ಸಾರಾಂಶ
ರಕ್ತದಾನವು ಶ್ರೇಷ್ಠ ಸೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಅನೇಕ ಜೀವಗಳನ್ನು ಕಾಡುತ್ತಿರುವುದನ್ನು ವಿವರಿಸಿದರು. "ರಕ್ತದಾನ ಮಾಡುವ ಮೂಲಕ ನಾವು ಜೀವ ಉಳಿಸಬಹುದು,ಸ್ಥಳೀಯ ಶಾಸಕರಿಂದ ನಾವು ರಕ್ತದ ಬ್ಯಾಂಕ್ ಸ್ಥಾಪನೆಗಾಗಿ ಮನವಿಯನ್ನು ತಲುಪಿಸಿದ್ದೇವೆ. ಶೀಘ್ರದಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು. ಮಹಿಳೆಯರಿಗೆ ಇತ್ತೀಚೆಗೆ ರಕ್ತದ ಅವಶ್ಯಕತೆ ಹೆಚ್ಚಿದೆ. ರಕ್ತದಾನದಿಂದ ಹೊಸ ರಕ್ತಕಣಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸಹಾಯವಾಗುತ್ತದೆ ಎಂದು ಸಂದೇಶ ನೀಡಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ರಕ್ತದಾನವು ಶ್ರೇಷ್ಠ ಸೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀ ದುರ್ಗ ಗಣಪತಿ ಗೆಳೆಯರ ಬಳಗ ಹಾಗೂ ಹಾಸನದ ಹಿಮ್ಸ್ ಸಹಯೋಗದಲ್ಲಿ ಲಕ್ಷ್ಮೀಪುರ ಬಡಾವಣೆಯಲ್ಲಿ ಹಮ್ಮಿಕೊಂಡ ಸಾಮರಸ್ಯ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಯುವ ಸಮುದಾಯವು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಿರುವುದು ಸಮಾಜದ ಶ್ರೇಯಸ್ಸಿಗಾಗಿ ಅನಿವಾರ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಅನೇಕ ಜೀವಗಳನ್ನು ಕಾಡುತ್ತಿರುವುದನ್ನು ವಿವರಿಸಿದರು. "ರಕ್ತದಾನ ಮಾಡುವ ಮೂಲಕ ನಾವು ಜೀವ ಉಳಿಸಬಹುದು,ಸ್ಥಳೀಯ ಶಾಸಕರಿಂದ ನಾವು ರಕ್ತದ ಬ್ಯಾಂಕ್ ಸ್ಥಾಪನೆಗಾಗಿ ಮನವಿಯನ್ನು ತಲುಪಿಸಿದ್ದೇವೆ. ಶೀಘ್ರದಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ, ಡಾ. ದೀಪ ಮಾತನಾಡಿ, ರಕ್ತದಾನವು ದಾನಗಳಲ್ಲಿ ಶ್ರೇಷ್ಠವಾದುದಾಗಿದೆ. ಮಹಿಳೆಯರಿಗೆ ಇತ್ತೀಚೆಗೆ ರಕ್ತದ ಅವಶ್ಯಕತೆ ಹೆಚ್ಚಿದೆ. ರಕ್ತದಾನದಿಂದ ಹೊಸ ರಕ್ತಕಣಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸಹಾಯವಾಗುತ್ತದೆ ಎಂದು ಸಂದೇಶ ನೀಡಿದರು.ಶಿಬಿರದಲ್ಲಿ ನಗರಸಭೆ ಉಪಾಧ್ಯಕ್ಷ ಮನೋಹರ್, ಸದಸ್ಯ ದರ್ಶನ್, ಮುಖಂಡರು ಮಲ್ಲಿಕಾರ್ಜುನ್, ಗೆಳೆಯರ ಬಳಗದ ಸಾಧಕ ಸದಸ್ಯರು ಪ್ರಶಾಂತ್, ಸಚಿನ್, ರೋಹಿತ್, ಕಾರ್ತಿಕ್, ಮಂಜುನಾಥ್, ಸಂಜಯ್, ಧನುಷ್, ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.