ಕಾರ್ತೀಕ ಮಾಸದಲ್ಲಿ ದೀಪ, ವಸ್ತ್ರ ದಾನ ಮಾಡಿ

| Published : Dec 13 2024, 12:46 AM IST

ಸಾರಾಂಶ

ಸಿರಿಗೆರೆ: ಶ್ರೇಷ್ಠವಾದ ಕಾರ್ತೀಕ ಮಾಸದಲ್ಲಿ ದೀಪ ಮತ್ತು ವಸ್ತ್ರ ದಾನ ಮಾಡುವುದು ಒಳ್ಳೆಯದು ಎಂದು ದಾವಣಗೆರೆ ರಾಯರ ಮಠದ ಪಂಡಿತ ಕೃಷ್ಣಾಚಾರ್ಯ ಮಣ್ಣೂರು ಹೇಳಿದರು.

ಸಿರಿಗೆರೆ: ಶ್ರೇಷ್ಠವಾದ ಕಾರ್ತೀಕ ಮಾಸದಲ್ಲಿ ದೀಪ ಮತ್ತು ವಸ್ತ್ರ ದಾನ ಮಾಡುವುದು ಒಳ್ಳೆಯದು ಎಂದು ದಾವಣಗೆರೆ ರಾಯರ ಮಠದ ಪಂಡಿತ ಕೃಷ್ಣಾಚಾರ್ಯ ಮಣ್ಣೂರು ಹೇಳಿದರು.ಭರಮಸಾಗರದಲ್ಲಿ ಪವಮಾನ ಪ್ರತಿಷ್ಠಾನದವರು ಆಯೋಜಿಸಿದ್ದ ಹಿರಿಯ ನಾಗರಿಕರಿಗೆ ಷಷ್ಠ್ಯಬ್ದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭರಮಸಾಗರದಲ್ಲಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಕಳೆದ ೨೦ ವರ್ಷಗಳಿಂದ ಹಿರಿಯ ನಾಗರಿಕರನ್ನು ಗೌರವಿಸುವಂತಹ ಕೆಲಸವನ್ನು ಪವಮಾನ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಇದು ಹಿರಿಯ ನಾಗರಿಕರ ಬಗ್ಗೆ ಪವಮಾನ ಸಂಸ್ಥೆಗೆ ಇರುವ ಗೌರವವನ್ನು ತೋರಿಸುತ್ತದೆ ಎಂದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಜ್ಯೋತಿಷ್ಯ ವಾಸ್ತು ಸಲಹೆಗಾರ್ತಿ ಮಾಲಿ ವಿ. ವಿಠ್ಠಲ್‌, ಪವಮಾನ ಪ್ರತಿಷ್ಠಾನವು ಎಲ್ಲ ಹಿರಿಯರನ್ನು ಗಣನೆಗೆ ತೆಗೆದುಕೊಂಡು ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.ವಿಶ್ವಮಾಧ್ವ ಮಹಾಪರಿಷತ್‌ ಘಟಕದ ಎಚ್.‌ನಾಗರಾಜ ರಾವ್‌, ಕವಯತ್ರಿ ಕೋಮಲ, ಜೆ.ಎನ್.‌ ವಸಂತಕುಮಾರ್‌, ಡಿವಿಎಸ್‌ ಸಂಸ್ಥೆಯ ಗುರುಸಿದ್ದೇಶ್‌ ಮಾತನಾಡಿದರು.ಹಿರಿಯರಾದ ಎಂ.ಜಿ. ಭಾರತಿ, ಬಿ. ಮಲ್ಲಾರಿ ರಾವ್‌, ವೀಣಾ ನಂಜುಂಡಯ್ಯ, ವಿಶಾಲ,ಲೀಲಾಕೃಷ್ಣ, ನಾಗರತ್ನಮ್ಮ ವಿಜಯಕುಮಾರ್‌, ಎಚ್.ಸಿ. ಕುಸುಮ ದತ್ತಾತ್ರೇಯ, ಲತಾ ಶೇಷಗಿರಿರಾವ್‌ ಇವರನ್ನು ಸತ್ಕರಿಸಲಾಯಿತು.ಲತಾ ಪ್ರಾರ್ಥಿಸಿದರು. ಜನತಾವಾಣಿಯ ಅನಂತ ಪದ್ಮನಾಭರಾವ್‌ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ್‌ ಶೆಣೈ ನಿರೂಪಿಸಿದರು. ಸುಶಮಿಂದ್ರ ವಂದಿಸಿದರು.