ಅಂಗಾಂಗ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ

| Published : Dec 15 2023, 01:30 AM IST

ಸಾರಾಂಶ

ಆಭಾ ಕಾರ್ಡ್‌ನ ಬಿಪಿಎಲ್ ಕುಟುಂಬದ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬದ ಫಲಾನುಭವಿಗಳಿಗೆ ವರ್ಷಕ್ಕೆ 1.5 ಲಕ್ಷದವರೆಗೆ ಯಾವುದೇ ಚಿಕಿತ್ಸೆಗೆ ಸರ್ಕಾರ ಆರೋಗ್ಯ ಭತ್ಯೆ ನೀಡುತ್ತದೆ. ಅಲ್ಲದೆ ಅ ವ್ಯಕ್ತಿಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿಯನ್ನು ಈ ಕಾರ್ಡ್‌ನಲ್ಲಿ ಸಂಗ್ರಹಿಡಲಾಗುತ್ತದೆ

ಕಂಪ್ಲಿ: ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡುವ ಮೂಲಕ ಮರಣದ ನಂತರವು ಇನ್ನೊಬ್ಬರ ಜೀವವನ್ನು ಉಳಿಸುವ ಸತ್ಕಾರ್ಯಕ್ಕೆ ಮುಂದಾಗೋಣ ಎಂದು ವೈದ್ಯಾಧಿಕಾರಿ ಡಾ. ರವೀಂದ್ರ ಕನಿಕೇರಿ ತಿಳಿಸಿದರು.

ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಇವರ ವತಿಯಿಂದ ಆಯುಷ್ಮಾನ್ ಭವಃ ಕಾರ್ಯಕ್ರಮದಡಿ ಮಂಗಳವಾರ ಹಮ್ಮಿಕೊಂಡಿದ್ದ ಸಾಪ್ತಾಹಿಕ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಭಾ ಕಾರ್ಡ್‌ನ ಬಿಪಿಎಲ್ ಕುಟುಂಬದ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬದ ಫಲಾನುಭವಿಗಳಿಗೆ ವರ್ಷಕ್ಕೆ 1.5 ಲಕ್ಷದವರೆಗೆ ಯಾವುದೇ ಚಿಕಿತ್ಸೆಗೆ ಸರ್ಕಾರ ಆರೋಗ್ಯ ಭತ್ಯೆ ನೀಡುತ್ತದೆ. ಅಲ್ಲದೆ ಅ ವ್ಯಕ್ತಿಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿಯನ್ನು ಈ ಕಾರ್ಡ್‌ನಲ್ಲಿ ಸಂಗ್ರಹಿಡಲಾಗುತ್ತದೆ. ಇದರಿಂದಾಗಿ ನಮ್ಮ ಮುಂದಿನ ಯಾವುದೇ ಚಿಕಿತ್ಸೆಗಾಗಿ ಅನುಕೂಲವಾಗಲಿದೆ. ಪ್ರತಿಯೊಬ್ಬರೂ ಆಭಾ ಕಾರ್ಡ್ಅನ್ನು ಮಾಡಿಸುವ ಮೂಲಕ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ವೈದ್ಯಾಧಿಕಾರಿಗಳಾದ ಡಾ. ವೀರೇಶ್, ಡಾ. ಮಲ್ಲೇಶಪ್ಪ, ಡಾ. ಭರತ್ ಪದ್ಮಶಾಲಿ, ಡಾ. ಸ್ವಾತಿ, ಪಾಟೀಲ್, ಕಿವಿ ಮೂಗು ಗಂಟಲು ತಜ್ಞರಾದ ಡಾ. ಭಾಗ್ಯಲಕ್ಷ್ಮಿ, ಮಿಥುನ್ ಸುತ್ರಾವೆ, ಕೀಲು ಹಾಗೂ ಎಲುಬು ತಜ್ಞರಾದ ಡಾ. ಸುನಿಲ್ ಕುಮಾರ್, ನೇತ್ರ ಚಿಕಿತ್ಸೆ ತಜ್ಞರಾದ ಡಾ. ಕಾರ್ತಿಕ್‌ ಎಸ್., ಶಿಶು ವೈದ್ಯರಾದ ಡಾ. ಉದಯ್ ಕುಮಾರ್, ಸ್ಕಿನ್ ಹಾಗೂ ಎಸ್‌ಟಿಡಿ ತಜ್ಞರಾದ ಕೆ.ಎಂ. ಐಶ್ವರ್ಯ, ನೇತ್ರ ಸಹಾಯಕರಾದ ವೀರೇಶ್, ನೇತ್ರಾಧಿಕಾರಿಗಳಾದ ಪ್ರಕಾಶ್ ಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಶೋಭಾ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಆಶಾ ಕಾರ್ಯಕರ್ತರಿದ್ದರು.