ಹಿರೇಕೆರೂರು: ರಕ್ತದಾನ ಮಹಾದಾನವಾಗಿದೆ. ತಪ್ಪು ಕಲ್ಪನೆಗಳಿಂದ ಹೊರಬಂದು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಆಸರೆಯಾಗಬೇಕೆಂದು ಸಂತ ಸೇವಾಲಾಲ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹುತ್ತೇಶ ಲಮಾಣಿ ಹೇಳಿದರು.ತಾಲೂಕಿನ ಚನ್ನಳ್ಳಿ ತಾಂಡದಲ್ಲಿ ತುಳಜಾಭವಾನಿ ಭವಾನಿ ದೇವಿಯ 5ನೇ ವರ್ಷದ ಪ್ರತಿಷ್ಠಾಪನೆ ಮತ್ತು ಅನ್ನ ಸಂತರ್ಪಣೆಯ ಪ್ರಯುಕ್ತ ಸಂತ ಸೇವಾಲಾಲ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ತುಳಜಾಭವಾನಿ ಭವಾನಿ ದೇವಸ್ಥಾನ ಕಮಿಟಿ ವತಿಯಿಂದ ಹಾವೇರಿ ಜಿಲ್ಲಾ ರಕ್ತ ನಿಧಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಾವೇರಿ ಜಿಲ್ಲಾ ರಕ್ತ ನಿಧಿಯ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ರಕ್ತ ನಿಧಿಯಿಂದ ನಾನಾ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಏರ್ಪಡಿಸಿ ರಕ್ತದಾನ ಕುರಿತು ಹೆಚ್ಚು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದರಿಂದ ಬಹುತೇಕ ಮಂದಿ ರಕ್ತದಾನಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಮುಂಚೆ ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಇನ್ನಿತರೆ ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತದ ಅಲಭ್ಯತೆಯಿಂದಲೇ ಸಾಕಷ್ಟು ಮಂದಿ ಮೃತಪಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಕ್ತ ಲಭ್ಯವಾಗುವುದರಿಂದ ಮೃತರ ಸಂಖ್ಯೆಕಡಿಮೆಯಾಗಿದೆ ಎಂದರು.
30 ಜನರು ರಕ್ತದಾನ ಮಾಡಿದರು.2 ಜನ ಮಹಿಳಾ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಉಳಿದ ಮಹಿಳೆಯರಿಗೆ ಮಾದರಿಯಾಗಿದ್ದು, ಶಿಬಿರದಲ್ಲಿ ತುಂಬಾ ವಿಶೇಷವಾಗಿತ್ತು.ಶಿಬಿರದಲ್ಲಿ ಏಡ್ಸ್ ಭಯ ಬೇಡ ಎಚ್ಚರಿಕೆಇರಲಿ ಎಂಬ ವಿಷಯವನ್ನು ಕುರಿತು ಮತ್ತು ರಕ್ತದಾನದ ಬಗ್ಗೆ ತಾಲೂಕು ಆಸ್ಪತ್ರೆಯ ಆಪ್ತ ಸಮಾಲೋಚಕ ಜಯಪ್ಪ ಬಿದರಿ ಮಾತನಾಡಿ, ಡಿಜಿಟಲ್ ಸಾಕ್ಷರತೆ ಭಾರತಕ್ಕಾಗಿ ಯುವಜನತೆ ಈ ಧ್ಯೇಯ ಉದ್ದೇಶದೊಂದಿಗೆ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ 2026 ಎಚ್‌ಐವಿ ಅಪಾಯದ ಮೌಲ್ಯಮಾಪನಕ್ಕಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಬೇಕು ಎಂದರು. ಜಿಲ್ಲಾರಕ್ತ ನಿಧಿಯ ಸಿಬ್ಬಂದಿ ಸಿದ್ದು ಹಿರಿಗಣ್ಣವರ, ರೇವಣ ಸಿದ್ದಪ್ಪ ತೆಂಬದ್, ಶ್ರೀನಿವಾಸ್, ಚಂಕಾ ಲಮಾಣಿ, ಭರತ್ ಮರಡಿ, ಶಾಲೆಶ ಲಮಾಣಿ , ಮಂಜುನಾಥ ಲಮಾಣಿ , ಹನುಮಂತಪ್ಪ ಲಮಾಣಿ, ಕರಣಮರಡಿ, ನಂದೇಪ್ಪ ಲಮಾಣಿ , ಸುನಿಲ್ ಲಮಾಣಿ , ಶೇಖಪ್ಪ ಲಮಾಣಿ, ಸಚಿನ್ ಲಮಾಣಿ , ತರುಣ ಮಾಳಾಪುರ , ಭರತ್ ಚಿಕ್ಕಮಾಗಡಿ, ಅವಿನಾಶ , ಸೋಮೇಶ್ ಪೀ ಲಮಾಣಿ , ಗಂಗಾಧರ ಭಾವಾಪುರ, ಯೋಗೇಶ ಲಮಾಣಿ , ರವಿ ಎಸ್.ಎಲ್. , ಆಂಜನೇಯ, ರವಿ ಬಿ.ಎಲ್., ರೇವಣಿ ನಾಯ್ಕ ಚನ್ನಳ್ಳಿ, ಗಣೇಶ ಲಮಾಣಿ, ನಾಗರಾಜ ಲಮಾಣಿ , ತಿಪ್ಪವ್ವ ಲಮಾಣಿ , ಸುಮಾ ಲಮಾಣಿ ,ಗೋಪಾಲ್ ಲಮಾಣಿ , ಶಂಕರ್ ಡಿ. ಲಮಾಣಿ , ದಿನೇಶ್ ಲಮಾಣಿ, ದೇವರಾಜ ಎಂ. ನಾಯಕ, ಲೋಕೇಶ ಲಮಾಣಿ, ರಾಜು ಲಮಾಣಿ, ಉಮೇಶ ಲಮಾಣಿ, ಶಿವಪ್ಪ ಲಮಾಣಿ, ಮಹದೇವಪ್ಪ ಲಮಾಣಿ, ಬಸವರಾಜಪ್ಪ ಲಮಾಣಿ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಇದ್ದರು.ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಆಸರೆಯಾಗಿ-ಲಮಾಣಿ
ರಕ್ತದಾನ ಮಹಾದಾನವಾಗಿದೆ. ತಪ್ಪು ಕಲ್ಪನೆಗಳಿಂದ ಹೊರಬಂದು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಆಸರೆಯಾಗಬೇಕೆಂದು ಸಂತ ಸೇವಾಲಾಲ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹುತ್ತೇಶ ಲಮಾಣಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.