ಕ್ಷೌರದಂಗಡಿ ವಾರ್ಷಿಕೋತ್ಸವಕ್ಕೆ ಬುದ್ಧಿಮಾಂದ್ಯ ಮಕ್ಕಳಿಗೆ ಅನ್ನ ಸಂತರ್ಪಣೆ

| Published : Feb 27 2024, 01:33 AM IST

ಕ್ಷೌರದಂಗಡಿ ವಾರ್ಷಿಕೋತ್ಸವಕ್ಕೆ ಬುದ್ಧಿಮಾಂದ್ಯ ಮಕ್ಕಳಿಗೆ ಅನ್ನ ಸಂತರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗೋಪಾಲ್ ಹೊಸಳ್ಳಿ ತಮ್ಮ ನೇತ್ರಾವತಿ ಹೇರ್‌ ಡ್ರೆಸಸ್‌ನ 23ನೇ ವಾರ್ಷಿಕೋತ್ಸವ ಅಂಗವಾಗಿ ಅಂಗವಿಕಲರಿಗೆ ಉಚಿತ ಕ್ಷೌರ ಮತ್ತು ಉಚಿತ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಗಂಗಾವತಿ: ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಗೋಪಾಲ ಹೊಸಳ್ಳಿ ತನ್ನ ನೇತ್ರಾವತಿ ಹೇರ್ ಡ್ರೆಸೆಸ್‍ನ ವಾರ್ಷಿಕೋತ್ಸವ ಅಂಗವಾಗಿ ನೂರಕ್ಕೂ ಹೆಚ್ಚು ಅಂಧ, ಬುದ್ಧಿಮಾಂದ್ಯ ಮತ್ತು ಅಂಗವಿಕಲ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಿ, ಅನ್ನ ಸಂತರ್ಪಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.ಗೋಪಾಲ್ ಹೊಸಳ್ಳಿ ತಮ್ಮ ನೇತ್ರಾವತಿ ಹೇರ್‌ ಡ್ರೆಸಸ್‌ನ 23ನೇ ವಾರ್ಷಿಕೋತ್ಸವ ಅಂಗವಾಗಿ ಅಂಗವಿಕಲರಿಗೆ ಉಚಿತ ಕ್ಷೌರ ಮತ್ತು ಉಚಿತ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸತತ 23 ವರ್ಷಗಳಿಂದ ಉಚಿತ ಕ್ಷೌರ ಮಾಡುವ ಸೇವೆ ಮುಂದುವರಿಸಿಕೊಂಡು ಬಂದಿದ್ದಾರೆ. ತಾಲೂಕಿನ ದಾಸನಾಳ ಗ್ರಾಮದಲ್ಲಿರುವ ಅಂಧ ಮಕ್ಕಳ ವಸತಿ ನಿಲಯದ ವಿದ್ಯಾರ್ಥಿಗಳು, ಲಯನ್ಸ್ ಬುದ್ಧಿಮಾಂದ್ಯ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಅಂಗವಿಕಲರಿಗೆ ಉಚಿತ ಕ್ಷೌರ ಮಾಡಿದರು.ಈ ಸಂದರ್ಭದಲ್ಲಿ ಆನಂದ, ಶಿವಕುಮಾರ, ಶ್ರೀನಿವಾಸ, ಕಾಳಿಂಗ, ಸಂತೋಷ ಇದ್ದರು.