ಸಾರಾಂಶ
ಹಾವೇರಿ: ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದೆ. ಆರೋಗ್ಯ ಸಮತೋಲನಕ್ಕೆ ಹಾಗೂ ಜೀವ ಉಳಿಸುವ ಕಾರ್ಯಕ್ಕೆ ರಕ್ತದಾನ ಮಾಡಲು ಯುವ ಸಮೂಹ ಮುಂದಾಗಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ತಿಳಿಸಿದರು.ಸ್ಥಳೀಯ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಹಾವೇರಿ ಲಯನ್ಸ್ ಕ್ಲಬ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಆಶ್ರಯದಲ್ಲಿ ಆಯೋಜಿಸಿದ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಜೀವ ಉಳಿಸುವ ಈ ಕಾರ್ಯಕ್ಕೆ ಹೆಚ್ಚು ಹೆಚ್ಚು ಬೆಂಬಲ ದೊರೆಯಬೇಕಿದೆ. ರಕ್ತ ಜೀವವನ್ನು ಉಳಿಸಿದರೆ ನೀರು ಸೃಷ್ಟಿ ಉಳಿಸುತ್ತದೆ. ರಕ್ತವನ್ನು ಹಾಗೂ ನೀರನ್ನು ಉತ್ಪಾದನೆ ಮಾಡುವ ಯಾವುದೇ ಕಾರ್ಖಾನೆ ಹುಟ್ಟಿಲ್ಲ. ಹುಟ್ಟುವುದಿಲ್ಲ. ನೀರು ಭೂಮಿಯಲ್ಲಿ ಉತ್ಪಾದನೆಯಾದರೆ ರಕ್ತ ನಮ್ಮಲ್ಲೆ ಉತ್ಪಾದನೆಯಾಗುತ್ತದೆ. ಉತ್ತಮ ಆರೋಗ್ಯ ವೃದ್ಧಿಗೆ ರಕ್ತದಾನ ಸಹಕಾರಿಯಾಗಿದೆ. ವಿದ್ಯಾರ್ಥಿಗಳು- ಯುವಕರು ತಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳುವುದರ ಜತೆಗೆ ಮತ್ತೊಬ್ಬರಿಗೆ ರಕ್ತದಾನ ಮಾಡುವ ಶ್ರೇಷ್ಠ ಕೆಲಸ ಮಾಡಬೇಕಿದೆ. ರಕ್ತದಾನದ ತಪ್ಪು ಕಲ್ಪನೆ ಹೋಗಲಾಡಿಸಲು ಹಾಗೂ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು. ಹಾವೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎಚ್. ಕಬ್ಬಿಣಕಂತಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಲಯನ್ಸ್ ಕ್ಲಬ್ ನಿರಂತರವಾಗಿ ಆರೋಗ್ಯಕರ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಈ ಬಾರಿ ಹೊಸಮಠ ಕಾಲೇಜಿನ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡುವ ತೀರ್ಮಾನ ಮಾಡಿದ್ದು, ಈ ದಿನ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ. ಬಸವರಾಜ ತಳವಾರ, ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯ ರವಿ ಮೆಣಸಿನಕಾಯಿ, ಲಯನ್ಸ್ ಕಾರ್ಯದರ್ಶಿ ಶಿವರಾಜ ಮರ್ತೂರ, ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ, ಲಯನ್ಸ್ ಕ್ಲಬ್‌ನ ಪಿ.ಸಿ. ಹಿರೇಮಠ, ಎಸ್.ಎಚ್. ಕಬ್ಬಿಣಕಂತಿಮಠ, ವಿ.ಜಿ. ಬಣಕಾರ, ನಿತೀನ್ ಹೊರಡಿ, ಸುಭಾಸ ಹುಲ್ಲಾಳದ, ವಿ.ಆರ್. ಹಾವನೂರ, ಅಶೋಕ ಮಾಗನೂರ, ಆನಂದ ಅಟವಳಗಿ, ರೆಡ್‌ಕ್ರಾಸ್ ಸಂಸ್ಥೆಯ ಉಡಚಪ್ಪ ಮಾಳಗಿ, ನಿಂಗಪ್ಪ ಆರೇರ, ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಬಿ.ವಿ., ಎಂ.ಕೆ. ಮತ್ತಿಹಳ್ಳಿ, ಎಚ್.ಜಿ. ಮುಳಗುಂದ, ಗಂಗಾಶ್ರೀ ನಾಗಮ್ಮನವರ, ವಿವೇಕಾನಂದ ಇಂಗಳಗಿ, ಬೇಬಿ ಲಮಾಣಿ, ಮಧುಶ್ರೀ ದೇಸಾಯಿ, ಸುಮೇರೊ, ಭಾರ್ಗವಿ ಸೇರಿದಂತೆ ಲಯನ್ಸ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ಬಿಇಡಿ ಕಾಲೇಜಿನ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹಾಗೂ ರಕ್ತದಾನಿಗಳು ಪಾಲ್ಗೊಂಡಿದ್ದರು.