ನಾನಾ ಗ್ರಾಮಗಳಿಂದ ಭಕ್ತರು ರೊಟ್ಟಿ,ದವಸ ಧಾನ್ಯ ಮತ್ತು ನಾನಾ ಬಗೆಯ ಪದಾರ್ಥ ಅರ್ಪಿಸಿದ್ದಾರೆ.

ಯಲಬುರ್ಗಾ: ತಾಲೂಕಿನ ಸುಕ್ಷೇತ್ರ ಚಿಕ್ಕವಂಲಕುಂಟಾ ಗ್ರಾಮದ ಶ್ರೀಮಾರುತೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ದಾಸೋಹಕ್ಕೆ ಭಕ್ತರಿಂದ ದವಸ ಧಾನ್ಯ ದೇಣಿಗೆ ನೀಡಲಾಯಿತು.

ಮಸಾರಿ ಭಾಗದ ಅತಿ ದೊಡ್ಡ ಜಾತ್ರೆ ಆಗಿರುವ ಮಾರುತೇಶ್ವರ ದೇವಸ್ಥಾನಕ್ಕೆ ಭಕ್ತರಿಗಾಗಿ ನಡೆಯುವ ದಾಸೋಹಕ್ಕೆ ಜಿಲ್ಲೆ ಸೇರಿ ವಿವಿಧ ತಾಲೂಕು ಹಾಗೂ ನಾನಾ ಗ್ರಾಮಗಳಿಂದ ಭಕ್ತರು ರೊಟ್ಟಿ,ದವಸ ಧಾನ್ಯ ಮತ್ತು ನಾನಾ ಬಗೆಯ ಪದಾರ್ಥ ಅರ್ಪಿಸಿದ್ದಾರೆ. ಸ್ಥಳೀಯ ಭಕ್ತರಿಂದ 25 ಸಾವಿರ ಎಳ್ಳು, ಶೇಂಗಾ ಹೋಳಿಗೆ, 35 ಸಾವಿರ ರೊಟ್ಟಿ 50 ಸಾವಿರ ಮಿರ್ಚಿ, ಗಾಣಧಾಳ ಗ್ರಾಮಸ್ಥರಿಂದ ಒಂದು ಟನ್ ಬಾಳೆಹಣ್ಣು ಹಾಗೂ ನಾನಾ ಗ್ರಾಮಗಳ ಭಕ್ತರಿಂದ 25 ಡಬ್ಬಿ ಅಡುಗೆ ಎಣ್ಣೆ, 25 ಕ್ವಿಂಟಲ್ ಅಕ್ಕಿ, 3 ಕ್ವಿಂಟಲ್ ಕಾರದ ಪುಡಿ, ಡೊಳ್ಳಿನ ಕಲಾ ತಂಡದವರಿಂದ 25 ಕೆಜಿ ತುಪ್ಪ, ಜಿಲೇಬಿ, ಮೊಸರು, ಗೊಲ್ಲ ಸಮಾಜದವರಿಂದ 2.5 ಕ್ವಿಂಟಲ್ ಜೀಲೇಬಿ, ತಾಳಕೇರಿ ಗ್ರಾಮದ ಚಿಕ್ಕವಂಕಲಕುಂಟಾ ಮಾರುತೇಶ್ವರನ ಸ್ವಚ್ಛತಾ ಮಹಿಳಾ ಸೇವಕರಿಂದ ಒಂದು ಕ್ವಿಂಟಲ್ ಬೂಂದಿ, ಹಿರೇವಂಕಲಕುಂಟಾ ಮಾರುತಿ ಕಿರಾಣಿ ಸ್ಟೋರ್ ವತಿಯಿಂದ 5000 ರೊಟ್ಟಿ ಹಾಗೂ 50 ಕೆಜಿ ಹೆಸರುಬೇಳೆ, ಹುಣಶಿಹಾಳ ಗ್ರಾಮದಿಂದ 2 ಕ್ವಿಂಟಲ್ ಮೆಣಸಿನಕಾಯಿ, ೨ ಕ್ವಿಂಟಲ ಬೆಲ್ಲ, ಮುಖಂಡ ಶರಣಪ್ಪ ನಿಲೋಗಲ್ ಅವರಿಂದ ತಲಾ ಒಂದು ಕ್ವಿಂಟಲ್ ಬೆಲ್ಲ, ಅಕ್ಕಿ, ಕುಂಟೆಗೌಡ ಸಿಂಗನಾಳ ಅವರಿಂದ 50 ಕೆಜಿ ಒಣ ಮೆಣಸಿನಕಾಯಿ, 5.5 ಕ್ವಿಂಟಲ್ ಅಕ್ಕಿ ದೇಣಿಗೆ ನೀಡಿದ್ದಾರೆ‌. ಇಷ್ಟಲ್ಲದೆ ಭಕ್ತರಿಂದ ದಾಸೋಹಕ್ಕೆ ದವಸ ಧಾನ್ಯ, ಖಾದ್ಯ ಪದಾರ್ಥಗಳು ಹರಿದು ಬಂದಿದೆ ಎಂದು ಮಾರುತೇಶ್ವರ ದೇವಸ್ಥಾನದ ವ್ಯವಸ್ಥಾಪಕ ಚಂದಪ್ಪ ಕುರಿ ತಿಳಿಸಿದ್ದಾರೆ.