ಕೆಂಚವೀರನಹಳ್ಳಿ ಶಾಲೆಗೆ ಶುದ್ಧ ಕುಡಿವ ನೀರಿನ ಘಟಕ ಕೊಡುಗೆ

| Published : Mar 04 2025, 12:37 AM IST

ಕೆಂಚವೀರನಹಳ್ಳಿ ಶಾಲೆಗೆ ಶುದ್ಧ ಕುಡಿವ ನೀರಿನ ಘಟಕ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ತಾಲೂಕಿನ ಕೆಂಚವೀರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರವೈಟ್‌ ಲಿಮಿಟೆಡ್ ಕಂಪನಿಯಿಂದ ಶುದ್ಧ ನೀರಿನ ಘಟಕ ಉದ್ಘಾಟಿಸಲಾಯಿತು.

ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಕಂಪನಿ ಕಾರ್ಯ ಶ್ಲಾಘನೀಯ: ಮಲ್ಲೇಶ್ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ದೊಡ್ಡೇರಿ ಗ್ರಾಪಂ ವ್ಯಾಪ್ತಿಯ ಕೆಂಚವೀರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರವೈಟ್‌ ಲಿಮಿಟೆಡ್ ಕಂಪನಿ ಉಚಿತವಾಗಿ ಕೊಡುಗೆ ನೀಡಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಎನ್.ಮಲ್ಲೇಶ್ ತಿಳಿಸಿದರು. ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ವಿತರಣೆ ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರವೈಟ್‌ ಲಿಮಿಟೆಡ್ ಕಂಪನಿಯಿಂದ ಸುಮಾರು 80 ಸಾವಿರ ವೆಚ್ಚದ ಘಟಕವನ್ನು ನೀಡಿದ್ದು ಶಾಲೆಯ ಪರವಾಗಿ ಹಾಗೂ ಶಿಕ್ಷಣ ಇಲಾಖೆ ಪರವಾಗಿ ಅಭಿನಂದಿಸುವುದಾಗಿ

ಹೇಳಿದರು.

ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರವೈಟ್‌ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಸುರೇಶ್ ಮಾತನಾಡಿ, ಬೇಸಿಗೆಯ ರಣ ಬಿಸಿಲಿನಲ್ಲಿ ಮಕ್ಕಳಿಗೆ ಯಾವುದೇ ರೋಗ ವ್ಯಾಪಿಸದಂತೆ ನಿಯಂತ್ರಿಸಲು ಶುದ್ಧ ಕುಡಿಯುವ ನೀರು ಆಧಾರವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕಂಪನಿಯಿಂದ ಶಾಲೆಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿ ಡಾ.ರಾಜಣ್ಣ, ಉಮಾದೇವಿ, ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರವೈಟ್‌ ಲಿಮಿಟೆಡ್ ಕಂಪನಿಯ ಮ್ಯಾನೇಜರ್ ಸುಮನ್, ಗ್ರಾಪಂ ಸದಸ್ಯ ತಿಪ್ಪಮ್ಮ, ಮಹಂತೇಶ್, ಎಸ್‌ಡಿಎಂಸಿ ಅಧ್ಯಕ್ಷ ಕೆ.ಟಿ.ಸಂಪತ್‌ಕುಮಾರ್, ಮಾಜಿ ಅಧ್ಯಕ್ಷ ಬಸವರಾಜು, ಕೆ.ಒ.ಮಹಂತೇಶ್, ಮನು, ಕನ್ನೇಶ್, ತಿಪ್ಪೇಸ್ವಾಮಿ, ಶಿಕ್ಷಕರಾದ ಬಸವರಾಜು, ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.