ಸಾರಾಂಶ
ಆರೋಗ್ಯವಂತ ಜೀವನ ಎಲ್ಲರಿಗೂ ಅವಶ್ಯಕ. ಹಣಕ್ಕಿಂತ ಆರೋಗ್ಯ ಮುಖ್ಯ. ಆರೋಗ್ಯದ ಬಗ್ಗೆ ಉದಾಸೀನ ಮಾಡಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ರಸ್ತೆ ಅಪಘಾತ, ರಕ್ತದ ಒತ್ತಡ, ಮಧುಮೇಹ, ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ, ಆಹಾರ ಪದ್ಧತಿಗಳು, ಪೌಷ್ಟಿಕತೆ ಮುಂತಾದ ವಿಷಯಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಆರೋಗ್ಯದಲ್ಲಿ ಏರುಪೇರಾದರೆ ಯಾರೂ ಕೂಡ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್ ತಿಳಿಸಿದರು.ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕದಿಂದ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಹೆಣ್ಣುಮಕ್ಕಳು ಆರೋಗ್ಯದಲ್ಲಿ ಏನೇ ವ್ಯತ್ಯಾಸ ಉಂಟಾದರೂ ಉದಾಸೀನ ಮಾಡದೇ ಕೂಡಲೇ ವೈದ್ಯರನ್ನು ಸಂಪರ್ಕಿಸುವ ಮೂಲಕ ತಪಾಸಣೆಗೆ ಒಳಪಟ್ಟು ಚಿಕಿತ್ಸೆ ಪಡೆಯಬೇಕು ಎಂದರು.
ಆರೋಗ್ಯವಂತ ಜೀವನ ಎಲ್ಲರಿಗೂ ಅವಶ್ಯಕ. ಹಣಕ್ಕಿಂತ ಆರೋಗ್ಯ ಮುಖ್ಯ. ಆರೋಗ್ಯದ ಬಗ್ಗೆ ಉದಾಸೀನ ಮಾಡಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ರಸ್ತೆ ಅಪಘಾತ, ರಕ್ತದ ಒತ್ತಡ, ಮಧುಮೇಹ, ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ, ಆಹಾರ ಪದ್ಧತಿಗಳು, ಪೌಷ್ಟಿಕತೆ ಮುಂತಾದ ವಿಷಯಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕು ಎಂದರು.ಪ್ರಾಂಶುಪಾಲೆ ಡಾ.ಪ್ರತಿಮ ಮಾತನಾಡಿ, ರೆಡ್‌ಕ್ರಾಸ್ ಏರ್ಪಡಿಸಿರುವ ಆರೋಗ್ಯ ಶಿಬಿರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಪ್ರಸ್ತುತ ಅಪೌಷ್ಟಿಕತೆ ಹೆಚ್ಚಾಗಿದ್ದು, ಸಮತೋಲನ ಆಹಾರವನ್ನು ಸೇವಿಸದೇ ಆರೋಗ್ಯವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಡಾ.ಹೇಮಲತಾ, ಡಾ.ನಾಗರತ್ನ, ಡಾ.ಸುಮನ್, ಪ್ರಾಧ್ಯಾಪಪಕರಾದ ಡಾ.ಕೃಷ್ಣಮೂರ್ತಿ, ಡಾ.ಮಹದೇವ, ಗಿರೀಶ್, ಸಿ.ಬಿ.ಚೇತನ್‌ಕುಮಾರ್, ಪತ್ರಕರ್ತ ಮೊಸಳೆಕೊಪ್ಪಲು ದಿನೇಶ್, ವಿಶ್ವಾರಾದ್ಯ, ಶ್ರೀಕಾಂತ್, ವಿನಯ್, ಚಂದ್ರು, ಪುರುಷೋತ್ತಮ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.