ಕೆ.ಎಂ.ದೊಡ್ಡಿ ಮೆಣಸಗೆರೆ ಗ್ರಾಮದ ಶ್ರೀಗದ್ದೆ ಮಾದೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ದೇಗುಲದ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ 1 ಲಕ್ಷ ರು. ಅನುದಾನದ ಡಿಡಿಯನ್ನು ಹಸ್ತಾಂತರ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮೆಣಸಗೆರೆ ಗ್ರಾಮದ ಶ್ರೀಗದ್ದೆ ಮಾದೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ದೇಗುಲದ ಸಮಿತಿ ಅಧ್ಯಕ್ಷರು, ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 1 ಲಕ್ಷ ರು. ಅನುದಾನದ ಡಿಡಿಯನ್ನು ಹಸ್ತಾಂತರಿಸಲಾಯಿತು.

ಧರ್ಮಸ್ಥಳ ಶ್ರೀಕ್ಷೇತ್ರದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 1,00,000/- ಅನುದಾನ ಮಂಜೂರು ಮಾಡಿದ್ದು, ಡಿಡಿಯನ್ನು ಭಾರತಿನಗರ ಯೋಜನಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿ ಮಂಜುನಾಥ ಅವರು ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಗ್ರಾಮಸ್ಥರು ಒಗ್ಗೂಡಿ ಕೆಲಸ ಮಾಡಬೇಕು. ಗ್ರಾಮಸ್ಥರು ಸೇರಿ ಧಾರ್ಮಿಕ ಶ್ರದ್ದಾ ಕೇಂದ್ರ ಅಭಿವೃದ್ಧಿ ಮಾಡುತ್ತಿದ್ದು, ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

ಈ ವೇಳೆ ದೇವಸ್ಥಾನ ಜೀರ್ಣೋದ್ಧಾದಾರ ಸಮಿತಿ ಅಧ್ಯಕ್ಷ ಎಂ.ಕುಮಾರ್ ಅವರು, ಶ್ರೀಧರ್ಮಸ್ಥಳ ಕ್ಷೇತ್ರದಿಂದ ಅನೇಕ ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರ್ಯಕ್ರಮಗಳನ್ನು ಇಡೀ ರಾಜ್ಯದ ಜನರಿಗಾಗಿ ಮಾಡುತ್ತಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಣ್ಣ, ಸದಸ್ಯ ಶಿವಲಿಂಗಯ್ಯ, ಗ್ರಾಮದ ಮುಖಂಡರಾದ ಅಪ್ಪಾಜಿಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಧರಣಿ ಪುಟ್ಟೇಗೌಡ, ಒಕ್ಕೂಟದ ಕಾರ್ಯದರ್ಶಿ ನಾಗೇಶ್, ವಲಯದ ಮೇಲ್ವಿಚಾರಕಿ ಎಚ್.ಜಿ.ಅಶ್ವಿನಿ, ಸಮಿತಿ ಉಪಾಧ್ಯಕ್ಷರು, ಕಾರ್ಯದರ್ಶಿ, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಅ.೩೧ರಂದು ಇಂಡುವಾಳು ಎಚ್.ಹೊನ್ನಯ್ಯ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮಂಡ್ಯಜನದನಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ಕರ್ನಾಟಕ ಸಂಘದ ಸಹಕಾರದೊಂದಿಗೆ ೨೯ನೇ ವರ್ಷದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ, ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ, ೩ನೇ ವರ್ಷದ ಇಂಡುವಾಳು ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಮತ್ತು ಎಚ್.ಶಾರದಮ್ಮ ಹಾಗೂ ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭವನ್ನು ಆ.೩೧ ರಂದು ಸಂಜೆ ೫ ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜನದನಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೋಣನಹಳ್ಳಿ ಜಯರಾಮು ತಿಳಿಸಿದರು.

ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಸಾರ್ವಜನಿಕ ಸೇವೆ ಹಾಗೂ ಹೋರಾಟದಲ್ಲಿ ತೊಡಗಿರುವ ಪ್ರತಿಷ್ಠಿತ ಇಂಡುವಾಳು ಹೊನ್ನಯ್ಯ ಕುಟುಂಬದ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮುತ್ತನೂರು ಗ್ರಾಮದ ಬೆಳ್ಳಶೆಟ್ಟಿ, ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿಗೆ ವೈದ್ಯೆ ಆರ್.ತಾರಾ, ಇಂಡುವಾಳು ಎಚ್.ಹೊನ್ನಪ್ಪ ಕ್ರೆಡಾ ಪ್ರಶಸ್ತಿಗೆ ಸೋಮಶೇಖರ್ (ವಾಲಿಬಾಲ್ ಸೋಮಣ್ಣ) ಅವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕೃತರಿಗೆ ೨೫ ಸಾವಿರ ನಗದಿನೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಸಾಲಿನ ಎಚ್.ಶಾರದಮ್ಮ ಮತ್ತು ಕೆಂಪಮ್ಮ ವಿದ್ಯಾರ್ಥಿ ಪುರಸ್ಕಾರಕ್ಕೆ ಎಂ.ಆರ್.ದೀಕ್ಷಿತಾ, ಚಂದನ್ ಬಿ.ಎಂ., ಚೈತ್ರಾ ಹಾಗೂ ಬಿ.ಎನ್.ಜ್ಯೋತಿ ಅವರನ್ನು ಆಯ್ಕೆ ಮಾಡಿಲಾಗಿದ್ದು, ತಲಾ ೫ ಸಾವಿರ ನಗದಿನೊಂದಿಗೆ ಪುರಸ್ಕರಿಸಲಾಗುವುದು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ ಸಮಾರಂಭದ ಅಧ್ಯಕ್ಷತೆ ವಹಿಸುವರು. ರಂಗಾಯಣ ಮೈಸೂರು ನಿರ್ದೇಶಕ ಸತೀಶ್ ತಿಪಟೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ.ಎಸ್.ತುಕಾರಾಂ ಅಭಿನಂದನಾ ನುಡಿಗಳನ್ನಾಡಲಿದ್ದು, ಇಂಡುವಾಳು ಎಚ್.ಹೊನ್ನಯ್ಯ ಅವರ ಮಗ ಹಾಗೂ ರೈತಪರ ಹೋರಾಟಗಾರ ಇಂಡುವಾಳು ಚಂದ್ರಶೇಖರ್ ಭಾಗವಹಿಸುವರು ಎಂದರು.ಗೋಷ್ಠಿಯಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್, ಟ್ರಸ್ಟ್ ಉಪಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಹಾಜರಿದ್ದರು.