ಸಾರಾಂಶ
ಆಳಂದ ತಾಲೂಕಿನ ಮಾದನಹಿಪ್ಪರಗಾದ ಶಿವಲಿಂಗೇಶ್ವರ ವಿರಕ್ತ ಮಠದ ಲಿಂ. ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದಸ್ಕ್ತದಾನ ಶಿಬಿರದಲ್ಲಿ 209 ಯುವಜನರು ರಕ್ತದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಆಳಂದ
ರಕ್ತದಾನವು ಶ್ರೇಷ್ಠ ದಾನವಾಗಿದ್ದು ಒಂದು ಜೀವ ಉಳಿಸುವ ಪುಣ್ಯದ ಕೆಲಸವಾಗಿದೆ ಎಂದು ಹಾವೇರಿಯ ಸದಾಶಿವ ಸ್ವಾಮೀಜಿ ಹೇಳಿದರು.ತಾಲೂಕಿನ ಮಾದನಹಿಪ್ಪರಗಾದ ಶಿವಲಿಂಗೇಶ್ವರ ವಿರಕ್ತ ಮಠದ ಲಿಂ. ಶಾಂತಲಿಂಗ ಶ್ರೀಗಳ ಹಾಗೂ ಲಿಂ. ಶಿವಲಿಂಗ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದ ನಿಮಿತ್ತ ಅಭಿನವ ಶ್ರೀ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಶಾಲಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕಲಬುರಗಿ ಜಿಮ್ಸ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ಉಭಯ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮದ ನಿಮಿತ್ತ ಶ್ರೀಮಠವು ಸಮಾಜ ಸೇವೆಯ ಉತ್ತಮ ಕಾರ್ಯ ಮಾಡುತ್ತಾ ಬರುತ್ತಿರುವದು ಶ್ಲಾಘನೀಯವಾಗಿದೆ. ಇಂದು ಅನೇಕ ಸಂಧರ್ಬದಲ್ಲಿ ಅವಶ್ಯಕ ರಕ್ತ ಸಿಗದೆ ಜನ ಸಾವನ್ನಪ್ಪುತ್ತಿದ್ದಾರೆ. ನಾವು ದಾನ ಮಾಡುವ ರಕ್ತ ಒಂದು ಜೀವ ಉಳಿಸಬಹುದಾಗಿದ್ದು ಪ್ರತಿಯೊಬ್ಬರು ಕೂಡಾ ರಕ್ತದಾನ ಮಾಡುವ ಮೂಲಕ ಒಂದು ಜೀವ ಉಳಿಸುವ ಪುಣ್ಯದ ಕಾರ್ಯಕ್ಕೆ ಸದಾ ಕೈಜೋಡಿಸಬೇಕು ಎಂದು ಹೇಳಿದರು.ಶ್ರೀಮಠದ ಅಭಿನವ ಶಿವಲಿಂಗ ಸ್ವಾಮೀಜಿ, ಮಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ ಪರೇಣಿ ಮಾತನಾಡಿದರು. ಈ ಸಂದರ್ಭದಲ್ಲಿ ೨೦೯ ಜನ ಯುವಕರು ರಕ್ತದಾನ ಮಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಸುಶೀಲಕುಮಾರ ಅಂಬುರೆ ಚಾರಿಟೇನಲ್ ಟ್ರಸ್ಟನ ಮಹಾಂತೇಶ ಸಣ್ಣಮನಿ, ಅಭಿನವ ಶ್ರೀ ಮಲ್ಟಿ ಸ್ಪೇಶಾಲಿಟಿ ಆಳಂದ ಆಸ್ಪತ್ರೆಯ ಪ್ರಮುಖ ಶರಣು ವಾಗ್ದರಗಿ ಸೇರಿ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನಡೆಯಿತು.