾನಾ ರೀತಿಯ ನೆರವು ನೀಡುತ್ತಿವೆ. ಶಾಲೆಗಳಿಗೆ ದಾಖಲಾಗುವ ತಮ್ಮ ಮಗುವಿನ ಸಂಪೂರ್ಣ ವಿವರವನ್ನು ಶಿಕ್ಷಕರಿಗೆ ತಿಳಿಸಿ ಇಂಥಹ ಶಿಬಿರಗಳಲ್ಲಿ ಅವರಿಗೆ ದೊರೆಯುವ ಸಾಧನ ಸಲಕರಣೆ ಹಾಗೂ ಹೆಚ್ಚಿನ ಚಿಕಿತ್ಸೆ ಸೇರಿದಂತೆ ಅಗತ್ಯ ನೆರವು ಪಡೆಯಬಹುದು.
ಕನ್ನಡಪ್ರಭ ವಾರ್ತೆ ಮದ್ದೂರು
ವಿಶೇಷಚೇತನ ಮಕ್ಕಳೆಂದು ಪೋಷಕರು ಕೀಳರಿಮೆ ತೋರದೇ ಆತ್ಮಸ್ಥೈರ್ಯ ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸಿದರೆ ಇತರರಂತೆ ಸಕ್ರಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ಆತ್ಮಸ್ಥೈರ್ಯ ತುಂಬಿದರು.ನಗರದ ಕಸ್ತೂರಬಾ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಹಾಗೂ ಹಲವು ಸ್ವಯಂ ಸೇವಾ ಸಂಸ್ಥೆಗಳು ವಿಶೇಷ ಚೇತನ ಮಕ್ಕಳಿಗೆ ನಾನಾ ರೀತಿಯ ನೆರವು ನೀಡುತ್ತಿವೆ. ಶಾಲೆಗಳಿಗೆ ದಾಖಲಾಗುವ ತಮ್ಮ ಮಗುವಿನ ಸಂಪೂರ್ಣ ವಿವರವನ್ನು ಶಿಕ್ಷಕರಿಗೆ ತಿಳಿಸಿ ಇಂಥಹ ಶಿಬಿರಗಳಲ್ಲಿ ಅವರಿಗೆ ದೊರೆಯುವ ಸಾಧನ ಸಲಕರಣೆ ಹಾಗೂ ಹೆಚ್ಚಿನ ಚಿಕಿತ್ಸೆ ಸೇರಿದಂತೆ ಅಗತ್ಯ ನೆರವು ಪಡೆಯಬಹುದು ಎಂದರು.ವಿಶೇಷ ಚೇತನ ಮಕ್ಕಳು ಇತರೆ ಮಕ್ಕಳಿಗಿಂತ ವಿಶಿಷ್ಟ ಬುದ್ಧಿಶಕ್ತಿ ಹೊಂದಿದ್ದಾರೆ. ಪೋಷಕರು ಈ ಮಕ್ಕಳನ್ನು ನಿರ್ಲಕ್ಷಿಸದೇ ದೇವರು ಕೊಟ್ಟ ವರ ಎಂದು ಭಾವಿಸಿ ಅವರಿಗೆ ಅಗತ್ಯ ಸೌಲಭ್ಯ ನೀಡಬೇಕು. ವಿಕಲಚೇತನ ಮಕ್ಕಳು ದೇಶದ ಅನೇಕ ಕ್ಷೇತ್ರಗಳಲ್ಲಿ ಸಾಧಕರಾಗಿ ಸಾಧನೆ ಮಾಡಿರುವ ಅನೇಕ ಉದಾಹರಣೆಗಳಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಮಾತನಾಡಿದರು. ಆರೋಗ್ಯ ಶಿಬಿರದಲ್ಲಿ ಮಾನಸಿಕ ತಜ್ಞರು, ಶ್ರವಣ ದೋಷ ತಜ್ಞರು, ಫಿಜಿಷಿಯನ್, ಮೂಳೆ ರೋಗ ತಜ್ಞರು, ಅಲಿಂಕೋ ಸಂಸ್ಥೆಯ ತಜ್ಞ ವೈದ್ಯರು ಶಿಬಿರದಲ್ಲಿ ಸುಮಾರು 140ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳನ್ನು ತಪಾಸಣೆ ನಡೆಸಿದರು. ವೈದ್ಯರು ಶಿಫಾರಸ್ಸು ಮಾಡಿದ ನಂತರ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಅಲಿಂಕೋ ಸಹಯೋಗದೊಂದಿಗೆ ಸಾಧನ ಸಲಕರಣೆ ಮಾಡಲಾಗುವುದೆಂದು ಬಿಇಓ ಧನಂಜಯ ತಿಳಿಸಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಅರ್ಚನಾ, ಬಿಐಇಆರ್ ಟಿ ಎ.ಜೆ.ಸುರೇಶ್, ಸಿ.ಆರ್.ಪಿ, ಬಿಆರ್.ಪಿ, ಶಿಕ್ಷಣ ಸಂಯೋಜಕರು ಹಾಗೂ ಶಾಂತ ಮರಿಯಪ್ಪ ಸಂಸ್ಥೆ ಆಡಳಿತ ಮಂಡಳಿ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))