ಅಗತ್ಯವಿದ್ದಾಗ ನೀಡುವ ರಕ್ತ ಜೀವರಕ್ಷಕವಾಗಿದೆ

| Published : Nov 25 2024, 01:02 AM IST

ಅಗತ್ಯವಿದ್ದಾಗ ನೀಡುವ ರಕ್ತ ಜೀವರಕ್ಷಕವಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕೃತಿ ನಮಗೆ ನೀಡಿರುವ ರಕ್ತವೂ ಅತ್ಯಮೂಲ್ಯ ಕೊಡುಗೆಯಾಗಿದ್ದು, ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಕಾರ್ಯವನ್ನು ರಕ್ತದಾನದಿಂದ ಮಾಡಬಹುದಾಗಿದೆ. ಅಗತ್ಯ ವ್ಯಕ್ತಿಗಳಿಗೆ ಕೊಡುವ ರಕ್ತವೂ ಬೆಲೆ ಕಟ್ಟಲಾಗದ ಜೀವ ರಕ್ಷಕವಾಗಿದೆ, ದಾನಿಗಳು ನೀಡುವ ರಕ್ತ ಅಗತ್ಯ ವ್ಯಕ್ತಿಗಳಿಗೆ ನೀಡಿದ ಸಂದರ್ಭದಲ್ಲಿ ಅವರಲ್ಲಿನ ನಿರಾಳತೆ ಮತ್ತು ಧನ್ಯತಾಭಾವಕ್ಕೆ ಸರಿಸಾಟಿಯಿಲ್ಲ ಮತ್ತು ತುರ್ತು ಸಂದರ್ಭಕ್ಕೆ ರಕ್ತದಾನಿಗಳ ಕೊಡುಗೆ ಅಗತ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಟಿಪ್ಪು ಶಾದಿಮಹಲ್‌ನಲ್ಲಿ ಸುನ್ನಿ ಜುಮ್ಮ ಮಸೀದಿ ಕಮಿಟಿ ಹಾಗೂ ಟಿಪ್ಪು ಯುವ ಸಮಾಜ ಸೇವಕರು "ದೇಹ ಮಣ್ಣಿಗಾದರೆ ಜೀವ ಕನ್ನಡಕ್ಕೆ " ಎಂಬ ಧ್ಯೇಯ ವಾಕ್ಯದೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಶಹೀದ್ ಅವರ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಕ್ತದಾನ ಮಾಡುವ ವ್ಯಕ್ತಿಯೂ ಸಂಪೂರ್ಣವಾಗಿ ಆರೋಗ್ಯವಂತರಾಗಿರಬೇಕು, ೪೫ ಕೆಜಿಗೂ ಹೆಚ್ಚು ತೂಕವಿರುವ ೧೮ರಿಂದ ೬೦ ವರ್ಷದೊಳಗಿನ ವ್ಯಕ್ತಿಗಳು ರಸ್ತದಾನ ಮಾಡಬಹುದು ಮತ್ತು ಕಾಮಾಲೆ ರೋಗ, ಮೂತ್ರಪಿಂಡ ಸಮಸ್ಯೆ, ಮಧುಮೇಹ, ಅಧಿಕ ರಕ್ಯದೊತ್ತಡ ಹಾಗೂ ಇತರೆ ಮಾರಣಾಂತಿಕ ಕಾಯಿಲೆಗಳು ಇರಬಾರದು ಎಂದು ತಿಳಿಸಿ, ಸಲಹೆ ಹಾಗೂ ಮುಂಜಾಗ್ರತೆ ಕ್ರಮಗಳ ಕುರಿತು ಸಲಹೆ ನೀಡಿದರು.

ಚನ್ನರಾಯಪಟ್ಟಣದ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಚ್.ಜಿ.ಭರತ್ ಹಾಗೂ ಡಾ. ಅಬ್ದುಲ್ ಕಲಾಂ ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಸೈಯದ್ ಖಾದ್ರಿ ಮಾತನಾಡಿದರು.ದಾನಿಗಳು ಶಿಬಿರದಲ್ಲಿ ೩೮ ಯೂನಿಟ್ ರಕ್ತ ದಾನ ಮಾಡಿದರು.

ಡಾ. ಶಾಬಸ್ಸ್, ಸುನ್ನಿ ಜುಮ್ಮ ಮಸೀದಿ ಕಮಿಟಿ ಅಧ್ಯಕ್ಷ ಜಬೀರ್, ಟಿಪ್ಪು ಯುವ ಸಮಾಜ ಸೇವಕರಾದ ಇರ್ಫಾನ್ ಪಾಷ, ನಸೀರ್ ಖಾನ್, ಎಸ್‌ದಾಸ್, ಮಸೂದ್‌, ಫರ್ದೀಪ್ ಹಾಗೂ ಇತರರು ಇದ್ದರು.