ಪೋಷಕರನ್ನು ವೃದ್ಧಾಶ್ರಮಕ್ಕೆ ತಳ್ಳಬೇಡಿ: ಸ್ವಾಮೀಜಿ

| Published : Dec 06 2023, 01:15 AM IST

ಸಾರಾಂಶ

ಸಾಹಿತಿ ಡಾ.ಶಾಂತಾರಾಮ ಪ್ರಭು ಮಾತನಾಡಿ, ಯಾವುದೇ ಸಾಮೂಹಿಕ ಪೂಜೆಗಳು ನಮ್ಮ ಹಾಗೂ ದೇವರ ನಡುವಿನ ಅಂತರ ಕಡಿಮೆ ಮಾಡಬಲ್ಲದು. ಇದು ನಮ್ಮಗಳ ನಡುವಿನ ಬೇಧಭಾವವನ್ನು ತೊಡೆಯಬಲ್ಲದು ಎಂದರು.

ಕನ್ನಡಪ್ರಭ ವಾರ್ತೆ ಹೊಸನಗರ

ವಯಸ್ಸಾದ ತಂದೆ- ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳುವ ಸಂಸ್ಕೃತಿ ನಾಶವಾಗಬೇಕಿದೆ ಎಂದು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಶ್ರೀ ನುಡಿದರು.

ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ, ಬಿ.ಸಿ. ಟ್ರಸ್ಟ್ ವತಿಯಿಂದ ನಡೆದ 108 ಸಾಮೂಹಿಕ ಸತ್ಯನಾರಾಯಣ ಪೂಜೆ ನಂತರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ತಮ್ಮ ಜತೆಯಲ್ಲಿಯೇ ಬೆಳೆಸಿ. ಅವರನ್ನು ಹಾಸ್ಟೆಲ್‍ಗೆ ದೂಡುವುದೂ ಸರಿಯಲ್ಲ. ಅವರಿಗೆ ಉತ್ತಮ ಸಂಸ್ಕೃತಿ ಬಿತ್ತಿದರೆ ಅವರು ಮುಂದೆ ಇಳಿವಯಸ್ಸಿಗೆ ಆಧಾರ ಆಗಬಲ್ಲರು ಎಂದು ಆಶಿಸಿದರು.

ಸಾಹಿತಿ ಡಾ.ಶಾಂತಾರಾಮ ಪ್ರಭು ಮಾತನಾಡಿ, ಯಾವುದೇ ಸಾಮೂಹಿಕ ಪೂಜೆಗಳು ನಮ್ಮ ಹಾಗೂ ದೇವರ ನಡುವಿನ ಅಂತರ ಕಡಿಮೆ ಮಾಡಬಲ್ಲದು. ಇದು ನಮ್ಮಗಳ ನಡುವಿನ ಬೇಧಭಾವವನ್ನು ತೊಡೆಯಬಲ್ಲದು ಎಂದರು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಾಜಿ ಅಧ್ಯಕ್ಷ ಎಂ.ಪ್ರಭು ಅಧ್ಯಕ್ಷತೆ ವಹಿಸಿ ಸಂಘದ ಚಟುವಟಿಕೆ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ಸಮಿತಿ ನಿರ್ದೇಶಕ ಎನ್.ಆರ್. ದೇವಾನಂದ್, ಗಂಗಾಧರೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಗಣೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬೇಬಿ, ಸಂಘದ ಅಧ್ಯಕ್ಷ ಓಂಕೇಶ ಗೌಡ ಇದ್ದರು.

ಕಾರ್ಯಕ್ರಮದಲ್ಲಿ ಶಶಿಕಲಾ ಹರೀಶ ಸ್ವಾಗತಿಸಿ, ಸುಭಾಷ ವಂದಿಸಿದರು.

- - - -05ಎಚ್‍ಒಎಸ್1ಪಿ:

ಹೊಸನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ 108 ಸಾಮೂಹಿಕ ಸತ್ಯನಾರಾಯಣ ವೃತ ಹಾಗೂ ಧರ್ಮಸಭೆಯನ್ನು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಶ್ರೀ ಉದ್ಘಾಟಿಸಿದರು.