ಸರ್ಕಾರಿ ಶಾಲೆಗೆ ಸೈನಿಕ ಶಾಲೆಯಿಂದ ಡೆಸ್ಕ್‌ ಕೊಡುಗೆ

| Published : Jun 15 2024, 02:04 AM IST

ಸರ್ಕಾರಿ ಶಾಲೆಗೆ ಸೈನಿಕ ಶಾಲೆಯಿಂದ ಡೆಸ್ಕ್‌ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಮೇಖ್ರಿ ವೃತ್ತದ ಸಮೀಪದ ಭಾರತೀಯ ರಕ್ಷಣೆ ಇಲಾಖೆ ಅಧೀನದ ‘ಪ್ಯಾರಚೂಟ್‌ ರೆಜಿಮೆಂಟ್‌ ಟ್ರೈನಿಂಗ್‌ ಸೆಂಟರ್‌’ ಮತ್ತು ‘ಶತ್ರುಜೀತ್‌ ಆರ್ಮಿ ಪ್ರಿ-ಪ್ರೈಮರಿ ಸ್ಕೂಲ್‌’ (ಎಸ್‌ಎಪಿಪಿಎಸ್‌-ಪಿಆರ್‌ಟಿಸಿ) ಸಹಯೋಗದಲ್ಲಿ ಜೆ.ಸಿ.ನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಡೆಸ್ಕ್‌ ಕೊಡುಗೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಮೇಖ್ರಿ ವೃತ್ತದ ಸಮೀಪದ ಭಾರತೀಯ ರಕ್ಷಣೆ ಇಲಾಖೆ ಅಧೀನದ ‘ಪ್ಯಾರಚೂಟ್‌ ರೆಜಿಮೆಂಟ್‌ ಟ್ರೈನಿಂಗ್‌ ಸೆಂಟರ್‌’ ಮತ್ತು ‘ಶತ್ರುಜೀತ್‌ ಆರ್ಮಿ ಪ್ರಿ-ಪ್ರೈಮರಿ ಸ್ಕೂಲ್‌’ (ಎಸ್‌ಎಪಿಪಿಎಸ್‌-ಪಿಆರ್‌ಟಿಸಿ) ಸಹಯೋಗದಲ್ಲಿ ಜೆ.ಸಿ.ನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಡೆಸ್ಕ್‌ ಕೊಡುಗೆ ನೀಡಲಾಗಿದೆ. ಸೆಂಟರ್‌ನ ಬ್ರಿಗೇಡಿಯರ್‌ ಮತ್ತು ಎಸ್‌ಎಪಿಪಿಎಸ್‌-ಪಿಆರ್‌ಟಿಸಿ ಪೋಷಕರಾದ ಎಸ್‌.ಎಂ. ಅರ್ಜುನ್‌ ಸೆಗಾನ್‌ ಅವರು ಶುಕ್ರವಾರ ಜೆ.ಸಿ.ನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ತಲಾ ಎರಡು ಸೀಟಿನ ಹಲವು ಡೆಸ್ಕ್‌ಗಳನ್ನು ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಅವರು ಸರ್ಕಾರಿ ಶಾಲೆಯ ಪ್ರತಿಯೊಂದು ತರಗತಿ ತೆರಳಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು.

ಭಾರತೀಯ ಸೇನೆಯ ಬ್ರಿಗೇಡಿಯರ್ ಜೊತೆ ಸಂವಹನ ನಡೆಸಿದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಶತ್ರುಜೀತ್‌ ಆರ್ಮಿ ಪ್ರಿ-ಪ್ರೈಮರಿ ಸ್ಕೂಲ್‌ನ ಕರ್ನಲ್‌ ಸುರೇಶ್‌ ಹಾಗೂ ಪ್ರಾಂಶುಪಾಲರಾದ ಅನುಭಾ ಚೌಧರಿ ಉಪಸ್ಥಿತರಿದ್ದರು.