ಸಾರಾಂಶ
ಕರ್ಣಾಟಕ ಬ್ಯಾಂಕ್ ವತಿಯಿಂದ ಸಿಎಸ್‌ಆರ್ ನಿಧಿಯಲ್ಲಿ ರಕ್ತ ಸಂಗ್ರಹಣೆಗಾಗಿ ದೇಣಿಗೆ
ಹುಬ್ಬಳ್ಳಿ: ಕರ್ಣಾಟಕ ಬ್ಯಾಂಕ್ ವತಿಯಿಂದ ಸಿಎಸ್‌ಆರ್ ನಿಧಿಯಲ್ಲಿ ರಕ್ತ ಸಂಗ್ರಹಣೆಗಾಗಿ ದೇಣಿಗೆ ನೀಡಿದ ಸುಸಜ್ಜಿತ ರಕ್ತ ಸಂಗ್ರಹಣೆ ವಾಹನವನ್ನು ಶನಿವಾರ ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು.
ಜಗದ್ಗುರು ಶ್ರೀರಾಜಯೋಗೀಂದ್ರ ಮಹಾಸ್ವಾಮಿಗಳವರು ಸಾನ್ನಿಧ್ಯ ವಹಿಸಿದ್ದರು. ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಖ್ಯಾತ ಹೃದಯರೋಗ ತಜ್ಞ ಡಾ.ವಿಜಯಕೃಷ್ಣ ಕೋಳೂರು, ಕರ್ಣಾಟಕ ಬ್ಯಾಂಕ್ ಎಜಿಎಂ ಈರಣ್ಣ ನಾಗರಾಳ, ಮುಖ್ಯ ವ್ಯವಸ್ಥಾಪಕ ಅರುಣಕುಮಾರ ಸೊಂಡೂರು, ಸಂಜೀವ ಗಲಗಲಿ, ಕೇಶವ ದೇಸಾಯಿ, ರಾಷ್ಟೋತ್ಥಾನ ರಕ್ತ ಕೇಂದ್ರದ ವೀರೇಂದ್ರ ಛೇಡಾ, ದತ್ತಮೂರ್ತಿ ಕುಲಕರ್ಣಿ, ಡಾ.ಎಸ್.ಎಸ್. ಸಂಗೊಳ್ಳಿ, ಮಠದ ಭಕ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.