ಸಾರಾಂಶ
ತಾಲೂಕಿನ ಬಿದರಕುಂದಿ ಗ್ರಾಮದ ಹಾಗೂ ಎಸ್.ಎಸ್.ಹುಲ್ಲೂರ ಅವರು ಅವರ ತಂದೆಯ ನೆನಪಿಗಾಗಿ ಪಟ್ಟಣದ ಸಂಗಮೇಶ್ವರ ನಗರ ಬಡಾವಣೆಯ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ ಇರುವ ಸುಮಾರು ಒಂದು ಕೋಟಿ ಬೆಲೆ ಬಾಳುವ ಖುಲ್ಲಾ ಜಮೀನನನ್ನು ತಿಂಥಣಿ ಬ್ರಿಜ್ ಶ್ರೀ ಕಾಗೆನೆಲೆ ಕನಕಗುರು ಪೀಠದ ಪೀಠಾಧಿಪತಿ ಶ್ರೀಸಿದ್ದರಮಾನಂದಪುರಿ ಮಹಾಸ್ವಾಮಿಗಳ ಮಠಕ್ಕೆ ಶೈಕ್ಷಣಿಕ ಉದ್ದೇಶಕ್ಕಾಗಿ ಉಚಿತ ದಾನವಾಗಿ ನೀಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನ ಬಿದರಕುಂದಿ ಗ್ರಾಮದ ಹಾಗೂ ಎಸ್.ಎಸ್.ಹುಲ್ಲೂರ ಅವರು ಅವರ ತಂದೆಯ ನೆನಪಿಗಾಗಿ ಪಟ್ಟಣದ ಸಂಗಮೇಶ್ವರ ನಗರ ಬಡಾವಣೆಯ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ ಇರುವ ಸುಮಾರು ಒಂದು ಕೋಟಿ ಬೆಲೆ ಬಾಳುವ ಖುಲ್ಲಾ ಜಮೀನನನ್ನು ತಿಂಥಣಿ ಬ್ರಿಜ್ ಶ್ರೀ ಕಾಗೆನೆಲೆ ಕನಕಗುರು ಪೀಠದ ಪೀಠಾಧಿಪತಿ ಶ್ರೀಸಿದ್ದರಮಾನಂದಪುರಿ ಮಹಾಸ್ವಾಮಿಗಳ ಮಠಕ್ಕೆ ಶೈಕ್ಷಣಿಕ ಉದ್ದೇಶಕ್ಕಾಗಿ ಉಚಿತ ದಾನವಾಗಿ ನೀಡಿದರು.ಈ ವೇಳೆ ತಿಂಥಣಿ ಬ್ರಿಜ್ ಶ್ರೀ ಕಾಗೆನೆಲೆ ಕನಕಗುರು ಪೀಠದ ಪೀಠಾಧಿಪತಿ ಶ್ರೀಸಿದ್ದರಮಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಹಣವಂತರು ತಾವು ಗಳಿಸಿದ ಒಂದು ಭಾಗವನ್ನು ದಾನ, ಧರ್ಮದ ಮೂಲಕ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಾಕಷ್ಟು ಜನ ಶ್ರೀಮಂತರಿದ್ದಾರೆ. ಆದರೆ, ದಾನ ಮಾಡುವ ಇಚ್ಚಾಸಕ್ತಿ ಇರುವುದಿಲ್ಲ. ಆದರೆ, ನಿವೃತ್ತ ಡಿವೈಎಸ್ಪಿ ಎಸ್ ಎಸ್ ಹುಲ್ಲೂರ ಅವರು ಸುಮಾರು ಒಂದು ಕೋಟಿ ರು.ಗಳ ಬೆಲೆ ಬಾಳುವ ಆಸ್ತಿಯನ್ನು ನಮ್ಮ ಮಠದಿಂದ ನೂತನವಾಗಿ ನಿರ್ಮಿಸಲಾಗುತ್ತಿರುವ ಶ್ರೀ ರೇವಣಸಿದ್ದೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯ ನಿರ್ಮಾಣಕ್ಕೆ ಸುಮಾರು ೨೦ ಗುಂಟೆ ಜಮೀನನ್ನು ತಮ್ಮ ತಂದೆಯವರ ಹೆಸರಲ್ಲಿನಲ್ಲಿ ದಾನದ ರೂಪದಲ್ಲಿ ದಾಖಲೆಗಳ ಸಮೇತ ಭಕ್ತರ ಸಮ್ಮುಖದಲ್ಲಿ ನೀಡಿದ್ದು ನಿಜಕ್ಕೂ ಶ್ಲಾಘನೀಯ ಎಂದರು.
ಈ ವೇಳೆ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹಾಗೂ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಕೆಂಚಪ್ಪ ಬಿರಾದಾರ, ಬಿ.ಎಸ್. ಮೇಟಿ,ನಾಗಪ್ಪ ರೂಢಗಿ, ಮೈಹಿಬೂಬ ಗೂರಿಕಾರ, ಬಿ ಜಿ ಬಿರಾದಾರ, ರವಿ ಜಗಲಿ, ಪ್ರದೀಪ ಜಗ್ಗಲ, ಈರಣ್ಣ ಬಡಿಗೇರ, ಸಂಗಮೇಶ ನಾಗೂರ ಸೇರಿದಂತೆ ಹಲವರು ಇದ್ದರು.