ಮಣ್ಣಿಗೆ ರಾಸಾಯನಿಕ ಗೊಬ್ಬರ ಹಾಕುವುದರಿಂದ ಮಣ್ಣಿನ ಆರೋಗ್ಯ ಮಣ್ಣಿನಲ್ಲಿನ ಎರೆವುಳುಗಳ ಉಳಿಕೆ ಕಡಿಮೆಯಾಗುತ್ತಿದೆ
ಕುಕನೂರು: ಭೂಮಿಗೆ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಹಾಳಾಗುತ್ತದೆ. ಇದರಿಂದ ಭೂಮಿ ಉಳಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಬಸಲಿಂಗಪ್ಪ ಗಾಣಿಗೇರ ಹೇಳಿದರು.
ತಾಲೂಕಿನ ಯರೇಹಂಚಿನಾಳ ಗ್ರಾಪಂನಲ್ಲಿ ಧರ್ತಿ ಮಾತಾ ಭಚಾವೋ (ಭೂಮಿ ಉಳಿಸಿ) ಸಭೆಯಲ್ಲಿ ಗುರುವಾರ ಮಾತನಾಡಿದ ಅವರು,ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಮೇಲೆ ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ ಬಳಕೆ ಮಾಡುವುದು ಮುಖ್ಯವಾಗಿದೆ ಎಂದರು.ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಗೂಳಪ್ಪ ಕೊಳಜಿ ಅವರು ಮಣ್ಣಿಗೆ ರಾಸಾಯನಿಕ ಗೊಬ್ಬರ ಹಾಕುವುದರಿಂದ ಮಣ್ಣಿನ ಆರೋಗ್ಯ ಮಣ್ಣಿನಲ್ಲಿನ ಎರೆವುಳುಗಳ ಉಳಿಕೆ ಕಡಿಮೆಯಾಗುತ್ತಿದೆ. ಇದರಿಂದ ಸಾವಯುವ ಸಿರಿಧಾನ್ಯ, ಬೆಳೆ ಪರಿವರ್ತನೆ ಮಾಡುವುದು ಹಾಗೂ ತಿಪ್ಪೆಗೊಬ್ಬರ, ಎರೆವುಳು ಗೊಬ್ಬರ ಬಳಸುವುದರಿಂದ ನಿಮ್ಮ ಆರೋಗ್ಯ ಮತ್ತು ಭೂಮಿ ಬರಡು ಆಗುವುದನ್ನು ಕಡಿಮೆ ಮಾಡುವುದು. ಹತ್ತಿ ಬಿತ್ತನೆಗೆ ಇದು ಸೂಕ್ತ ಸಮಯವಲ್ಲ ಮಾಡಬಾರದು ಎಂದು ರೈತರಿಗೆ ಸಲಹೆ ನೀಡಿದರು.
ಗ್ರಾಪಂ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಕೃಷಿ ಸಖಿಯರು, ಕೃಷಿ ಇಲಾಖೆ ಸಿಬ್ಬಂದಿ ಹಾಗೂ ರೈತರು ಇದ್ದರು.