ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಸ್ವಾಮಿ ವಿವೇಕಾನಂದರ ಸಂದೇಶ ಹಾಗೂ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಆದರ್ಶ ಪಾಲನೆ ಅನುಸರಿಸುತ್ತಿದ್ದು, ಯಾವುದೇ ಉದ್ದೇಶವಿಲ್ಲದೇ ನಾವು ದುಡಿದ ಹಣದಲ್ಲಿ ಸ್ವಲ್ಪ ಭಾಗ ಸಮಾಜಕ್ಕೆ ಮೀಸಲಿಟ್ಟು ಸೇವೆಗೆ ಮುಂದಾಗಿದ್ದೇನೆ ಎಂದು ಸಮಾಜ ಸೇವಕ ಗಂಗಿನೇನಿ ದೇವರಾಜ್ ತಿಳಿಸಿದರು.ಅವರದೇ ಹುಟ್ಟುಹಬ್ಬದ ಪ್ರಯುಕ್ತ ಬುಧವಾರ ತಾಲೂಕಿನ ಪಳವಳ್ಳಿಯ ಪಲ್ಲವರಾಯ ಪ್ರೌಢಶಾಲೆಗೆ ಉಚಿತ ಲ್ಯಾಪ್‌ಟಾಪ್ ಮತ್ತು ನಾಗಲಮಡಿಕೆಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ 70ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.ನಮ್ಮ ಮಾವ ಖ್ಯಾತ ವೈದಧ್ಯರಾದ ಡಾ.ಪಿ.ನಾರಾಯಣಪ್ಪ ಅವರ ಅಶೀರ್ವಾದ ಹಾಗೂ ತೆಲುಗು ನಟ ಬಾಲಕೃಷ್ಣ ಮಾಡುವ ಸಮಾಜ ಸೇವಾ ಚಟುವಟಿಕೆಗಳಿಂದ ಪ್ರೇರಿತರಾಗಿದ್ದು ಮುಂದಿನ ದಿನಗಳಲ್ಲಿ ಪಟ್ಟಣದ ಶಾಂತಿ ಪಿಯು ಕಾಲೇಜಿಗೆ 9 ಎಕರೆ ಭೂಮಿಯನ್ನು ದಾನ ನೀಡಿ ಡಾ.ಪಿ.ನಾರಾಯಣಪ್ಪ ಅವರ ಸಹಕಾರದ ಮೇರೆಗೆ ಶಾಂತಿ ಸಮಗ್ರ ಸೇವಾ ಟ್ರಸ್ಟ್ ಮೂಲಕ ಜನಪರ ಸೇವಾ ಕಾರ್ಯಕ್ಕೆ ಮುಂದಾಗಲಿದ್ದೇನೆ. ಕಷ್ಟದ ದಿನ ಕಳೆದಿದ್ದೇನೆ. ಅಂತಹ ಪರಿಸ್ಥಿತಿಯಲ್ಲಿ ಪ್ರಾಥಮಿಕ ಪ್ರೌಢ ಹಾಗೂ ಪದವಿ ಕೋರ್ಸ್‌ಗಳ ಶಿಕ್ಷಣ ಪಡೆದಿದ್ದು ಶಾಲಾ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸದಾ ಪ್ರೋತ್ಸಾಹಿಸುವುದಾಗಿ ಅವರು ಹೇಳಿದರು.
ಮುಖಂಡರಾದ ಕೆಂಚಗಾನಹಳ್ಳಿ ಗೋವಿಂದಪ್ಪ, ತಾಳೇ ಮರದಹಳ್ಳಿ ನರಸಿಂಹಮೂರ್ತಿ, ಗಂಗಾಧರ ನಾಯ್ಡು, ಎಪಿಎಂಸಿ ಮಾಜಿ ಅಧ್ಯಕ್ಷ ಅಂಜನಪ್ಪ, ಪ್ರಾಂಶುಪಾಲ ನಾಗೇಂದ್ರಪ್ಪ, ಮಾನಂ ಶಶಿಕಿರಣ್, ನರೇಶ್ ಇತರರು ಶುಭ ಕೋರಿದರು.ಈ ವೇಳೆ ಮೆಡಿಕಲ್ ಕೃಷ್ಣಪ್ಪ, ನಲ್ಲಾನಿ ಸುರೇಂದ್ರ, ಅನ್ನದಾನಪುರ ಜಯರಾಮ್, ಶಿಕ್ಷಕರಾದ ವಿವೇಕಾನಂದ ಪ್ರೌಢಶಾಲೆಯ ಆಸೀಫ್ ಖಾನ್ ಹಾಗೂ ಪಲ್ಲವರಾಯ ಶಾಲೆಯ ಬಿ.ರವೀಂದ್ರ, ತಿಮ್ಮ ಭೋವಿ, ಲೋಕೇಶ್, ಸತೀಶ್, ಗಂಗಾಧರ್ ಇತರರಿದ್ದರು.
ಫೋಟೋ 8ಪಿವಿಡಿ4ಸಮಾಜ ಸೇವಕ ಗಂಗಿನೇನಿ ದೇವರಾಜ್ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ನಾಗಲಮಡಿಕೆ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಶುಭಕೋರಿದರು.