ಕಾಯಕದ ಸ್ವಲ್ಪ ಭಾಗ ದಾನ ಮಾಡಿ ಪುಣ್ಯ ಸಂಪಾದಿಸಿ

| Published : Apr 29 2025, 12:49 AM IST

ಸಾರಾಂಶ

ಪ್ರತಿಯೊಬ್ಬರೂ ಜೀವನದಲ್ಲಿ ಕಾಯಕ ಮಂತ್ರ ರೂಢಿಸಿಕೊಳ್ಳಬೇಕು. ದುಡಿಮೆಯಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ, ಸಮಾಜಮುಖಿ ಸೇವೆಗಳಿಗೆ ವಿನಿಯೋಗಿಸುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮಹಾರಾಜರು ನುಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪ್ರತಿಯೊಬ್ಬರೂ ಜೀವನದಲ್ಲಿ ಕಾಯಕ ಮಂತ್ರ ರೂಢಿಸಿಕೊಳ್ಳಬೇಕು. ದುಡಿಮೆಯಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ, ಸಮಾಜಮುಖಿ ಸೇವೆಗಳಿಗೆ ವಿನಿಯೋಗಿಸುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮಹಾರಾಜರು ನುಡಿದರು.

ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಸೋಮವಾರ ಜರುಗಿದ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮದ ಘಟಯಾತ್ರಾ ವೇದಿ ಮಂಟಪ ಶುದ್ಧಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅನೀತಿ ಮಾರ್ಗದಿಂದ ಸಂಪಾದಿಸಿದ ಹಣ ಸತ್ಕಾರ್ಯಗಳಿಗೆ ಅದು ಸಲ್ಲುವುದಿಲ್ಲ. ಬದುಕಿರುವ ಅವಧಿಯಲ್ಲಿ ಪರೋಪಕಾರಕ್ಕಾಗಿ ದಾನ ಮಾಡಬೇಕು. ತೀರ್ಥಂಕರನ್ನು ಭಕ್ತಿ, ಭಾವದಿಂದ ಎಲ್ಲರೂ ಬೇಡಿಕೊಂಡರೇ ಸಕಲವೂ ದೊರೆಯುತ್ತದೆ. ಭಕ್ತಿಯೇ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿದೆ. ಜೀವನ ಶಾಶ್ವತವಲ್ಲ, ಜೀವನದಲ್ಲಿ ಮಾಡುವ ಸತ್ಕಾರ್ಯಗಳಿಗೆ ಶಾಶ್ವತವಾಗಿ ಉಳಿಯುತ್ತವೆ. ದಾನ ಮಾಡಲು ಸಮಯಕ್ಕಾಗಿ ಕಾಯದೇ ದಾನ ಮಾಡಬೇಕು. ಮಹಿಷವಾಡಗಿ ಗ್ರಾಮದಲ್ಲಿ ಜರಗುತ್ತಿರುವ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಐತಿಹಾಸಿಕವಾಗಿ ಜರಗುತ್ತಿದೆ ಎಂದು ತಿಳಿಸಿದರು.ಶ್ರೀ 108 ಉತ್ತಮಸಾಗರ ಮುನಿ ಮಹಾರಾಜರು ಮಾತನಾಡಿ, ಪ್ರತಿಯೊಬ್ಬರ ಮನಸ್ಸು ಪರಿಶುದ್ಧವಾಗಿರಬೇಕು. ಶುದ್ಧ ಮನಸ್ಸಿನಿಂದ ಮಾಡಿದ ಭಕ್ತಿ ಶಾಶ್ವತ ಉಳಿಯುತ್ತದೆ ಎಂದರು.ಈ ಸಂದರ್ಭದಲ್ಲಿ ವಿವಿಧ ಮಾತಾಜಿ ಉಪಸ್ಥಿತರಿದ್ದರು. ಪಂಚಕಲ್ಯಾಣ ಮಹಾಮಹೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಗ್ರಾಮದಿಂದ ಮಂಟಪವರೆಗೆ ಆನೆ, ಕುದುರೆ, ವಿವಿಧ ಕಲಾ ತಂಡಗಳೊಂದಿಗೆ ಜಿನ ಮೂರ್ತಿಗಳ ಮೆರವಣಿಗೆ, ಘಟಯಾತ್ರಾ ವೇದಿ ಮಂಟಪ ಶುದ್ಧಿ ಕಾರ್ಯಕ್ರಮ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ, ಶ್ರಾವಕಿಯರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಮೊದಲ ದಿನವೇ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ, ಶ್ರಾವಕಿಯರು ಭಕ್ತಿ ಭಾವದಿಂದ ಭಾಗವಹಿಸಿದ್ದಾರೆ. ಇನ್ನೂ ಆರು ದಿನಗಳವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಪುಣ್ಯ ಸಂಪಾದಿಸಿರಿ.

-ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು.